• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನರ್ಹ ಶಾಸಕರಿಗೆ ಸಿಗಲಿದೆ ಸಚಿವ ಸ್ಥಾನ: ಸುಳಿವು ನೀಡಿದ ಶ್ರೀನಿವಾಸ್ ಪ್ರಸಾದ್

|

ಮೈಸೂರು, ಆಗಸ್ಟ್ 23: "ಸ್ವಇಚ್ಚೆಯಿಂದ ಬಂದಿರುವ 17 ಶಾಸಕರೂ ಈಗ ಮೂಲ ಬಿಜೆಪಿಗರೇ. ಮುಂದಿನ ಚುನಾವಣೆಯನ್ನು ಅವರು ಬಿಜೆಪಿ ಚಿಹ್ನೆಯಿಂದಲೇ ಎದುರಿಸಬೇಕು. ಅನರ್ಹರಾಗಿರುವ 17 ಜನರಿಗೂ ಮಂತ್ರಿ ಸ್ಥಾನ ಸಿಗಲಿದೆ" ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.

ಅನರ್ಹ ಶಾಸಕರ ವಿಚಾರದಲ್ಲಿ ಯಡಿಯೂರಪ್ಪ ಕೈಬಿಟ್ಟ ಹೈಕಮಾಂಡ್?

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅನರ್ಹ ಶಾಸಕರಿಗೆ ಸುಪ್ರೀಂ ತೀರ್ಪಿನ ಬಳಿಕ 10 ದಿನದಲ್ಲಿ ಮಂತ್ರಿ ಸ್ಥಾನ ನೀಡಲಾಗುವುದು. ಈ ವಿಚಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸದ್ಯ ಅರ್ಧ ಕ್ಯಾಬಿನೆಟ್ ರಚನೆಯಾಗಿದೆ. ಮುಂದಿನ ಹಂತದಲ್ಲಿ ಇನ್ನುಳಿದ ಸಚಿವ ಸ್ಥಾನಗಳಿಗೆ ನೇಮಕ ನಡೆಯಲಿದೆ. ಆ ಸಂದರ್ಭದಲ್ಲಿ ಅನರ್ಹ ಶಾಸಕರನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು" ಎಂದರು.

   Sushma Swaraj : ಸುಷ್ಮಾ ಸ್ವರಾಜ್ ಕಳೇಬರಕ್ಕೆ ಹೆಗಲಾದ ಬಿಜೆಪಿ ನಾಯಕರು | ವೈರಲ್ ವಿಡಿಯೋ

   "ಮುಂದಿನ ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಮೈಸೂರು ಭಾಗಕ್ಕೂ ಸಚಿವ ಸ್ಥಾನ ದೊರೆಯಲಿದೆ. ಮೂಲ ಅಥವಾ ವಲಸಿಗರ ಪೈಕಿ ಯಾರಿಗೆ ಎಂಬುದು ಮುಂದಿನ ಹಂತದಲ್ಲಿ ಗೊತ್ತಾಗಲಿದೆ. ಆ ಸಂದರ್ಭದಲ್ಲಿ ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳಲಾಗುವುದು. ಸಂಪುಟ ರಚನೆ ಸಂದರ್ಭದಲ್ಲಿ ಭಿನ್ನಮತ ಸಹಜ. ಯಡಿಯೂರಪ್ಪ ಅವರು ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಕಾನೂನು ಪ್ರಕಾರ ಸಂಪುಟ ರಚನೆಯಲ್ಲಿ ಮುಖ್ಯಮಂತ್ರಿಗಳಿಗೆ ಪರಮಾಧಿಕಾರ ಇದೆ. ಆದರೆ ಯಡಿಯೂರಪ್ಪ ಈಗಿನ ಪರಿಸ್ಥಿತಿಯಲ್ಲಿ ಹೈಕಮಾಂಡ್ ನೊಂದಿಗೆ ಚರ್ಚಿಸಿಯೇ ತೀರ್ಮಾನ ತೆಗೆದುಕೊಳ್ಳಬೇಕಿದೆ" ಎಂದರು.

   ಅತೃಪ್ತರ ಕಾಲೆಳೆದ ದೆಹಲಿ ವಾರ್ತೆ ಜಾಹೀರಾತು, ಏನಿದರ ಹಕೀಕತ್ತು

   ಚಿದಂಬರಂ ಬಂಧನ ವಿಚಾರ ಕುರಿತು ಪ್ರತಿಕ್ರಿಯಿಸಿ, "ಚಿದಂಬರಂ ಬಂಧನ ರಾಜಕೀಯ ದ್ವೇಷದಿಂದ ಕೂಡಿದ್ದಲ್ಲ. ಅಂದು ಸಿಬಿಐ ಕಟ್ಟಡ ಉದ್ಘಾಟಿಸಿದ್ದ ಚಿದಂಬರಂ, ಇಂದು ಅದೇ ಕಟ್ಟಡದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಬದುಕಿನಲ್ಲಿ ಇಂತಹ ಸನ್ನಿವೇಶ ಸೃಷ್ಟಿಯಾಗುತ್ತವೆ" ಎಂದಷ್ಟೇ ಹೇಳಿದರು.

   English summary
   MP Shrinivas Prasad reacted on BJP cabinet expansion and disqualified MLAs issue. He said that, The disqualified 17 will get a ministerial seat.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X