ದಸರಾ ಬಳಿಕ ಮೈಸೂರು ರಿಂಗ್‌ ರಸ್ತೆಗೆ ಹೊಸ ‘ಬೆಳಕು’

ಮೈಸೂರು, ಅ.16: ನಗರದ ಹೊರವಲಯದ ರಿಂಗ್ ರಸ್ತೆಗಳಿಗೆ ನವೆಂಬರ್‌ 30ರೊಳಗೆ ಬೀದಿ ದೀಪ ಅಳವಡಿಸುವ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ದಸರಾ ಮಹೋತ್ಸವದ ಅಂಗವಾಗಿ ನಗರ ಪ್ರಮುಖ ವೃತ್ತಗಳಿಗೆ ದೀಪಾಲಂಕಾರ ಅಳವಡಿಸಲಾಗಿತ್ತು. 124 ಕಿಮೀ ರಸ್ತೆಗಳಿಗೂ ಹಾಗೂ 96 ವೃತ್ತಗಳಿಗೆ ಆಕರ್ಷಕ ದೀಪಾಲಂಕಾರ ಮಾಡಲಾಗಿತ್ತು. ಇದು ಪ್ರವಾಸಿಗರನ್ನು ಸಾಕಷ್ಟು ಆಕರ್ಷಿಸಿತ್ತು. ಆದರೆ, ರಿಂಗ್ ರಸ್ತೆ ಮಾತ್ರ ಕತ್ತಲಲ್ಲೇ ಇತ್ತು. ಇದರಿಂದ ಅಪರಾಧ ಕೃತ್ಯಗಳು ಹೆಚ್ಚಾಗಿದ್ದವು. ಅಲ್ಲದೆ, ಅನಗತ್ಯ ಕಸಗಳನ್ನು ರಿಂಗ್‌ರಸ್ತೆಗೆ ತಂದು ಸುರಿಯುತ್ತಿದ್ದರು. ಇದನ್ನೆಲ್ಲಾ ಗಮನಿಸಿದ ಸಂಸದರು ಇದೀಗ ರಿಂಗ್ ರಸ್ತೆಯ ಬೀದಿದೀಪಗಳನ್ನು ದುರಸ್ತಿ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ.

ರಿಂಗ್ ರಸ್ತೆ ಕೆಲವು ವರ್ಷಗಳಿಂದ ಕತ್ತಲಲ್ಲೇ ಇದೆ. ಮುಡಾ ಹಾಗೂ ನಗರಪಾಲಿಕೆ ತಾರತಮ್ಯ ನೀತಿಯಿಂದ ಬೆಳಕಿನ ಭಾಗ್ಯ ಮಾತ್ರ ಸಿಕ್ಕಿರಲಿಲ್ಲ. ರಿಂಗ್ ರಸ್ತೆ ನಮಗೆ ಬರುವುದಿಲ್ಲ ಎಂದು ನಗರಪಾಲಿಕೆ, ಅನುದಾನ ಇಲ್ಲ ಅಂತ ಮುಡಾ ದುರಸ್ತಿ ಕಾಮಗಾರಿಗೆ ಮುಂದಾಗಿರಲಿಲ್ಲ. ಜೊತೆಗೆ ರಿಂಗ್ ರಸ್ತೆಯಲ್ಲಿನ ಹೆಗ್ಗಣಗಳು ಬಿಲ ತೋಡಿ ವೈರ್‌ಗಳನ್ನು ಕಚ್ಚಿ ಹಾಳು ಮಾಡಿದ್ದವು. ಇದರಿಂದ ರಿಂಗ್ ರಸ್ತೆಯ ಬೀದಿದೀಪಗಳು ದುರಸ್ತಿಗೆ ಬಂದಿದ್ದವು.

MP Pratap Simha assurance on Street Light For Mysore Ring Road

''42.5 ಕಿ.ಮೀ. ಉದ್ದದ ರಿಂಗ್ ರಸ್ತೆಯುದ್ದಕ್ಕೂ ಗುಂಡಿ ತೆಗೆದು ಅಂಡರ್ ಗ್ರೌಂಡ್ ಕೇಬಲ್ ಹಾಕಿ, ಎಲ್ಇಡಿ ಬಲ್‌ಗಳನ್ನು ಅಳವಡಿಸಲು ಮುಡಾದಿಂದ 12 ಕೋಟಿ ರೂಪಾಯಿ ಮಂಜೂರು ಮಾಡಿಸಲಾಗಿದೆ. ಪಾಲಿಕೆ ಇದರ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡು ಸೆಸ್ಕ್‌ಗೆ ಪ್ರತಿ ತಿಂಗಳೂ ರಿಂಗ್ ರಸ್ತೆ ದೀಪಗಳ ವಿದ್ಯುತ್ ಬಿಲ್ ಪಾವತಿಸುತ್ತದೆ. ಅದರಂತೆ ಎರಡು ಬಾರಿ ಟೆಂಡರ್ ಕರೆದಾಗ ಒಬ್ಬರೇ ಪಾಲ್ಗೊಂಡಿದ್ದರು. ಹಾಗಾಗಿ ಪಾಲಿಕೆ ಅಧಿಕಾರಿಗಳು ಅದೇ ವ್ಯಕ್ತಿಗೆ ಕಾಮಗಾರಿಯನ್ನು ಒಪ್ಪಿಸಿದ್ದಾರೆ. ಸದ್ಯ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸಲಾಗಿದೆ. ಹಾಳಾಗಿರುವ ಕಂಬಗಳನ್ನು ಸರಿಪಡಿಸಿ, ಎಲ್ಇಡಿ ಬಲ್ಬ್‌ ಅಳವಡಿಸುವ ಕೆಲಸ ಶೀಘ್ರದಲ್ಲೇ ಆರಂಭವಾಗಲಿದೆ,'' ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+