ಮೈಸೂರು: ಮಿದುಳು ಜ್ವರಕ್ಕೆ ಮೊರಾರ್ಜಿ ದೇಸಾಯಿ ಶಾಲೆ ಬಾಲಕಿ ಬಲಿ
ಮೈಸೂರು,ಫೆಬ್ರವರಿ, 20: ಮಿದುಳು ಜ್ವರ ಕಾಣಿಸಿಕೊಂಡ ಪರಿಣಾಮ ಯಾವ ಚಿಕಿತ್ಸೆಗೂ ಸ್ಪಂದಿಸದ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿಯೊಬ್ಬಳು ಮೃತಪಟ್ಟಿದ ಘಟನೆ ಕೆ.ಆರ್.ನಗರ ತಾಲೂಕಿನ ಭೇರ್ಯದಲ್ಲಿ ನಡೆದಿದೆ.
ಭೇರ್ಯದಲ್ಲಿ ಟೈಲರ್ ಆಗಿ ಕೆಲಸ ಮಾಡುವ ಮಂಜು ಎಂಬುವರ ಮಗಳು ಅಂಕಿತ (12) ಮೃತಪಟ್ಟ ದುರ್ದೈವಿ. ಈಕೆ ಅರಕೆರೆ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದಳು.[ಮಂಡ್ಯ ಮೊರಾರ್ಜಿ ದೇಸಾಯಿ ಶಾಲೆಯ 3 ಮಕ್ಕಳನ್ನು ನೋಡಿದ್ದೀರಾ?]

ಅಂಕಿತಳಾಗೆ ಕೆಲ ದಿನಗಳಿಂದ ಆಗಾಗ ಜ್ವರ ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ ಸ್ಥಳೀಯ ಆಸ್ಪತ್ರೆಯ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆದಿದ್ದಳು. ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕಳುಹಿಸಲಾಗಿತ್ತು. ವೈದ್ಯರು ಪರೀಕ್ಷೆ ಮಾಡಿ ನೋಡಿದಾಗ ಮಿದುಳು ಜ್ವರ ಇರುವುದು ತಿಳಿದು ಬಂದಿದೆ. ತಕ್ಷಣ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಅಂಕಿತಾ ಮೃತಪಟ್ಟಿದ್ದಾಳೆ.[ವಸತಿಶಾಲೆ ವಿದ್ಯಾರ್ಥಿಗಳ ಪರಿಸರ ಕಾಳಜಿಗೆ ನಮ್ಮದೊಂದು ಸಲಾಂ!]
ಸುದ್ದಿ ತಿಳಿದ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಡಾ. ಗುರುಶಾಂತಪ್ಪ ಮೃತ ಬಾಲಕಿಯ ಕುಟುಂಬದವರಿಗೆ ಸಾಂತ್ವನ ಹೇಳಿ ಚಿಕಿತ್ಸೆಯ ವೆಚ್ಚವನ್ನು ಮತ್ತು ಇಲಾಖೆಯಿಂದ ಸೂಕ್ತ ಪರಿಹಾರವನ್ನು ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ವಸತಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ನುರಿತ ವೈದ್ಯರಿಂದ ತಪಾಸಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.[ಕಾಣೆಯಾದ ಕಲಬುರಗಿಯ ಬಾಲಕನನ್ನು ಹುಡುಕಿಕೊಡಿ]
ನಾಯಿಬೆಲದಕಾಯಿ ತಿಂದು ಸಾವನ್ನಪ್ಪಿದ ಕುರಿಗಳು
ಮೈಸೂರು,ಫೆಬ್ರವರಿ,20: ವಿಷಪೂರಿತ ನಾಯಿ ಬೆಲದಕಾಯಿ ತಿಂದ ಸುಮಾರು ಹದಿನೈದಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಘಟನೆ ಮೈಸೂರಿಗೆ ಸಮೀಪದ ಸಾತಗಳ್ಳಿ ಗ್ರಾಮದಲ್ಲಿ ನಡೆದಿದೆ.

ಈ 15 ಕುರಿಗಳನ್ನು ಕಳೆದುಕೊಂಡ ಸಾತಗಳ್ಳಿ ಗ್ರಾಮದ ದ್ಯಾವಣ್ಣ ಅವರು ಸುಮಾರು 60 ಕುರಿಗಳನ್ನು ಸಾಕಿದ್ದರು. ಕೆಲವು ಕುರಿಗಳ ಗಂಟಲಲ್ಲಿ ಬೀಜ ಸಿಕ್ಕಿಕೊಂಡ ಪರಿಣಾಮ ಮೃತಪಟ್ಟಿದ್ದರೆ, ಇನ್ನೂ ಕೆಲವು ಕುರಿಗಳು ವಿಷಪೂರಿತವಾದ ಈ ಬೆಲದಕಾಯಿ ತಿಂದ ಪರಿಣಾಮ ಸಾವನ್ನಪ್ಪಿವೆ.[ಮಂಡ್ಯದಲ್ಲಿ ಮನುಷ್ಯ ರೂಪದ ಕುರಿಮರಿ ಜನನ!]
ಸಾಮಾನ್ಯವಾಗಿ ನಾಯಿಬೆಲದ ಕಾಯಿಗಳು ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಬೆಳೆಯುತ್ತವೆ. ಆಗ ಕೆಲವು ಕಾಯಿಗಳು ಅಲ್ಲಲ್ಲಿ ಉದುರುತ್ತವೆ. ಈ ಕಾಯಿ ತಿಂದ ಮನುಷ್ಯನೇ ಆಗಲಿ ಅಥವಾ ಪ್ರಾಣಿಯೇ ಆಗಲಿ ಸಾವನ್ನಪ್ಪುತ್ತಾರೆ ಇದು ಈ ವಿಷಕಾರಿ ನಾಯಿ ಬೆಲದಕಾಯಿಯ ಗುಣವಾಗಿದೆ.












Click it and Unblock the Notifications