ಮೈಸೂರು ದಸರಾದಲ್ಲಿದೆ ಸಂಚಾರಿ ಎಟಿಎಂ

ಇಂಡಿಯನ್ ಓವರ್ ಸಿಸ್ ಬ್ಯಾಂಕ್ ಈ ಸಂಚಾರಿ ಎಟಿಎಂ ಕೇಂದ್ರವನ್ನು ದಸರಾಕ್ಕೆ ಆಗಮಿಸುವ ಪ್ರವಾಸಿಗರಿಗಾಗಿಯೇ ಪ್ರಾರಂಭಿಸಿದೆ. ಒಂದು ಬಸ್ ನಲ್ಲಿ ಎಟಿಎಂ ಯಂತ್ರ ಆಳವಡಿಸಲಾಗಿದ್ದು, ಇದು ನಗರ ಪ್ರದಕ್ಷಿಣೆ ಹಾಕುತ್ತದೆ.
ಸೆ.28ರಂದು ಈ ಎಟಿಎಂ ಸೇವೆಗೆ ಚಾಲನೆ ನೀಡಲಾಗಿದೆ. ಅ.15ರವರೆಗೆ ನಗರದ ವಿವಿಧ ಪ್ರದೇಶಗಳಲ್ಲಿ ಬೆಳಗ್ಗೆ 7ರಿಂದ ರಾತ್ರಿ 10 ಗಂಟೆ ವರೆಗೆ ಈ ಎಟಿಎಂ ಸಂಚರಿಸಲಿದೆ. ಸದ್ಯ ಪ್ರತಿದಿನ 60 ರಿಂದ 80 ಜನರು ಸಂಚಾರಿ ಎಟಿಎಂಗೆ ಭೇಟಿ ನೀಡುತ್ತಿದ್ದಾರೆ.
ಈ ಸಂಚಾರಿ ಎಟಿಎಂ ಬಸ್ ಗೆ ಮಾರ್ಗಸೂಚಿ ರಚಿಸಲಾಗಿದೆ. ಅದರಂತೆ ನಗರದ ಪ್ರಮುಖ ಪ್ರವಾಸಿ ಸ್ಥಳಗಳು ಸೇರಿದಂತೆ ಅಲ್ಲಲ್ಲಿ ನಿಂತಿರುತ್ತದೆ. ಒಂದು ಸ್ಥಳದಲ್ಲಿ ಎಟಿಎಂ ಸುಮಾರು ಎರಡು ಗಂಟೆ ನಿಂತಿರುತ್ತದೆ.
ಮೈಸೂರು ಮಹಾನಗರ ಪಾಲಿಕೆ ಈ ಸಂಚಾರಿ ಎಟಿಎಂ ಕೇಂದ್ರಕ್ಕೆ ನಗರದಲ್ಲಿ ಸಂಚರಿಸಲು ಅನುಮತಿ ನೀಡಿದೆ. ಮೈಸೂರು ಅರಮನೆಯ ಎಲ್ಲಾ ದ್ವಾರಗಳ ಬಳಿ ಪಾರ್ಕಿಂಗ್ ಮಾಡಲು ಅವಕಾಶ ಕಲ್ಪಿಸಿದೆ.
ಎಲ್ಲಿರುತ್ತದೆ ಎಟಿಎಂ : ಸಂಚಾರಿ ಎಟಿಎಂ ಜೆಎಲ್ ಬಿ ರಸ್ತೆ, ಧನ್ವಂತರಿ ರಸ್ತೆ, ಚಾಮರಾಜ ರಸ್ತೆ, ದೇವರಾಜ ಅರಸ್ ರಸ್ತೆ, ದಸರಾ ವಸ್ತು ಪ್ರದರ್ಶನ ಮೈದಾನ, ಚಾಮಂಡಿ ಬೆಟ್ಟದಲ್ಲಿ ಪ್ರವಾಸಿಗರಿಗೆ ಲಭ್ಯವಿದೆ.
ಪ್ರತಿ ದಿನ ಸಂಚಾರಿ ಎಟಿಎಂನಿಂದ ಸುಮಾರು 9 ಲಕ್ಷ ರೂ. ಹಣ ಪಡೆಯುವ ವ್ಯವಸ್ಥೆ ಮಾಡಬೇಕಾಗಿದೆ. ದಸರಾದಲ್ಲಿ ತುರ್ತು ಹಣ ಬೇಕಾದಾಗ ನಿಮ್ಮ ಹತ್ತಿರದಲ್ಲಿ ಸಂಚಾರಿ ಎಟಿಎಂ ಎಲ್ಲಿಗೆ ಎಂದು ಒಮ್ಮೆ ಗಮನಿಸಿ.












Click it and Unblock the Notifications