• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶ್ವನಾಥ್‌ಗೆ ಸಚಿವ ಸ್ಥಾನ; ಸಾ. ರಾ. ಮಹೇಶ್‌ ಸರಣಿ ಟ್ವೀಟ್‌

By ಮೈಸೂರು ಪ್ರತಿನಿಧಿ
|

ಮೈಸೂರು, ಜನವರಿ 08: ಜೆಡಿಎಸ್‌ ಶಾಸಕ ಸಾ. ರಾ. ಮಹೇಶ್‌ ಮತ್ತು ಬಿಜೆಪಿ ನಾಯಕ, ವಿಧಾನ ಪರಿಷತ್‌ ಸದಸ್ಯ ಹೆಚ್‌. ವಿಶ್ವನಾಥ್‌ ನಡುವಿನ ವಾಕ್ಸಮರ ಮುಂದುವರೆದಿದೆ. ವಿಶ್ವನಾಥ್ ಸಚಿವರಾಗುವ ಕುರಿತು ಸಾ. ರಾ. ಮಹೇಶ್ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ವಿಧಾನ ಪರಿಷತ್‌ ಸದಸ್ಯ ಹೆಚ್‌. ವಿಶ್ವನಾಥ್‌ ಜೆಡಿಎಸ್‌ ಟೀಕಿಸಿದ್ದರು. ಸಾ. ರಾ. ಮಹೇಶ್ ಇದಕ್ಕೆ ಅಸಮಾಧಾನಗೊಂಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ್ದ ವಿಶ್ವನಾಥ್‌, "ಜೆಡಿಎಸ್‌ ಪಕ್ಷವು ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ಮಗುವಿದ್ದಂತೆ. ಯಾರು ವಿಠಾಯಿ ತೋರಿಸುತ್ತಾರೋ ಅವರ ಕಡೆಗೆ ಹೋಗುತ್ತಾರೆ" ಎಂದು ಟೀಕಿಸಿದ್ದರು.

ಜೆಡಿಎಸ್ ಮಗುವಿನಂತೆ ಮಿಠಾಯಿ ತೋರಿಸಿದ ಕಡೆ ಹೋಗುತ್ತದೆ

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಸಾ. ರಾ. ಮಹೇಶ್ ವಿಶ್ವನಾಥ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. "ಬೊಂಬಾಯಿ ಮಿಠಾಯಿ ವಿಶ್ವನಾಥ್ ಅವರ ನಾಲಿಗೆಗೆ ಇನ್ನೊಬ್ಬರನ್ನು ವ್ಯಕ್ತಿಗತವಾಗಿ ಜರಿಯುವ ಹಕ್ಕಾದರೂ ಇದೆಯಾ? ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ" ಎಂದು ಟಾಂಗ್ ಕೊಟ್ಟಿದ್ದಾರೆ.

ಮೈಸೂರು ಹೈಕಮಾಂಡ್; ಜಿಟಿಡಿಗೆ ಸಾ. ರಾ. ಮಹೇಶ್ ಪ್ರತಿಕ್ರಿಯೆ!

ಬೊಂಬಾಯಿ ಮಿಠಾಯಿ ವಿಶ್ವನಾಥ್

'ಬೊಂಬಾಯಿ ಮಿಠಾಯಿ ವಿಶ್ವನಾಥ್' ಎಂದು ಸಾ. ರಾ. ಮಹೇಶ್ ಅವರು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರನ್ನು ಟೀಕಿಸಿದ್ದಾರೆ.

ಮಂತ್ರಿಯಾಗುವ ತಿರುಕನ ಕನಸು

"ಬೊಂಬಾಯಿ ಮಿಠಾಯಿ ರುಚಿ ಸವೆದಿದ್ದು ಮಂತ್ರಿಯಾಗುವ ತಿರುಕನ ಕನಸು ಕಾಣುತ್ತಿದ್ದಾರೆ" ಎಂದು ಸಾ. ರಾ. ಮಹೇಶ್ ಹೆಚ್. ವಿಶ್ವನಾಥ್ ಅವರನ್ನು ಲೇವಡಿ ಮಾಡಿದ್ದಾರೆ.

ಭಿಕ್ಷುಕನಾಗಿರುವ ವಿಶ್ವನಾಥ್

"ಎಂದೋ ಭಿಕ್ಷುಕನಾಗಿರುವ ವಿಶ್ವನಾಥ್ ಎರಡು ಬಾರಿ ಮುಖ್ಯಮಂತ್ರಿಯಾದವರ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳದಿದ್ದರೆ ತಕ್ಕಶಾಸ್ತಿ ಮಾಡಬೇಕಾಗುತ್ತದೆ ಎಚ್ಚರ" ಎಂದು ಸಾ. ರಾ. ಮಹೇಶ್ ಹೇಳಿದ್ದಾರೆ.

ಹೆಚ್. ವಿಶ್ವನಾಥ್ ಹೇಳಿದ್ದೇನು?

ಹೆಚ್. ವಿಶ್ವನಾಥ್ ಹೇಳಿದ್ದೇನು?

ಮೈಸೂರಿನಲ್ಲಿ ಮಾತನಾಡಿದ್ದ ವಿಶ್ವನಾಥ್, "ಜೆಡಿಎಸ್ ಪಕ್ಷವೆಂಬುದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಒಂದು ಮಗು. ಆ ಮಗುವಿಗೆ ಯಾರು ಮಿಠಾಯಿ ತೋರಿಸುತ್ತಾರೋ ಅವರ ಕಡೆ ಮಗು ಹೋಗುತ್ತದೆ. ಹೀಗಾಗಿ ಅವರ ಬಗ್ಗೆ ಹೆಚ್ಚು ಮಾತನಾಡುವುದು ಬೇಡ" ಎಂದು ಹೇಳಿದ್ದರು.

English summary
Former minister and JD(S) MLA Sa Ra Mahesh tweet against BJP leader H. Vishwanath who criticized party as child.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X