• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಾವ ಜವಾಬ್ದಾರಿ ಕೊಟ್ಟರೂ ನಿಭಾಯಿಸ್ತೀನಿ: ಶಾಸಕ ರಾಮ್ ದಾಸ್

|

ಮೈಸೂರು, ಜುಲೈ 27: "ಬಿ.ಎಸ್. ಯಡಿಯೂರಪ್ಪನವರು ಸಿಎಂ ಆಗಿರುವುದು ನಮಗೆಲ್ಲ ಖುಷಿಯಾಗಿದೆ. ನನಗೆ ಅವರ ಸಂಪುಟದಲ್ಲಿ ಯಾವ ಜವಾಬ್ದಾರಿ ಕೊಟ್ಟರೂ ನಿಭಾಯಿಸಲು ಸಿದ್ಧ" ಎಂದಿದ್ದಾರೆ ಶಾಸಕ ಎಸ್.ಎ ರಾಮದಾಸ್.

 ಬಹಿರಂಗ ಚರ್ಚೆಗೆ ಬಿಜೆಪಿ ಸದಾ ಸಿದ್ಧ : ಶಾಸಕ ರಾಮ್ ದಾಸ್ ಬಹಿರಂಗ ಚರ್ಚೆಗೆ ಬಿಜೆಪಿ ಸದಾ ಸಿದ್ಧ : ಶಾಸಕ ರಾಮ್ ದಾಸ್

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದೆ. ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿರ್ವಹಿಸುತ್ತೇನೆ. ಪಕ್ಷ ಯಾವುದೇ ನಿರ್ಣಯ ಕೈಗೊಂಡರೂ ನಾನು ಬದ್ಧ. ರಾಜಕಾರಣದಲ್ಲಿ ನಾನು ಯಾವತ್ತೂ ಯಾವುದೇ ರೀತಿ ನಿರೀಕ್ಷೆ ಇಟ್ಟುಕೊಂಡಿಲ್ಲ" ಎಂದರು.

"1994ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಟಿಕೆಟ್ ಕೇಳಿದರೂ ಪಕ್ಷ ನನಗೆ ಸ್ಪರ್ಧಿಸಲು ಅವಕಾಶ ನೀಡಿತ್ತು. 2008ರಲ್ಲಿ ಸಂಪುಟ ಸೇರುವ ಅವಕಾಶ ತಪ್ಪಿತ್ತು. ಇದೀಗ ಯಡಿಯೂರಪ್ಪ ಕೈ ಬಲಪಡಿಸುವುದು ನಮ್ಮ ಗುರಿ. ಬಿಜೆಪಿ ಸರ್ಕಾರ ಜನಪರವಾಗಿ ಕೆಲಸ ಮಾಡಲಿದೆ" ಎಂದು ಭರವಸೆ ನೀಡಿದರು.

English summary
"Yeddyurappa is our new CM and I am ready to handle any responsibilty given by the party' said MLA Ramdas in Mysuru. "I wont expect anything in politics. But i will honestly work for the party" he added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X