ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆ ಮೇಲೆ ಗರಂ ಆದ ಶಾಸಕ

ಮೈಸೂರು, ಏಪ್ರಿಲ್ 9: "ಕೊರೊನಾ ವ್ಯಾಪಕವಾಗಿ ಹರಡಲು ಕಾರಣವಾದ ಜುಬಿಲಿಯಂಟ್ ಕಾರ್ಖಾನೆ ಪರವಾಗಿ ಒತ್ತಡ ಬರುತ್ತಿದೆ. ಒತ್ತಡ ಹಾಕುತ್ತಿರುವವರಲ್ಲಿ ರಾಜಕಾರಣಿಗಳೂ ಇದ್ದಾರೆ, ಉದ್ಯಮಿಗಳೂ ಇದ್ದಾರೆ. ನಾನು ಯಾರ ಒತ್ತಡಕ್ಕೂ ಮಣಿಯುವ ಪ್ರಮೇಯವೇ ಇಲ್ಲ" ಎಂದು ಹೇಳಿದ್ದಾರೆ ನಂಜನಗೂಡು ಶಾಸಕ ಹರ್ಷವರ್ಧನ್.

"ಒತ್ತಡ ಹಾಕುತ್ತಿರುವವರು ಯಾರು ಎಂಬುದನ್ನು ನಾನು ಹೇಳುವುದಿಲ್ಲ. ಕೊರೊನಾ ಹರಡುವಲ್ಲಿ ಜುಬಿಲಿಯಂಟ್ ನೇರವಾಗಿ ನಿರ್ಲಕ್ಷ್ಯ ವಹಿಸಿದೆ. ಫೆಬ್ರವರಿ ತಿಂಗಳಲ್ಲೇ ಚೀನಾದಿಂದ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಂಡಿದೆ. ಆ ವೇಳೆ ಕಾರ್ಖಾನೆ ಯಾವುದೇ ಮುಂಜಾಗ್ರತಾ ಕ್ರಮ ಕೈಕೊಂಡಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕಾರ್ಖಾನೆ ನಡೆಸುವುದು ಬೇಡ" ಎಂದು ಹೇಳಿದ್ದಾರೆ.

MLA Harshavardhan Angry Over Jubilant Factory In Nanjanagudu

ಇದೇ ಸಂದರ್ಭ ಕಾರ್ಖಾನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅವರು, "ಕಾರ್ಖಾನೆಯವರಿಗೆ ಸೋಂಕಿಗಿಂತ ಹಣ ಮಾಡುವುದೇ ಮುಖ್ಯವಾಗಿದೆ. ಹೆಣಗಳ ಮೇಲೆ ಲಾಭ ಮಾಡಬಾರದು. ಕ್ಷೇತ್ರದ ಶಾಸಕನಾಗಿ ಇದನ್ನು ನಾನು ಸಹಿಸುವುದಿಲ್ಲ" ಎಂದು ಗರಂ ಆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+