ಬಿಜೆಪಿ ಸೇರುವ ವದಂತಿಗೆ ತೆರೆ ಎಳೆದ ಶಾಸಕ ಅಶ್ವಿನ್ ಕುಮಾರ್
ಮೈಸೂರು, ಫೆಬ್ರವರಿ 5: ನಾನು ಜೆಡಿಎಸ್ ಬಿಟ್ಟು ಹೋಗುತ್ತೇನೆಂಬುದು ಕೇವಲ ವದಂತಿಯಷ್ಟೇ ಎಂದು ಹೇಳುವ ಮೂಲಕ ಆಪರೇಷನ್ ಕಮಲದ ವಿಚಾರವಾಗಿ ತಿ.ನರಸೀಪುರ ಶಾಸಕ ಅಶ್ವಿನ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಬಿಟ್ಟು ಹೋಗುವ ಯೋಚನೆ ಮಾಡಿಲ್ಲ. ಜೆಡಿಎಸ್ ನಿಂದ ಆಯ್ಕೆಯಾಗಿರುವ 37 ಶಾಸಕರೂ ಸೈನಿಕರಿದ್ದಂತೆ. ವೈಯಕ್ತಿಕವಾಗಿ ನನಗೆ ರಾಜಕೀಯ ಜೀವನ ನೀಡಿದ್ದು ಸಿಎಂ ಕುಮಾರಸ್ವಾಮಿ. ನಾನು ಅವರೊಂದಿಗೆ ಇದ್ದೇನೆ ಎಂದರು.

ನಾನು ಈ ಹಿಂದೆ ಫೈನಾನ್ಸ್ ಕಮಿಟಿ ಮೀಟಿಂಗ್‌ಗಾಗಿ ದೆಹಲಿಗೆ ಹೋಗಿದ್ದು ನಿಜ. ಆಗಲೂ ಸಿಎಂ ಅನುಮತಿ ಪಡೆದೇ ಹೋಗಿದ್ದೆ. ಬಿಜೆಪಿಯ ಯಾವೊಬ್ಬ ನಾಯಕರೂ ನನ್ನನ್ನು ಸಂಪರ್ಕ ಮಾಡಿಲ್ಲ. ಪಕ್ಷಾಂತರ ಮಾಡುವ ಅಗತ್ಯ ನನಗಿಲ್ಲ ಎಂದು ಹಬ್ಬಿದ ವದಂತಿಗಳಿಗೆ ತೆರೆ ಎಳೆದರು.












Click it and Unblock the Notifications