ಸಚಿವ ಮಹದೇವ ಪ್ರಸಾದ್‌ ಕಾರಿಗೆ ಬಸ್ ಡಿಕ್ಕಿ

ಮೈಸೂರು, ಏ. 22 : ಸಹಕಾರ ಮತ್ತು ಸಕ್ಕರೆ ಖಾತೆ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಕಾರಿಗೆ ಖಾಸಗಿ ಬಸ್ಸು ಡಿಕ್ಕಿ ಹೊಡೆದಿರುವ ಘಟನೆ ಟಿ.ನರಸೀಪುರ ಸಮೀಪ ನಡೆದಿದೆ. ಸಚಿವರು ಅಪಾಯದಿಂದ ಪಾರಾಗಿದ್ದು, ಬಸ್ ಚಾಲಕನಿಗೆ ಸ್ಥಳೀಯರು ಥಳಿಸಿದ್ದಾರೆ.

ಬುಧವಾರ ಬೆಳಗ್ಗೆ ಟಿ.ನರಸೀಪುರದ ಚಿಕ್ಕಳ್ಳಿ ಬಳಿ ಸಚಿವರು ತೆರಳುತ್ತಿದ್ದ ಕಾರಿಗೆ ವೇಗವಾಗಿ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ತಕ್ಷಣ ಬಸ್ ಚಾಲಕನನ್ನು ಹಿಡಿದ ಸಾರ್ವಜನಿಕರು ಆತನಿಗೆ ಥಳಿಸಿದ್ದಾರೆ.

Mahadeva Prasad

ಅಪಘಾತದಲ್ಲಿ ಸಚಿವರಿಗೆ ಯಾವುದೇ ಗಾಯಗಳಾಗಿಲ್ಲ, ಅದೇ ಕಾರಿನಲ್ಲಿ ಅವರು ಪ್ರಯಾಣ ಮುಂದುವರೆಸಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಖಾಸಗಿ ಬಸ್ ವೇಗವಾಗಿ ಬಂದ ಕಾರಣ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದೆ. ಚಾಲಕ ಸಚಿವರ ಕ್ಷಮೆ ಯಾಚಿಸಿದ್ದು, ಸಚಿವರು ಸ್ಥಳದಿಂದ ತೆರಳಿದ್ದಾರೆ. [ಸಚಿವ ಯುಟಿ ಖಾದರ್ ಕಾರು ಅಪಘಾತ]

ಸಚಿವ ಖಾದರ್ ಕಾರು ಪಲ್ಟಿಯಾಗಿತ್ತು : ಫೆಬ್ರವರಿ 23ರಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಕಾರು ಮಂಗಳೂರಿನಲ್ಲಿ ಅಪಘಾತಕ್ಕೀಡಾಗಿತ್ತು. ಕಾರು ಚಾಲಕ ಮೋಹನ್ ಅಪಘಾತದಲ್ಲಿ ಗಾಯಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+