• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡಿ.23ರಿಂದ ಬೆಂಗಳೂರು-ಮೈಸೂರು ಮೆಮು ರೈಲು ಸಂಚಾರ ಆರಂಭ

|

ಮೈಸೂರು, ಡಿಸೆಂಬರ್ 22 : ಕೆಎಸ್‍ಆರ್ ಬೆಂಗಳೂರು ಸಿಟಿ, ಮೈಸೂರು-ಕೆಎಸ್‍ಆರ್ ಬೆಂಗಳೂರು ಸಿಟಿ ನಡುವೆ ವಾರದಲ್ಲಿ ನಾಲ್ಕು ದಿನಗಳು ಮೆಮು (ಮೇನ್ ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ನೂತನ ರೈಲು ಸಂಚರಿಸಲಿದೆ.

ಸಂಜೆ ವೇಳೆ ರೈಲಿನ ಕೊರತೆ ನೀಗಿಸುವ ಸಲುವಾಗಿ ನೈರುತ್ಯ ರೈಲ್ವೆಯು ಕೇಂದ್ರೀಯ ರೈಲ್ವೆ ಮಂಡಳಿಗೆ ವಾರದಲ್ಲಿ ನಾಲ್ಕು ದಿನ ವಿಶೇಷ ರೈಲು ನೀಡುವಂತೆ ಪ್ರಸ್ತಾವ ಸಲ್ಲಿಸಿತ್ತು. ಸಾಂಪ್ರದಾಯಿಕ ವಿದ್ಯುತ್‌ ರೈಲುಗಳಲ್ಲಿ ಬೋಗಿಗಳನ್ನು ಎಳೆಯಲೆಂದು ಪ್ರತ್ಯೇಕವಾದ ಎಂಜಿನ್‌ ಇರುತ್ತದೆ. ಇವು ಹೆಚ್ಚು ಶಕ್ತಿಶಾಲಿ ಹಾಗೂ ದೂರದ ಪ್ರಯಾಣಕ್ಕೆ ಅರ್ಹವಾಗಿರುತ್ತವೆ.

ಈ ರೈಲು 12 ಕಾರುಗಳನ್ನು ಒಳಗೊಂಡಿದೆ (3 ಮೋಟಾರು ಕಾರುಗಳು ಮತ್ತು 9 ಟೈಲಿಂಗ್ ಕಾರುಗಳು ಸೇರಿದಂತೆ). ಮೆಮು ಸೇವೆಯು 110 ಕೆಎಂಪಿಎಚ್‍ವರೆಗಿನ ವೇಗ ಸಾಮರ್ಥ್ಯ. 12- ಕಾರು ರೈಲುಗಳ ಒಟ್ಟಾರೆ ಸಾಮರ್ಥ್ಯ 3500 ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಹೊಂದಲಿದೆ. ಕೃಷ್ಣದೇವರಾಯ.

ರಾಮನಗರ ಮೆಮು ರೈಲು ಡಿ.23ರಿಂದ ಮೈಸೂರಿನ ತನಕ ಸಂಚರಿಸಲಿದೆ

ನಾಯಂಡಹಳ್ಳಿ, ಜ್ಞಾನಭಾರತಿ, ಕೆಂಗೇರಿ, ಹೆಜ್ಜಾಲ, ಬಿಡದಿ, ಕೇತೋಹಳ್ಳಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಪಾಂಡವಪುರ ಮತ್ತು ಶ್ರೀರಂಗಪಟ್ಟಣದಲ್ಲಿ ಈ ರೈಲುಗಳು ನಿಲ್ಲುತ್ತವೆ.

ವಾರದಲ್ಲಿ ನಾಲ್ಕು ದಿನ ಮೆಮು ರೈಲು ಸಂಚಾರ

ವಾರದಲ್ಲಿ ನಾಲ್ಕು ದಿನ ಮೆಮು ರೈಲು ಸಂಚಾರ

ಡಿ.26ರಿಂದ ಬೆಂಗಳೂರಿನಿಂದ ಹಾಗೂ ಡಿ. 27ರಂದು ಮೈಸೂರಿನಿಂದ ಹೊಸ ರೈಲು ವಾರದಲ್ಲಿ ನಾಲ್ಕು ದಿನ ಸಂಚರಿಸಲಿದೆ. ಇದು ಬೆಂಗಳೂರಿನಿಂದ ಬುಧವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರದಂದು ಮತ್ತು ಮೈಸೂರಿನಿಂದ ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಸಂಚರಿಸುತ್ತದೆ.

ಡಿ.26ರಂದು ಬೆಂಗಳೂರನಿಂದ ಡಿ.27ರಂದು ಮೈಸೂರಿನಿಂದ ಸೇವೆ ಆರಂಭಗೊಳ್ಳಲಿದೆ.

ಡಿ.23ಕ್ಕೆ ಮೆಮು ರೈಲು ಉದ್ಘಾಟನೆ

ಡಿ.23ಕ್ಕೆ ಮೆಮು ರೈಲು ಉದ್ಘಾಟನೆ

ಡಿ.23ರ ನಾಳೆ ಸಂಸದರಾದ ಪ್ರತಾಪ್ ಸಿಂಹ ಅವರು ನೂತನ ರೈಲು ಸೇವೆಗೆ ಹಸಿರು ನಿಶಾನೆ ತೋರಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಶಾಸಕ ಎಲ್.ನಾಗೇಂದ್ರ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಸಂದೇಶ್ ನಾಗರಾಜ್, ಕೆ.ಟಿ.ಶ್ರೀಕಂಠೇಗೌಡ, ಆರ್.ಧರ್ಮಸೇನ, ಮಹಾಪೌರರಾದ ಪುಷ್ಪಲತಾ ಜಗನ್ನಾಥ್ ಉಪಸ್ಥಿತರಿರುತ್ತಾರೆ.ಎರಡೂ ಕಡೆಗಳಿಂದ ವಾರದಲ್ಲಿ 4 ದಿನಗಳವರೆಗೆ ಸೇವೆಗಳನ್ನು ವಿಸ್ತರಿಸುವುದರಿಂದ ರಾಜ್ಯ ರಾಜಧಾನಿ ಮತ್ತು ಮೈಸೂರು ನಡುವೆ ಮತ್ತೊಂದು ರೈಲು ಸಂಪರ್ಕ ಸೇವೆ ದೊರಕುವಂತಾಗಿದೆ.

ಏನಿದು ‘ಮೆಮು’ ರೈಲು?:

ಏನಿದು ‘ಮೆಮು’ ರೈಲು?:

ಮೇನ್‌ಲೈನ್‌ ಎಲೆಕ್ಟ್ರಿಕ್‌ ಮಲ್ಟಿಪಲ್‌ ಯೂನಿಟ್‌' ಸಂಕ್ಷಿಪ್ತ ರೂಪವೇ ಮೆಮು. ಅರೆನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಪ್ರಯಾಣಿಕರನ್ನು ಗಮನದಲ್ಲಿ ಇರಿಸಿಕೊಂಡು ‘ಮೆಮು' ರೈಲನ್ನು ರೈಲ್ವೆ ಇಲಾಖೆ ನಿರ್ಮಿಸಿದೆ.

‘ಮೆಮು' ರೈಲುಗಳಲ್ಲಿ ಬೋಗಿಗ ಳನ್ನು ಎಳೆಯಲು ಪ್ರತ್ಯೇಕ ಎಂಜಿನ್‌ ಇರುವುದಿಲ್ಲ. ಬದಲಿಗೆ, ವಿದ್ಯುತ್‌ ಮೋಟಾರ್ ಬೋಗಿಗಳಲ್ಲೇ ಇರುತ್ತದೆ. ಹಾಗಾಗಿ, ‘ಮೆಮು' ರೈಲುಗಳು ಸಾಂಪ್ರದಾಯಿಕ ರೈಲುಗಳಿಗಿಂತ ವೇಗವಾಗಿ ಸಂಚರಿಸುತ್ತವೆ. ಆದರೆ, ದೂರದ ಪ್ರಯಾಣ ಆಗದು.

ಬೆಂಗಳೂರು- ಮೈಸೂರನ್ನು 3.45 ನಿಮಿಷದಲ್ಲಿ ಕ್ರಮಿಸುತ್ತದೆ

ಬೆಂಗಳೂರು- ಮೈಸೂರನ್ನು 3.45 ನಿಮಿಷದಲ್ಲಿ ಕ್ರಮಿಸುತ್ತದೆ

ಬೆಂಗಳೂರಿನಿಂದ ಹೊರಡುವ ಮೆಮು ವಿಶೇಷ ರೈಲುಗಾಡಿಯು 2.55 ನಿಮಿಷಗಳಲ್ಲಿ ಬೆಂಗಳೂರು-ಮೈಸೂರು ನಡುವಿನ ದೂರವನ್ನು ಕ್ರಮಿಸುತ್ತದೆ. ಮೈಸೂರಿನಿಂದ ಬೆಂಗಳೂರಿಗೆ 3.45 ನಿಮಿಷಕ್ಕೆ ತೆಗೆದುಕೊಳ್ಳಲಿದೆ. ಈ ಮೆಮು ಸೇವೆಗಳು ಮೈಸೂರು, ಮಂಡ್ಯ, ಮದ್ದೂರು ಮತ್ತು ಚನ್ನಪಟ್ಟಣದಿಂದ ಪ್ರಯಾಣಿಸುವ ಹೆಚ್ಚಿನ ಸಂಖ್ಯೆಯ ದೈನಂದಿನ ಪ್ರಯಾಣಿಕರಿಗೆ ಬೆಂಗಳೂರಿನ ಉಪನಗರದ ಪ್ರದೇಶಗಳಾದಂತಹ ನಾಯಂಡಹಳ್ಳಿ, ಕೆಂಗೇರಿ ಮತ್ತು ಹೆಜ್ಜಾಲವನ್ನು ತಲುಪಲು ನೆರವಾಗಲಿವೆ. ಇದಲ್ಲದೆ, ಸಂಜೆಯ ಹೊತ್ತಿನಲ್ಲಿ 4 ದಿನ ಬೆಂಗಳೂರಿನಿಂದ ಮೈಸೂರಿಗೆ ದೈನಂದಿನ ಸಂಪರ್ಕವನ್ನು ಕಲ್ಪಿಸುತ್ತದೆ.

English summary
The South Western Railway (SWR) has temporarily extended the service of Bengaluru-Ramanagaram Mainline Electric Multiple Unit (MEMU) train up to Mysuru junction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X