ಮೈಸೂರು ಝೂ ಪ್ರಾಣಿಗಳಿಗೆ ಕಿರಿಕಿರಿ ನೀಡಿದ ಧ್ವನಿವರ್ಧಕಗಳು

ಮೈಸೂರು, ಆಗಸ್ಟ್ 11: ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ 125ನೇ ವರ್ಷಾಚರಣೆಗಾಗಿ ಆಗಸ್ಟ್ 10 ರಂದು ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅತಿಯಾಗಿ ಧ್ವನಿ ವರ್ಧಕ ಬಳಸಿದ ಪರಿಣಾಮ ಮೃಗಾಲಯದಲ್ಲಿದ್ದ ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಘಿದೆ ಎಂದು ಕೆಲ ಪ್ರಾಣಿಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತಗೆ ಹಲವು ಗಣ್ಯರು ಭಾಗವಹಿಸಿದ್ದ ಈ ಸಮಾರಂಭದಲ್ಲಿ ಒಟ್ಟು 8 ಧ್ವನಿವರ್ಧಕಗಳನ್ನು ಮೃಗಾಲಯ ಆಡಳಿತ ಮಂಡಳಿ ಬಳಸಿಕೊಂಡಿತ್ತು.

Loudspeakers inside Mysuru Zoo irritates it's animals

ಪ್ರಾಣಿ-ಪಕ್ಷಿಗಳಿಗೆ ಶಬ್ದ ಎಂದರೆ ಯಾವಾಗಲೂ ಕಿರಿಕಿರಿಯೇ. ಇದು ಗೊತ್ತಿದ್ದರೂ ಇಷ್ಟೊಂದು ಧ್ವನಿ ವರ್ಧಕಗಳನ್ನು ಬಳಸುವ ಅಗತ್ಯವಿತ್ತೆ ಎಂಬುದು ಹ;ವರ ಪ್ರಶ್ನೆ. ಇತ್ತೀಚೆಗಷ್ಟೇ ಮೃಗಾಲಯದಲ್ಲಿ ಜನಿಸಿದ ಪಾರ್ವತಿ ಎಂಬ ಆನೆ ಮತ್ತು ಇಲ್ಲಿಯೇ ಇರುವ ಖಡ್ಗಮೃಗಗಳಿಗೆ ತೀರಾ ಹತ್ತಿರದಲ್ಲೇ ಧ್ವನಿವರ್ಧಕಗಳನ್ನು ಇಟ್ಟಿದ್ದರಿಂದ ಪ್ರಾಣಿಗಳೆಲ್ಲ ತೀವ್ರವಾಗಿ ಭಯಗೊಂದಿದ್ದವೆಂಬುದು ಪ್ರತ್ಯಕ್ಷದರ್ಶಿಗಳ ಮಾತು.

ಮೈಸೂರಲ್ಲಿ ರಸ್ತೆ ಮೇಲೆಯೇ ಬಂದಿತ್ತು ಹುಲಿ!
ಮೃಗಾಲಯಕ್ಕೆ 125 ವರ್ಷ ತುಂಬಿದ್ದಕ್ಕಾಗಿ ಕಾರ್ಯಕ್ರಮ ಏರ್ಪಡಿಸಿದ್ದು ಮೆಚ್ಚುವ ಸಂಗತಿ, ಆದರೆ ಅದಕ್ಕಾಗಿ ಇಷ್ಟೆಲ್ಲ ಪ್ರಮಾಣದ ಧ್ವನಿ ವರ್ಧಕಗಳನ್ನು ಬಳಸುವ ಅಗತ್ಯವಿರಲಿಲ್ಲ, ಮುಂದೆ ಇಂಥ ಕಾರ್ಯಕ್ರಮ ಆಯೋಜಿಸುವಾಗ ಪ್ರಾಣಿಗಳ ಹಿತದ ಬಗ್ಗೆಯೂ ಯೋಚಿಸಬೇಕಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+