ಮಾಜಿ ಉಪಮುಖ್ಯಮಂತ್ರಿ ಮಗಳಿಗೆ ಕೊಲೆ ಬೆದರಿಕೆ
ಮೈಸೂರು, ಅಕ್ಟೋಬರ್ 25: ಮಾಜಿ ಉಪಮುಖ್ಯಮಂತ್ರಿಯೊಬ್ಬರ ಮಗಳಿಗೆ ಮಾಜಿ ಶಾಸಕರೊಬ್ಬರು ಕೊಲೆಕೊಲೆ ಬೆದರಿಕೆ ಹಾಕಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾಜಿ ಮುಖ್ಯಮಂತ್ರಿ ದಿವಂಗತ ಎಂ.ಪಿ. ಪ್ರಕಾಶ್ ಅವರ ಪುತ್ರಿ ಸುಮಾ ವಿಜಯ್ ಅವರಿಗೆ ಕೊಲೆ ಬೆದರಿಕೆ ಬಂದಿದೆ.
ಸುಮಾ ವಿಜಯ್ ರಿಗೆ ಮಾಜಿ ಶಾಸಕರೊಬ್ಬರು ಕೊಲೆ ಬೆದರಿಕೆವೊಡ್ಡಿದ್ದಾರೆ, ಅವರು ಹುಣಸೂರು ಕ್ಷೇತ್ರದ ಉಪಚುನಾವಣೆಯ ಸಂಭಾವ್ಯ ಅಭ್ಯರ್ಥಿಯೆಂದೂ ಗುರುತಿಸಿಕೊಂಡಿರುವ ಕಾರಣ ಹೆಚ್ಚು ಮಹತ್ವ ಪಡೆದಿದೆ.

ನನ್ನ ತಮ್ಮ, ಮಾಜಿ ಶಾಸಕ ಎಂ.ಪಿ.ರವೀಂದ್ರ ಹಾಗೂ ಎಚ್.ಪಿ.ಮಂಜುನಾಥ್ ಉತ್ತಮ ಒಡನಾಟ ಹೊಂದಿದ್ದರು. ನನ್ನ ತಮ್ಮ ಮೈಸೂರಿನ ವಿವಿ ಮೊಹಲ್ಲಾದಲ್ಲಿ ಪೆಂಟ್ ಹೌಸ್ ಖರೀದಿಸಿದ್ದ.
ಸ್ನೇಹಿತರಾಗಿದ್ದ ಕಾರಣಕ್ಕೆ ತಾತ್ಕಾಲಿಕವಾಗಿ ಉಳಿದುಕೊಳ್ಳಲು ಮಂಜುನಾಥ್‌ಗೆ ಬಿಟ್ಟುಕೊಟ್ಟಿದ್ದ. ಆತನ ಮರಣಾನಂತರ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದು, ಈಗ ಮನೆ ಖಾಲಿ ಮಾಡುತ್ತಿಲ್ಲ. ಮನೆ ಕೀ ಕೇಳಿದರೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಹೊರಿಸಿ ಸುಮಾ ವಿಜಯ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಅತಿಕ್ರಮ ಪ್ರವೇಶ ಸಂಬಂಧ ದೂರು- ಪ್ರತಿದೂರು ಕೂಡ ದಾಖಲಾಗಿದೆ.ಮನೆ ವಿವಾದಕ್ಕೆ ಸಂಬಂಧಿಸಿ ಈಗಾಗಲೇ ಮೂರು ದೂರುಗಳು ದಾಖಲಾಗಿದ್ದು, ಎಫ್ಐಆರ್ಗಳೂ ಆಗಿವೆ. ಎಂ.ಪಿ.ಪ್ರಕಾಶ್ ಅವರ ಪುತ್ರಿ ಸುಮಾ ವಿಜಯ್ ಈ ಸಂಬಂಧ ಮೈಸೂರಿನ ವಿ.ವಿ.ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications