ಸ್ವಾತಂತ್ರ್ಯೋತ್ಸವಕ್ಕೆ ಆಫರ್ : ಮೈಸೂರು ಸಿಲ್ಕ್ ಗೆ ಶೇ 50 ರಿಯಾಯಿತಿ
ಮೈಸೂರು, ಆಗಸ್ಟ್ 13 : ಕರ್ನಾಟಕ ರಾಜ್ಯ ರೇಷ್ಮೆ ಕೈಗಾರಿಕಾ ನಿಗಮವು(ಕೆಎಸ್ ಐಸಿ) ಸ್ವಾತಂತ್ರ್ಯೋತ್ಸಕ್ಕೆ ಶೇ 50ರಷ್ಟು ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಮಾರಾಟಕ್ಕೆ ಮುಂದಾಗಿದೆ.
ಆಗಸ್ಟ್ 15ರಂದು 9,000 ರುಪಾಯಿ ಮೌಲ್ಯದ ರೇಷ್ಮೆ ಸೀರೆಗಳನ್ನು ಶೇ 50ರಷ್ಟು ರಿಯಾಯಿತಿ ದರಕ್ಕೆ, ಅಂದರೆ 4,500 ರುಪಾಯಿಗೆ ಮಾರಲು ನಿಗಮ ಮುಂದಾಗಿದೆ. ಮೈಸೂರು, ಬೆಂಗಳೂರಿನಲ್ಲಿರುವ ಕೆಎಸ್ ಐಸಿಯ2 ಮಾರಾಟ ಕೇಂದ್ರಗಳು, ಚನ್ನಪಟ್ಟಣ ಮತ್ತು ದಾವಣಗೆರೆಯ ತಲಾ ಒಂದು ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆಗಳು ದೊರೆಯಲಿವೆ.
ಹೀಗೆ ರಿಯಾಯಿತಿ ಮಾರಾಟದ ಉದ್ದೇಶಕ್ಕಾಗಿ 10 ಸಾವಿರ ಸೀರೆಗಳನ್ನು ತಯಾರಿಸಲಾಗಿದೆ. ಈ ದಾಸ್ತಾನು ಇರುವವರೆಗೂ ಮಾರಾಟ ಇರುತ್ತದೆ. ಸಾಮಾನ್ಯ ದಿನಗಳಲ್ಲಿ ರೇಷ್ಮೆ ಸೀರೆಗಳಿಗೆ ಶೇಕಡಾ 15ರಿಂದ 30ರವರೆಗೆ ರಿಯಾಯಿತಿ ನೀಡಲಾಗುತ್ತದೆ. ಆದರೆ ಈಗ ಸ್ವಾತಂತ್ರ್ಯೋತ್ಸವದ ಕೊಡುಗೆಯಾಗಿ ಶೇ 50ರ ರಿಯಾಯಿತಿ ಬೆಲೆಯಲ್ಲಿ ಸೀರೆಗಳನ್ನು ಮಾರಾಟ ಮಾಡಲು ನಿಗಮ ನಿರ್ಧರಿಸಿದೆ.

ವರಮಹಾಲಕ್ಷ್ಮಿ ಹಬ್ಬಕ್ಕೆ ವಿಶೇಷ
ಆಗಸ್ಟ್ 21ರಂದು ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಮತ್ತೆ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆಗಳ ಮಾರಾಟ ಮಾಡಲಾಗುತ್ತದೆ. ಆ ವೇಳೆಗೆ 15,000 ರುಪಾಯಿಯ ರೇಷ್ಮೆ ಸೀರೆಗಳನ್ನು 4,500 ರುಪಾಯಿಗೆ ಮಾರಾಟ ಮಾಡಲಾಗುವುದು ಎಂದು ಈಗಾಗಲೇ ಕರ್ನಾಟ ಕರಾಜ್ಯ ರೇಷ್ಮೆ ಕೈಗಾರಿಕಾ ನಿಗಮ(ಕೆಎಸ್ ಐಸಿ ) ತಿಳಿಸಿದೆ.












Click it and Unblock the Notifications