ಕೊಚ್ಚುವೆಲಿ-ಬೆಂಗಳೂರು ರೈಲು ಮೈಸೂರು ತನಕ ವಿಸ್ತರಣೆ
ಮೈಸೂರು, ಸೆಪ್ಟೆಂಬರ್ 29 : ಕೊಚ್ಚುವೆಲಿ-ಬೆಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಮೈಸೂರಿನ ತನಕ ವಿಸ್ತರಣೆ ಮಾಡಲಾಗಿದೆ. ಹಲವು ದಿನಗಳ ಹಿಂದೆ ರೈಲು ಸಂಚಾರ ಮೈಸೂರಿಗೆ ವಿಸ್ತರಣೆ ಮಾಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿತ್ತು.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ರೈಲು ಸೇವೆ ವಿಸ್ತರಣೆಗೆ ಭಾನುವಾರ ಹಸಿರು ನಿಶಾನೆ ತೋರಿಸಿದರು. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮೈಸೂರು ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂ ನಂ 6 ರಲ್ಲಿ ನಿರ್ಮಿಸಲಾಗಿರುವ ಎಸ್ಕಲೇಟರ್ ಮತ್ತು ಕಾಯ್ದಿರಿಸಿದ ವಿಶ್ರಾಂತಿ ಕೊಠಡಿಯನ್ನು ಉದ್ಘಾಟಿಸಲಾಯಿತು.

ರೈಲು ನಂಬರ್ 16316/16315 ಕೊಚ್ಚುವೆಲಿ-ಬೆಂಗಳೂರು ರೈಲು ಮೈಸೂರಿನ ತನಕ ವಿಸ್ತರಣೆಯಾಗಿದೆ. ರೈಲು ಸಂಖ್ಯೆ 16316 ರೈಲು ಸೆಪ್ಟೆಂಬರ್ 29 ರಿಂದ, ರೈಲು ಸಂಖ್ಯೆ 16315 ಸೆಪ್ಟೆಂಬರ್ 30 ರಿಂದ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ಹೇಳಿದೆ.

ಕೊಚ್ಚುವೆಲಿ-ಬೆಂಗಳೂರು ನಡುವೆ ಸಂಚಾರ ನಡೆಸುವ ರೈಲಿನ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಈ ರೈಲಿನಲ್ಲಿ ಎಸಿ2 ಟೈರ್ 1, ಎಸಿ 3 ಟೈರ್ 3, ಸ್ಲಿಪರ್ ಕ್ಲಾಸ್ 13 ಮತ್ತು ಸಾಮಾನ್ಯ ದರ್ಜೆಯ 3 ಕೋಚ್‌ಗಳಿವೆ.












Click it and Unblock the Notifications