• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಪ್ರಧಾನಿ ಮೋದಿಗಾಗಿ ತಯಾರಾದ ಕೆಂಪೇಗೌಡ ಪೇಟ; ವಿಶೇಷತೆ ಏನು?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್‌, 07: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಲು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬನಾರಸ್ ಬಟ್ಟೆಯಿಂದ ಮಾಡಿದ ಪೇಟವೊಂದು ಸಿದ್ಧವಾಗುತ್ತಿದೆ.

ನವೆಂಬರ್‌ 11ರಂದು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ತಲೆ ಎತ್ತಲಿರುವ ನಾಡಪ್ರಭು, ರಾಜಾಧಾನಿ ನಿರ್ಮಾತೃ ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರೆ. ಮೈಸೂರಿನ ಕಲಾವಿದ ನಂದನ್ ಸಿಂಗ್ ಮಾಡಿರುವ ಸುಂದರ ಪೇಟ ಪ್ರಧಾನಿ ಅವರ ಕೈ ಸೇರಲಿದೆ. ಮೈಸೂರಿನ 'ನಮ್ಮೂರು ನಮ್ಮೊರು' ಸಮಾಜ ಸೇವಾ ಟ್ರಸ್ಟ್‌ನ ಸತೀಶ್ ಗೌಡ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ಅವರ ಸಲಹೆಯಂತೆ ನಂದನ್ ಸಿಂಗ್ ವಿನೂತನ ಪೇಟವನ್ನು ಸಿದ್ಧಪಡಿಸಿದ್ದಾರೆ. ಯೋಗ ದಿನಾಚರಣೆಗೆ ಮೋದಿ ಅವರು ಮೈಸೂರಿಗೆ ಭೇಟಿ ನೀಡಿದ ಸಮಯದಲ್ಲೂ ನಂದನ್ ಸಿಂಗ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಪೇಟ ನೀಡಿ ಗಮನ ಸೆಳೆದಿದ್ದರು.

ನವೆಂಬರ್ 11ರಂದು ಮೋದಿ ಕರ್ನಾಟಕ ಭೇಟಿ; 5 ಕಾರ್ಯಕ್ರಮಗಳುನವೆಂಬರ್ 11ರಂದು ಮೋದಿ ಕರ್ನಾಟಕ ಭೇಟಿ; 5 ಕಾರ್ಯಕ್ರಮಗಳು

ಇನ್ನು ಸಂಸತ್​ ಭವನದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿ ಸ್ಥಾಪಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಮನವಿ ಮಾಡಿದ್ದರು. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ 108 ಅಡಿಯ ಪ್ರತಿಮೆ ನಿರ್ಮಾಣ ಆಗಿದ್ದು, ನವೆಂಬರ್​ 11 ರಂದು ಉದ್ಘಾಟನೆ ಆಗಲಿದೆ. ಇದರ ಬೆನ್ನಲ್ಲೇ ಸಂಸತ್​ ಭವನದ ಆವರಣದಲ್ಲಿಯೂ ಕೆಂಪೇಗೌಡರ ಕಂಚಿನ ಪುತ್ಥಳಿ ಸ್ಥಾಪಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿಕೊಂಡಿದ್ದಾರೆ.

ಪೇಟ ತಯಾರಿಗೆ ತೆಗೆದುಕೊಂಡ ಸಮಯ

ಪೇಟ ತಯಾರಿಗೆ ತೆಗೆದುಕೊಂಡ ಸಮಯ

ಕೆಂಪು ಬಣ್ಣದ ಬನಾರಸ್ ಬಟ್ಟೆಯಿಂದ ಪೇಟವನ್ನು ಸಿದ್ಧಪಡಿಸಲಾಗಿದೆ. ಮುಂಭಾಗದಲ್ಲಿ ರಾಷ್ಟ್ರೀಯ ಪಕ್ಷಿ ನವಿಲು ಮಾದರಿ ಚಿನ್ನದ ಬಣ್ಣದ ಡಾಲರ್ ಪೇಟದ ಆಕರ್ಷಣೆಯನ್ನು ಹೆಚ್ಚಿಸಿದೆ. ಇಕ್ಕೆಲಗಳಲ್ಲಿ ಇರುವ ಮಣಿಹಾರ ಪೇಟಕ್ಕೊಂದು ಮೆರುಗು ಹೆಚ್ಚಿಸಿದೆ. 10 ದಿನದಲ್ಲಿ ಮೋದಿಗಾಗಿ ಮಾಡಿದ ಪೇಟವನ್ನು ಈಗಾಗಲೇ ಕಲಾವಿದ ನಂದನ್ ಸಿಂಗ್ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹಸ್ತಾಂತರ ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಕಲಾವಿದ ನಂದನ್ ಸಿಂಗ್, "ಪ್ರಸಿದ್ಧ ಕಲಾವಿದ ರಾಮ್ ಎ.ಸುತಾರ ಅವರು 108 ಆಡಿ ಎತ್ತರದ ಕೆಂಪೇಗೌಡರ ಬೃಹತ್ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಅವರು ವಿನ್ಯಾಸಗೊಳಿಸಿರುವ ಪೇಟದ ಮಾದರಿಯಲ್ಲೇ ಪೇಟವನ್ನೂ ಸಿದ್ಧಪಡಿಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಮೊದಲ ಬಾರಿಗೆ ಕೆಂಪೇಗೌಡ ಪೇಟ ತಯಾರಿ

ಮೊದಲ ಬಾರಿಗೆ ಕೆಂಪೇಗೌಡ ಪೇಟ ತಯಾರಿ

ಕೆಂಪೇಗೌಡ ಪ್ರತಿಮೆಯಲ್ಲಿ ಇರುವಂತೆಯೇ ಪೇಟವನ್ನು ಹತ್ತು ದಿನಗಳ ಶ್ರಮಪಟ್ಟು ಸಿದ್ದಪಡಿಸಿದ್ದಾರೆ. ಇದೇ ಮೊದಲ ಬಾರಿಗೆ ಕೆಂಪೇಗೌಡ ಪೇಟ ತಯಾರಿ ಮಾಡಲಾಗಿದ್ದು, ಬೆಂಗಳೂರಿಗೆ ಆಗಮಿಸುವ ಮೋದಿಗೆ ತೊಡಿಸಲು ಮೈಸೂರು ಪೇಟ ರೆಡಿಯಾಗಿದೆ. ಕೆಂಪೇಗೌಡ ಪ್ರತಿಮೆಯಲ್ಲಿ ಇರುವಂತೆಯೇ ಕೆಂಪು ಬಣ್ಣದ ಪೇಟ ಸಿದ್ದವಾಗಿದೆ. ನಮ್ಮೂರು ನಮ್ಮೋರು‌ ಸಮಾಜ ಸೇವಾ ಟ್ರಸ್ಟ್ ಹಾಗೂ ಕೆಂಪೇಗೌಡ ಅಭಿಮಾನಿ ಬಳಗದಿಂದ ಕೆಂಪೇಗೌಡ ಪೇಟ ತಯಾರು ಮಾಡಲಾಗಿದೆ. ಇದು ಬನಾರಸ್ ರೇಷ್ಮೆ, ರೇಷ್ಮೆ, ಗರಿ, ಮುತ್ತುಗಳು ಸೇರಿ ಕುಸುರಿ ಕೆಲಸದಿಂದ ಕಂಗೊಳಿಸುತ್ತಿದೆ. ಆದಿ ಚುಂಚನಗಿರಿ ಜಗದ್ಗುರು ನಿರ್ಮಲಾನಂದನಾಥ ಸ್ವಾಮೀಜಿ ಅನುಮತಿ ಪಡೆದು ಇದನ್ನು ತಯಾರಿಸಲಾಗಿದೆ.

ನಂದನ್ ಪರಿಶ್ರಮದಿಂದ ತಯಾರಾದ ಪೇಟ

ನಂದನ್ ಪರಿಶ್ರಮದಿಂದ ತಯಾರಾದ ಪೇಟ

ಕೆಂಪು ಬಣ್ಣದ ಪೇಟ ಇದೀಗ ಗಮನ ಸೆಳೆದಿದೆ. ಸಾಕಷ್ಟು ಸಮಯ ವಿನಿಯೋಗ ಮಾಡಿ ಪೇಟ ತಯಾರು ಮಾಡಲಾಗಿದ್ದು, ಕಲಾವಿದ ನಂದನ್ ಪರಿಶ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಪೇಟ ತಯಾರಿಕೆಗೆ ಆಗಿರುವ ವೆಚ್ಚದ ಬಗ್ಗೆ ಇನ್ನು ನಿಖರ ಮಾಹಿತಿ ಲಭ್ಯವಾಗಿಲ್ಲ. ಈ ಹಿಂದೆ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ್ದ ವೇಳೆ ಮಹಾರಾಜರ ಪೇಟ ಹಾಕಲಾಗಿತ್ತು. ಇದನ್ನು ಕೂಡ ನಂದನ್ ಅವರೇ ತಯಾರಿಸಿದ್ದರು.

ನ.11ಕ್ಕೆ ಬೆಂಗಳೂರಿಗೆ ಪ್ರಧಾನಿ ಆಗಮನ

ನ.11ಕ್ಕೆ ಬೆಂಗಳೂರಿಗೆ ಪ್ರಧಾನಿ ಆಗಮನ

ನವೆಂಬರ್ 11ರಂದು ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡುವ ವೇಳೆ 5 ನಿಗದಿತ ಕಾರ್ಯಕ್ರಮಗಳಲ್ಲಿ ಭಾಗಿ ಆಗಲಿದ್ದಾರೆ. ಮೊದಲಿಗೆ ಶಾಸಕರ ಭವನದ ಆವರಣದಲ್ಲಿ ಕನಕದಾಸ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದು, ಬಳಿಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಲಿದ್ದಾರೆ. ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ ಟರ್ಮಿನಲ್-2 ಲೋಕಾರ್ಪಣೆ ಮಾಡಲಿದ್ದಾರೆ. ಮತ್ತು ಕೆಂಪೇಗೌಡರ 108 ಅಡಿ ಎತ್ತರದ ಪ್ರಗತಿ ಪ್ರತಿಮೆ, ಥೀಮ್ ಪಾರ್ಕ್ ಉದ್ಘಾಟನೆ ಮಾಡಲಿದ್ದಾರೆ. ನಂತರ ವಿಮಾನ ನಿಲ್ದಾಣದ ಸಮೀಪದ ಕೆಎಸ್‌ಎಸ್‌ಐಡಿಎಲ್‌ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಉಡುಪಿ, ಹಾವೇರಿ, ಬೆಳಗಾವಿಯಲ್ಲಿ ಬಿಜೆಪಿ ಜನ ಸಂಕಲ್ಪ ಸಮಾವೇಶಉಡುಪಿ, ಹಾವೇರಿ, ಬೆಳಗಾವಿಯಲ್ಲಿ ಬಿಜೆಪಿ ಜನ ಸಂಕಲ್ಪ ಸಮಾವೇಶ

English summary
Kempegowda turban made of Banaras cloth is ready for Prime Minister Narendra Modi in Mysuru attracted attention. Here See complete information about specialty of turban, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X