ಕಾವೇರಿ ಬ್ಯಾಂಕಿನಲ್ಲಿ ಕನ್ನಡ ಬಲ್ಲವರಿಗೆ ಉದ್ಯೋಗ
ಬೆಂಗಳೂರು, ಜೂ.22: ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ಆದ್ಯತೆ ಮೇರೆಗೆ ಕನ್ನಡ ಬಲ್ಲ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಜೂ.30ರೊಳಗೆ ಅರ್ಜಿ ಸಲ್ಲಿಸಬಹುದು.
ಐಬಿಪಿಎಸ್ ಆಯೋಜನೆಯ ಆರ್ ಆರ್ ಬಿಗಾಗಿ ನಡೆದ ಸಿಡಬ್ಲ್ಯೂಇ ಆನ್ ಲೈನ್ ಪರೀಕ್ಷೆಯಲ್ಲಿ ಅರ್ಹತೆ ಪಡೆದುಕೊಂಡ (ಅಕ್ಟೋಬರ್ 2014) ಅಭ್ಯರ್ಥಿಗಳು ಜೂ.30ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟು ಹುದ್ದೆಗಳ ಸಂಖ್ಯೆ: 12
ಹುದ್ದೆ ಹೆಸರು: ಆಫೀಸರ್ ಗ್ರೇಡ್ 11 (ಐಟಿ)
ಎಸ್ ಸಿ: 2
ಎಸ್ ಟಿ : 1
ಒಬಿಸಿ : 3
ಸಾಮಾನ್ಯ ವರ್ಗ : 6
ವಯೋಮಿತಿ : 01/06/2014 ದಿನಾಂಕಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ವಯಸ್ಸು 21 ರಿಂದ 32 ವರ್ಷ ಮಿತಿಯಲ್ಲಿರಬೇಕು. ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿಗೆ 3 ಹಾಗೂ ಅಂಗವಿಕಲ, ನಿವೃತ್ತ ಯೋಧರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ: 2014ರ ಸೆಪ್ಟೆಂಬರ್/ಅಕ್ಟೋಬರ್ ನಲ್ಲಿ ನಡೆಸಲಾದ ಐಬಿಪಿಎಸ್ ಆಯೋಜನೆಯ ಆರ್ ಆರ್ ಬಿಗಾಗಿ ನಡೆದ ಸಿಡಬ್ಲ್ಯೂಇ III ಆನ್ ಲೈನ್ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ. ಎಸ್ ಸಿ/ಎಸ್ಟಿ 70 ಅಥವಾ ಹೆಚ್ಚಿನ ಅಂಕ ಪಡೆದಿರಬೇಕು. ಇತರೆ ವರ್ಗದವರು 80 ಅಥವಾ ಹೆಚ್ಚಿನ ಅಂಕ ಗಳಿಸಿರಬೇಕು.
ಶುಲ್ಕ : ಯಾವುದೇ ಶುಲ್ಕ ವಿಧಿಸಿರುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
* ಆರ್ ಆರ್ ಬಿ ಪರೀಕ್ಷೆಗೆ ಬಳಸಿದ ಇಮೇಲ್ ಐಡಿ ಬಳಸಿ ಕಾವೇರಿ ಗ್ರಾಮೀಣ ಬ್ಯಾಂಕ್.ಕಾಂ ವೆಬ್ ಸೈಟ್ ಗೆ ಲಾಗ್ ಇನ್ ಆಗಿ.
* Careers ಎಂಬಲ್ಲಿ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ ನಂತರ ಸಲ್ಲಿಸಿದ ಅರ್ಜಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
* ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸಲು ಮತ್ತೊಂದು ವೆಬ್ ಸೈಟ್ ಲಿಂಕ್ ಇಲ್ಲಿದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications