ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಡತನದಲ್ಲೂ ಸಾಧಿಸಿ ಗೆದ್ದ ಮೈಸೂರಿನ ಆದರ್ಶ ವಿದ್ಯಾರ್ಥಿಗಳು!

By Yashaswini
|
Google Oneindia Kannada News

ಮೈಸೂರು, ಮೇ 08: ವಿದ್ಯೆಗೆ ಬಡತನ ಹಾಗೂ ಸಿರಿತನ ಎಂಬ ಭೇದವಿಲ್ಲ ಎಂಬ ಮಾತಿದೆ. ಅದನ್ನು ಸಾಧಿಸಿ ತೋರಿಸಿದವರು ಇವರು. ತಂದೆ ಬೊಂಬೆ ಮಾರುವ ಉದ್ಯಮಿ. ಕಡು ಬಡತನದಲ್ಲೇ ಓದಿ 611 ಅಂಕಗಳನ್ನು ಪಡೆದ ವಿದ್ಯಾರ್ಥಿನಿ ಚೈತ್ರ. ಸದ್ವಿದ್ಯಾ ಶಾಲೆಯ ವಿದ್ಯಾರ್ಥಿನಿಯಾದ ಈಕೆ ಮನೆಯಲ್ಲಿ ಕಷ್ಟವಿದ್ದರೂ ಅದಕ್ಕೂ ಅಂಜದೇ ಓದಿ ಜಯಿಸಿದ್ದಾಳೆ.

ಚೈತ್ರ ತಂದೆ ಮೂಲತಃ ಮೈಸೂರಿನವರೇ ಆಗಿದ್ದು, ಮೈಸೂರು ಮೃಗಾಳಯದ ಬಳಿ ಪ್ರವಾಸಿಗರನ್ನು ಸೆಳೆಯುವ ಬೊಂಬೆ ಅಂಗಡಿಯ ಉದ್ಯಮಿ. ಆದರೂ ತಮ್ಮ ಮಗಳು ಓದಿ ಉತ್ತಮ ಅಂಕವನ್ನು ಪಡೆಯಬೇಕೆಂಬ ಹಂಬಲ ಅವರದ್ದು. ಆದರೆ ಎಂದು ಕೂಡ ತಮ್ಮ ಮಗಳು ಡಿಸ್ಡಿಂಕ್ಷನ್ ನಲ್ಲಿ ಪಾಸ್ ಆಗುತ್ತಾಳೆಂದೂ ಭಾವಿಸಿಯೇ ಇರಲಿಲ್ಲ. ನಮಗೆ ಬಡತನವಿರಬಹುದು. ಆದರೆ ಓದಿನಲ್ಲಿ ಅವಳು ಶ್ರೀಮಂತಳು ಎಂದೂ ನಗುತ್ತಲೇ ಉತ್ತರಿಸುತ್ತಾರೆ ಚೈತ್ರ ತಂದೆ.

Karnataka SSLC Results: 2 poor students from Mysuru become role model now

ಓದಿಗಾಗಿ ಬ್ಯಾಡ್ಮಿಂಟನ್ ಆಡುವುದು ಬಿಟ್ಟಿರಲಿಲ್ಲ: SSLC ಟಾಪರ್ ಯಶಸ್ಓದಿಗಾಗಿ ಬ್ಯಾಡ್ಮಿಂಟನ್ ಆಡುವುದು ಬಿಟ್ಟಿರಲಿಲ್ಲ: SSLC ಟಾಪರ್ ಯಶಸ್

ನಾನು ಮುಂದೆ ಸೈನ್ಸ್ ತೆಗೆದುಕೊಳ್ಳಬೇಕು. ಅಪ್ಪನಿಗೆ ನನ್ನನ್ನು ಐಎಎಸ್ ಅಧಿಕಾರಿಯನ್ನಾಗಿ ಮಾಡಬೇಕೆಂಬ ಹಂಬವಿದೆ. ಮುಂದೆ ನೋಡೋಣ. ವಿದ್ಯೆಗೆ ಬಡತನ ಮುಖ್ಯವಲ್ಲ. ಅಂದಿನಿಂದನ್ನೂ ಅಂದೇ ಓದಿ ಮುಗಿಸಿ ಎನ್ನುತ್ತಾರೆ. ಆದರೆ ಕೆಲವು ಬಾರಿ ಅದು ಕಷ್ಟಸಾಧ್ಯವಾಗುತ್ತದೆ. ನಾನು ಅಂದಿನ ಓದನ್ನು ಶೇ. 70 ಭಾಗ ಮುಗಿಸುತ್ತಿದೆ. ಹಾಗಾಗಿ ನನಗೆ ಇಷ್ಟು ಅಂಕಗಳು ಲಭಿಸಿದೆ. ಇದು ನನಗೆ ತೃಪ್ತಿ ತರಿಸಿದೆ ಎನ್ನುತ್ತಾಳೆ ಚೈತ್ರ.

SSLC ಫಲಿತಾಂಶ : 2018 ಹಾಗೂ 2017ರಲ್ಲಿ ಯಾವ ಜಿಲ್ಲೆ ಫಸ್ಟ್ ಯಾವ ಜಿಲ್ಲೆ ಲಾಸ್ಟ್!SSLC ಫಲಿತಾಂಶ : 2018 ಹಾಗೂ 2017ರಲ್ಲಿ ಯಾವ ಜಿಲ್ಲೆ ಫಸ್ಟ್ ಯಾವ ಜಿಲ್ಲೆ ಲಾಸ್ಟ್!

ತಂದೆ ಗೆ ಕೀರ್ತಿ ತಂದ ವರುಣ್:
ಇವನು ವರುಣ್. ತಂದೆಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂಬ ವಿಷಯ ತಿಳಿದಿದೆ. ಆದರೂ ಹಿಂಜರಿಯದೇ ಪರೀಕ್ಷೆ ಬರೆಯಲು ಮುಂದಾದ. ಇತ್ತ ತಂದೆ ಕರೆದು ಮಗನೇ, ಓದು, ಉತ್ತಮ ಅಂಕ ಬಂದರೆ, ನಿನಗೆ ಸೈಕಲ್ ಕೊಡಿಸುತ್ತೇನೆ ಎಂದರು. ನಾನು ಈಗ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದೇನೆ. ಹೆಚ್ಚು ಖುಷಿ ನನ್ನ ತಂದೆಯಾಗಿದ್ದಾಗಿದೆ. ಅವರು ಈಗ ಹುಷಾರಾಗಿದ್ದಾರೆ. ನನ್ನ ಸತತ ಪ್ರಯತ್ನಕ್ಕೆ ಇದು ಸಿಕ್ಕ ಪ್ರತಿಫಲ ಎಂದು ನಗುಮೊಗದಿಂದ ಉತ್ತರಿಸಿದ.

Karnataka SSLC Results: 2 poor students from Mysuru become role model now

ವರುಣ್ ಕಡುಬಡುವ ಕುಟುಂಬದ ಹುಡುಗ. ಮಸಾಲೆ ಪುಡಿಗಳನ್ನು ಮಾರಿಯೇ ಅವರ ಜೀವನ ಮುನ್ನಡೆಸಬೇಕು. ಇಂತಹ ಕಡು ಬಡತನದಲ್ಲೂ ವಿದ್ಯೆಯಲ್ಲಿ ಹಿಂದುಳಿಯದೇ ಸಾಧಿಸಿದ ಮಕ್ಕಳು ನಮ್ಮ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಬೇಕೆಂಬ ಆಶಯವಷ್ಟೆ. ಇವರ ಮುಂದಿನ ಜೀವನ ಸುಗಮವಾಗಿರಲಿ. ಗುಡ್ ಲಕ್.

English summary
Karnataka SSLC examination results were out yesterday. 2 students who have achieved and become a role model to all students. Chaitra and Varun from Sadvidya school in Mysuru came from very poor family got very good marks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X