Get Updates
Get notified of breaking news, exclusive insights, and must-see stories!

ವಿಜಯೇಂದ್ರ ಟಿಕೆಟ್ ಕೈ ತಪ್ಪುವ ಹಿಂದೆ ಆರ್‌ಎಸ್‌ಎಸ್‌ ಕೈವಾಡ?

ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ವರುಣಾದಿಂದ ಟಿಕೆಟ್ ಕೈತಪ್ಪಿದೆ ಅಷ್ಟೆ ಅಲ್ಲ ಯಡಿಯೂರಪ್ಪ ಅವರು ಬೇಡಿಕೆ ಇಟ್ಟಿದ್ದ ಮತ್ತೊಬ್ಬ ಅಭ್ಯರ್ಥಿ ಶೋಭಾ ಕರಂದ್ಲಾಜೆಗೂ ಟಿಕೆಟ್ ಕೈತಪ್ಪಿದೆ.

ವಿಜಯೇಂದ್ರ ಮತ್ತು ಶೋಭಾ ಕರಂದ್ಲಾಜೆ ಟಿಕೆಟ್ ಕೈತಪ್ಪುವ ಹಿಂದೆ ಆರ್‌ಎಸ್‌ಎಸ್‌ ಕೈವಾಡ ಇದೆ ಎನ್ನಲಾಗುತ್ತಿದೆ. ಆರ್‌ಎಸ್‌ಎಸ್‌ ಬಿಜೆಪಿ ಹೈಕಮಾಂಡ್‌ ಮೇಲೆ ಪ್ರಭಾವ ಹೇರಿ ವಿಜಯೇಂದ್ರ ಮತ್ತು ಶೋಭಾ ಅವರಿಗೆ ಟಿಕೆಟ್ ತಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಬಿಜೆಪಿಯು ತನ್ನ ಎದುರಾಳಿ ಕಾಂಗ್ರೆಸ್ ಅನ್ನು ಟೀಕಿಸಲು ಬಳಸುತ್ತಿರುವ ಪ್ರಮುಖ ಅಸ್ತ್ರ 'ಕುಟುಂಬ ರಾಜಕಾರಣದ್ದು' ಆದರೆ ಯಡಿಯೂರಪ್ಪ ಅವರ ವಿಜಯೇಂದ್ರ ಅವರಿಗೂ ಟಿಕೆಟ್ ನೀಡಿದರೆ ಅದು ಬಿಜೆಪಿಗೆ ಹಿನ್ನಡೆ ಆಗುತ್ತದೆ. ನೈತಿಕವಾಗಿ ಕಾಂಗ್ರೆಸ್‌ ಅನ್ನು ಎದುರಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಆರ್‌ಎಸ್‌ಎಸ್‌ ಬಿಜೆಪಿ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದೆ.

ಆರ್‌ಎಸ್‌ಎಸ್‌ ಅಭಿಪ್ರಾಯ ಇದು

ಆರ್‌ಎಸ್‌ಎಸ್‌ ಅಭಿಪ್ರಾಯ ಇದು

ಈಗಾಗಲೇ ಬಿಎಸ್‌ವೈ ಅವರ ಹಿರಿಯ ಪುತ್ರ ರಾಘವೇಂದ್ರ ಅವರು ಸಂಸದರಾಗಿ ಆಯ್ಕೆ ಆಗಿದ್ದಾರೆ. ಈಗ ಮತ್ತೊಬ್ಬ ಪುತ್ರನಿಗೂ ಟಿಕೆಟ್ ನೀಡಿದರೆ ಕುಟುಂಬ ರಾಜಕಾರಣದ ಕಳಂಕ ಅಂಟಲಿದೆ ಎಂಬುದು ಆರ್‌ಎಸ್‌ಎಸ್‌ ಅಭಿಪ್ರಾಯವಾಗಿದೆ.

ವರುಣಾದಲ್ಲಿ ಸೋಲಿನ ವಾಸನೆ

ವರುಣಾದಲ್ಲಿ ಸೋಲಿನ ವಾಸನೆ

ಆರ್‌ಎಸ್‌ಎಸ್ ಬಿಜೆಪಿ ಹೈಕಮಾಂಡ್‌ಗೆ ಸಮೀಕ್ಷೆ ವರದಿಯೊಂದನ್ನು ನೀಡಿದ್ದು, ಸಮೀಕ್ಷೆ ಪ್ರಕಾರ ವರುಣಾ ಹಾಗೂ ಶೋಭಾ ಅವರು ಸ್ಪರ್ಧಿಸಲು ಇಚ್ಛಿಸಿದ್ದ ಯಶವಂತಪುರದಲ್ಲಿ ಬಿಜೆಪಿಗೆ ಸೋಲು ಕಾದಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರೇ ವರುಣಾದಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಆರ್‌ಎಸ್‌ಎಸ್ ಸಮೀಕ್ಷೆ ನೀಡಿದೆ.

ಶೋಭಾ ಟಿಕೆಟ್ ಹಿಂದೆಯೂ ಆರ್‌ಎಸ್‌ಎಸ್‌

ಶೋಭಾ ಟಿಕೆಟ್ ಹಿಂದೆಯೂ ಆರ್‌ಎಸ್‌ಎಸ್‌

ಶೋಭಾ ಕರಂದ್ಲಾಜೆಗೂ ಟಿಕೆಟ್ ತಪ್ಪಿಸುವ ಹಿಂದೆ ಆರ್‌ಎಸ್‌ಎಸ್ ಕಾರ್ಯ ನಿರ್ವಹಿಸಿದೆ. ಉತ್ತಮ ಅಭ್ಯರ್ಥಿಗಳನ್ನು ವಿಧಾನಸಭೆಗೆ ಆಯ್ಕೆ ಮಾಡಿದರೆ ಮುಂದಿನ ವರ್ಷವೇ ನಡೆಯಲಿರುವ ಲೋಕಸಭೆಗೆ ಅಭ್ಯರ್ಥಿಗಳ ಕೊರತೆ ಆಗದಂತೆ ನೋಡಿಕೊಳ್ಳುವ ಕಾರಣ ಈ ರೀತಿಯ ನಿರ್ಣಯ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ಯಡಿಯೂರಪ್ಪ ಹೀಗಂದರು

ಯಡಿಯೂರಪ್ಪ ಹೀಗಂದರು

ವಿಜಯೇಂದ್ರಗೆ ಟಿಕೆಟ್ ತಪ್ಪುವ ಹಿಂದೆ ಹೈಕಮಾಂಡ್ ಕಾರಣ ಅಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ, ವಿಜಯೇಂದ್ರ ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಎಂಬುದು ನನ್ನ ಮತ್ತು ನನ್ನ ಕುಟುಂಬದ ನಿರ್ಣಯ ಎಂಬುದು ಯಡಿಯೂರಪ್ಪ ಅವರ ಮಾತು.

ಅನಂತ್‌ಕುಮಾರ್ ಕೈವಾಡ?

ಅನಂತ್‌ಕುಮಾರ್ ಕೈವಾಡ?

ವಿಜಯೇಂದ್ರ ಹಾಗೂ ಶೋಭಾ ಅವರ ಟಿಕೆಟ್ ಕೈತಪ್ಪುವ ಹಿಂದೆ ಕೇಂದ್ರ ಸಚಿವ ಅನಂತ್‌ಕುಮಾರ್ ಹಾಗೂ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಶ್‌ ಅವರ ಕೈವಾಡ ಇದೆ ಎನ್ನುವ ಊಹಾಪೋಹವೂ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+