ನಿನ್ನೆ ಮೋದಿ, ಇಂದು ಜಿಟಿಡಿ ಮೇಲೆ ಸಿದ್ದು ಏಕವಚನ ಪ್ರಯೋಗ
ಮೈಸೂರು, ಮೇ 10 : ಕೊನೆಯ ದಿನದ ಬಹಿರಂಗ ಪ್ರಚಾರ ಮೈಸೂರಿನಲ್ಲಿ ಜೋರಾಗಿಯೇ ನಡೆಯುತ್ತಿದೆ. ಇಂದು ಆ ಕೊನೆ ಹಂತದ ಕಸರತ್ತಿನಲ್ಲಿ ಚಾಮುಂಡೇಶ್ವರಿಯಲ್ಲ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ ಜಿ.ಟಿ ದೇವೇಗೌಡ ವಿರುದ್ಧ ಬ್ಯಾಟ್ ಬೀಸಿದರು.
ಈ ಚುನಾವಣೆ ಜಿ. ಟಿ ವರ್ಸಸ್ ಸಿದ್ದರಾಮಯ್ಯ ಎಂಬ ದೇವೇಗೌಡ ಹೇಳಿಕೆಗೆ ಸಿದ್ದರಾಮಯ್ಯ ಟಾಂಗ್ ನೀಡಿದ್ದು, ನಾನು ಗೆದ್ದಾಗ ಜಿಟಿ.ದೇವೇಗೌಡನಂತವರು ನೂರು ಮಂದಿ ಇದ್ದರು. ಆ ನೂರು ಜನರಲ್ಲಿ ಜಿಟಿ.ದೇವೇಗೌಡ ಒಬ್ಬ. ಆತ ಆಗ ಕೇವಲ ಸೊಸೈಟಿ ಮೆಂಬರ್ ಆಗಿದ್ದ. ಆತನಿಗೆ ಎಷ್ಟು ಜನಪ್ರಿಯತೆ ಇರಲು ಸಾಧ್ಯ ಹೇಳಿ? ಪಾಪ ಜಿ ಟಿ.ದೇವೇಗೌಡ ಸೋಲಿನ ಹತಾಶೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇಲ್ಲಿವರೆಗೆ ಕ್ಷೇತ್ರ ಸುತ್ತಾಡಿದ ಪರಿಣಾಮ ನಾನು ಗೆಲ್ಲುವ ಪೂರ್ಣ ವಿಶ್ವಾಸ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.
ಇತ್ತ ಜಿ. ಟಿ ದೇವೇಗೌಡರಿಂದಲೂ ಭರ್ಜರಿ ಪ್ರಚಾರ:
ಇತ್ತ ಚಾಮುಂಡೇಶ್ವರಿಯಲ್ಲಿ ಕೊನೆಯ ದಿನದ ಭರ್ಜರಿ ಪ್ರಚಾರ ನಡೆಸಿದ ಜಿ ಟಿ ದೇವೇಗೌಡರ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಜನ ದೇಶಕ್ಕೆ ಇತಿಹಾಸ ಬರೆಯುತ್ತಾರೆ. ಹಣ ತಂದಿರುವ ಸಿದ್ದರಾಮಯ್ಯರನ್ನ ಗೆಲ್ಲಿಸುತ್ತಾರೋ, ಹಣವಿಲ್ಲದ ಜಿ.ಟಿ.ದೇವೆಗೌಡರನ್ನ ಗೆಲ್ಲಿಸುತ್ತಾರೋ ನೀವೇ ನೋಡಿ. ಈ ಬಾರಿಯ ಫಲಿತಾಂಶ ನೋಡಿ ದಾಖಲೆ ನಿರ್ಮಿಸುತ್ತಾರೆ. ಎಂದು ವಿಶ್ವಾಸದಿಂದ ನುಡಿದರು.

ಚಾಮುಂಡೇಶ್ವರಿಯಲ್ಲಿ ನಿಲ್ಲುತ್ತೇನೆ ಎಂದು ಹೇಳಿದಂತೆ ನಡೆದುಕೊಂಡಿದ್ದಾರೆ ಸಿದ್ದರಾಮಯ್ಯ. ಆದರೆ ಬಾದಾಮಿಯಲ್ಲಿ ನಿಲ್ಲುತ್ತೇನೆ ಎಂಬ ಸತ್ಯವನ್ನ ಮುಚ್ಚಿಟ್ಟಿದ್ದಾರೆ. ಅವರಿಗೆ ಸೋಲಿನ ಭಯ ಕಾಡಿದ್ದರಿಂದಲೇ ಅವರು ಬಾದಾಮಿಗೆ ಹೋಗಿದ್ದಾರೆ. ಸಿದ್ದರಾಮಯ್ಯರನ್ನ ಒಂದು ರೂಪಾಯಿ ಪಡೆಯದೆ ಇದೆ ಜಾಗದಲ್ಲಿ ಗೆಲ್ಲಿಸಿದ್ದೆವು. ಆ ನೆನಪನ್ನ ಸಿದ್ದರಾಮಯ್ಯ ಸಾಯೋವರೆಗು ಮರೆಯುವ ಹಾಗಿಲ್ಲ. ನನಗಂತು ಸಂಪೂರ್ಣ ವಿಶ್ವಾಸ ಇದೆ ನಾನೇ ಗೆಲ್ಲೋದು. ಮುಖ್ಯಮಂತ್ರಿ ಮಾಡಿದ ಚಾಮುಂಡೇಶ್ವರಿ ಜನರಿಗೆ ಸಿದ್ದರಾಮಯ್ಯ ಏನು ಕೆಲಸ ಮಾಡಿಲ್ಲ.
ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಜನ ಸಿದ್ದರಾಮಯ್ಯರನ್ನ ಸೋಲಿಸುತ್ತಾರೆ. ಜೆಡಿಎಸ್ ಇಲ್ಲಿ ಗೆಲ್ಲಲಿದೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿಲ್ಲ. ಐಟಿ ಮತ್ತು ಚುನಾವಣಾ ಅಧಿಕಾರಿಗಳ ಕೆಲಸ ಮಾಡಿದ್ದರೇ ಎಲ್ಲಾ ದುಡ್ಡು ಇಲ್ಲೆ ಸಿಕ್ತಿತ್ತು. ಆದ್ರೆ ಯಾವ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಚುನಾವಣಾ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ತಳೂರು, ಉದ್ಬೂರು ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಜಿ ಟಿ ದೇವೇಗೌಡರು ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.












Click it and Unblock the Notifications