ದಲಿತ ಮುಖ್ಯಮಂತ್ರಿಗೆ ಕುರ್ಚಿ ಬಿಟ್ಟುಕೊಡಲು ಹೊರಟ ಸಿದ್ದರಾಮಯ್ಯ!
Recommended Video

"ಹೈಕಮಾಂಡ್ ಸೂಚಿಸಿದರೆ ದಲಿತ ಮುಖ್ಯಮಂತ್ರಿಗೆ ಖುರ್ಚಿ ಬಿಟ್ಟುಕೊಡಲು ನಾನು ಸಿದ್ಧ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಮೈಸೂರಿನಲ್ಲಿ ನಿನ್ನೆ(ಮೇ 13) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಹೈಕಮಾಂಡ್ ಅಕಸ್ಮಾತ್ ದಲಿತರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುವುದಾದರೆ ನನ್ನದು ಯಾವುದೇ ತಕರಾರಿಲ್ಲ. ಆಗ ನಾನು ಯಾರನ್ನೂ ವಿರೋಧಿಸುವುದಿಲ್ಲ" ಎಂದಿದ್ದರು.
"ಇದಕ್ಕೆ ಎಲ್ಲ ಶಾಸಕರ ಅನಿಸಿಕೆಯನ್ನೂ ಕೇಳಬೇಕು. ಒತ್ತಡ ಹೇರಿ ಯಾವ ನಿರ್ಧಾರವನ್ನೂ ಜಾರಿಗೊಳಿಸುವುದಕ್ಕೆ ಸಾಧ್ಯವಿಲ್ಲ. ಹೈಕಮಾಂಡ್ ಸಹ ಈ ಎಲ್ಲ ವಿಷಯಗಳನ್ನು ಪರಿಗಣಿಸುತ್ತದೆ. ನನ್ನ ಐದು ವರ್ಷಗಳ ಆಡಳಿತಾವಧಿಯಲ್ಲಿ ಎಲ್ಲ ಶಾಸಕರೂ ಸಹಕಾರ ನೀದಿದ್ದಾರೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಆಡಳಿತ ನಡೆಸಿದ್ದೇನೆ" ಎಂದು ಅವರು ಹೇಳಿದರು.

ಇಷ್ಟು ದಿನ ಎಲ್ಲೇ ಹೋದರೂ, 'ನಾನೇ ಮುಂದಿನ ಸಿಎಂ' ಎನ್ನುತ್ತಿದ್ದ ಸಿದ್ದರಾಮಯ್ಯ ಇದೀಗ ವರಸೆ ಬದಲಿಸುವುದು ಕರ್ನಾಟಕದ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆ ಎನ್ನಿಸಿದೆ. ಮೇ 12 ರಂದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದು ಶೇ. 72 ರಷ್ಟು ಮತದಾನ ದಾಖಲಾಗಿದೆ. ಮೇ 15 ರಂದು ಫಲಿತಾಂಶ ಹೊರಬೀಳಲಿದ್ದು ರಾಜ್ಯದ ಭವಿಷ್ಯ ನಿರ್ಧಾರವಾಗಲಿದೆ.












Click it and Unblock the Notifications