ವಿಜಯೇಂದ್ರ ಕೈತಪ್ಪಿದ ಟಿಕೆಟ್: ಅನಂತ ಕುಮಾರ್ ಮೈಸೂರು ಪ್ರವಾಸ ರದ್ದು!

ಮೈಸೂರು, ಏಪ್ರಿಲ್ 27: ನಾಳೆ(ಏ.28)ಮೈಸೂರಿಗೆ ಆಗಮಿಸಬೇಕಿದ್ದ ಕೇಂದ್ರ ರಸಗೊಬ್ಬರ ಸಚಿವ ಅನಂತ ಕುಮಾರ್ ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಏಪ್ರಿಲ್ 28 ರಂದು ಮೈಸೂರಿನ ವರುಣಾ, ಕೃಷ್ಣರಾಜ, ಚಾಮರಾಜ ವಿಧಾನಸಭಾ ಕ್ಷೇತ್ರಗಳಿಗೆ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಭೇಟಿ ನೀಡಿ ಪ್ರಚಾರ ನಡೆಸಬೇಕಿತ್ತು. ನಂತರ ಸಂಜೆ ಪತ್ರಿಕಾಗೋಷ್ಠಿಯನ್ನೂ ಅನಂತ ಕುಮಾರ್ ಹಮ್ಮಿಕೊಂಡಿದ್ದರು. ಆದರೆ ತಮ್ಮ ಈ ಎಲ್ಲಾ ಕಾರ್ಯಕ್ರಮಗಳನ್ನೂ ರದ್ದುಗೊಳಿಸಿರುವ ಅನಂತ ಕುಮಾರ್ ನಡೆಗೂ, ವರುಣಾ ಕ್ಷೇತ್ರದಲ್ಲಿ ಬಿವೈ ವಿಜಯೇಂದ್ರ ಅವರಿಗೆ ಟಿಕೆಟ್ ತಪ್ಪಿದ್ದಕ್ಕೂ ಸಂಬಂಧ ಕಲ್ಪಿಸಲಾಗುತ್ತಿದೆ.

Karnataka elections: After Varuna controversy Anant Kumar cancels his trip to Mysuru

ವಿಜಯೇಂದ್ರ ಅವರಿಗೆ ಟಿಕೆಟ್ ಸಿಗದಿರಲು ಸ್ವಪಕ್ಷೀಯರದೇ ಕೈವಾಡವಿದೆ ಎಂಬ ಕೂಗು ಕೇಳಿಬಂದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವಿಜಯೇಂದ್ರ ಬೆಂಬಲಿಗರು ಅನಂತ ಕುಮಾರ್ ವಿರುದ್ಧವೇ ಪ್ರತಿಭಟನೆ ನಡೆಸುವ ಸಾಧ್ಯತೆ ಇರುವುದರಿಂದ ಅನಂತ ಕುಮಾರ್ ಪ್ರವಾಸ ರದ್ದು ಮಾಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+