ಚಾಮುಂಡೇಶ್ವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಘಾತ

Recommended Video

      ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯಗೆ ಹಿನ್ನಡೆ | Oneindia Kannada

      ಮೈಸೂರು, ಮೇ 15: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಘಾತಕಾರಿ ಸೋಲು ಅನುಭವಿಸಿದ್ದಾರೆ.

      ಬಾದಾಮಿಯಲ್ಲಿ ಗೆಲುವು ಕಂಡಿರುವ ಸಿದ್ದರಾಮಯ್ಯ, ತವರಿನಲ್ಲಿಯೇ ಸೋಲು ಕಾನುವ ಮೂಲಕ ತೀವ್ರ ಮುಖಭಂಗ ಅನುಭವಿಸಿದ್ದಾರೆ.

      ಜೆಡಿಎಸ್‌ನ ಜಿಟಿ ದೇವೇಗೌಡ ಅವರು 30 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಸಿದ್ದರಾಮಯ್ಯ ಅವರಿಗೆ ಸೋಲು ಉಣಿಸಿದ್ದಾರೆ.

      Karnataka Election Results 2018 siddaramaiah faced setback in chamundeshwari

      ಮತ ಎಣಿಕೆಯ ಆರಂಭದಿಂದಲೂ ಜಿ.ಟಿ. ದೇವೇಗೌಡ ಅವರು ಮುನ್ನಡೆ ಸಾಧಿಸಿದ್ದರು. ಅಲ್ಪ ಮತದ ಮುನ್ನಡೆ ಸಾಧಿಸಿದ್ದಾಗ, ಕಾಂಗ್ರೆಸ್ ಪ್ರಾಬಲ್ಯ ಹೆಚ್ಚಿರುವ ಮತಗಟ್ಟೆಗಳಿಂದ ಸಿದ್ದರಾಮಯ್ಯ ಅವರಿಗೆ ಅಧಿಕ ಮತಗಳು ಬರಬಹುದು. ಚಿತ್ರಣ ಬದಲಾಗಬಹುದು ಎಂದು ನಿರೀಕ್ಷಿಸಲಾಗಿತ್ತು.

      ಆದರೆ, ದೇವೇಗೌಡ ಅವರು ಮತಗಳ ಅಂತರ ಹೆಚ್ಚಿಸಿಕೊಳ್ಳುತ್ತಲೇ ಮುನ್ನಡೆ ಸಾಧಿಸಿದರು.

      ಚಾಮುಂಡೇಶ್ವರಿಯಲ್ಲಿ ಒಟ್ಟು 2,95,815 ಮತದಾರರಿದ್ದು, 1,14,785 ಪುರುಷ ಹಾಗೂ 1,10,182 ಮಹಿಳಾ ಮತದಾರರಿದ್ದಾರೆ. ಈ ಬಾರಿ ಒಟ್ಟು ಶೇ 76.05 ರಷ್ಟು ಮತದಾನವಾಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+