ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಆಗಿದ್ದು ಇಷ್ಟು, ಇಲ್ಲಿದೆ ವಿವರ

ಮೈಸೂರು, ಮೇ, 11: ರಾಜ್ಯವಿಧಾನಸಭೆ ಚುನಾವಣೆ ಮತದಾನ ಮೇ 10ರಂದು ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಸಣ್ಣ ಪುಟ್ಟ ಗಲಾಟೆ, ಗೊಂದಲ ಹೊರತುಪಡಿಸಿದರೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತದಾನ ಕಾರ್ಯ ಯಶಸ್ವಿಯಾಗಿ ನಡೆದಿದೆ. ಈ ಮೂಲಕ ಮೈಸೂರು ಜಿಲ್ಲೆಯಲ್ಲಿ ಶೇಕಡಾ 75.04ರಷ್ಟು ಮತದಾನವಾಗಿದೆ. ಹಾಗಾದರೆ ಜಿಲ್ಲೆಯ ಕ್ಷೇತ್ರವಾರು ಮತದಾನದ ವಿವರವನ್ನು ಇಲ್ಲಿ ತಿಳಿಯಿರಿ.

ಮತದಾನ ಸಂವಿಧಾನ ನೀಡಿರುವ ಹಕ್ಕು. ಅಲ್ಲದೆ ಪ್ರಜಾಪ್ರಭುತ್ವದ ಮಹತ್ತರ ಸಂಗತಿಯಾಗಿದೆ. ಹಾಗಾಗಿ ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಗೆ ಮನೆಯಲ್ಲೇ ಮತದಾನ ಮಾಡುವ ಅವಕಾಶ ಕಲ್ಪಿಸಿತ್ತು.

Karnataka election 2023: 11 constituencies Voting details of Mysuru district, Know details

ಮತಗಟ್ಟೆಗೆ ಮತದಾರರನ್ನು ಕರೆತರಲು ಹರಸಾಹಸಪಟ್ಟಿತ್ತು. 2018ರ ಚುನಾವಣೆಯಲ್ಲಿ 74.16ರಷ್ಟು ಮತದಾನವಾಗಿತ್ತು. ಈ ಬಾರಿ ಹಿಂದಿನ ಶೇಕಡಾ 1ರಷ್ಟು ಮತಪ್ರಮಾಣ ಹೆಚ್ಚಾಗಿದೆ. ಆದರೆ, ಜಿಲ್ಲಾಡಳಿತ ಶೇಕಡಾ 80ರಷ್ಟು ಮತದಾನ ಪ್ರಮಾಣ ಹೆಚ್ಚಿಸುವ ಪಣತೊಟ್ಟಿತ್ತು. ಹಾಗಾಗಿ ಸ್ವೀಪ್ ಸಮಿತಿ ಕೈಗೊಂಡಿದ್ದ ಚಟುವಟಿಕೆ ಅಷ್ಟಾಗಿ ಕೈಹಿಡಿದಿಲ್ಲ. ಸದ್ಯ ಮಳೆ ಅಡ್ಡಿಯಾಗಲಿಲ್ಲ, ಈ ಹಿನ್ನೆಲೆ ಹೆಚ್ಚು ಜನರು ಮತಗಟ್ಟೆ ಕಡೆಗೆ ಸುಳಿಯಲಿಲ್ಲ.

ಕೃಷ್ಣರಾಜ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾನ

ಸಾಮಾನ್ಯವಾಗಿ ಹಳ್ಳಿ ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚು ಮತದಾನ ಆಗುತ್ತದೆ. ಜನರು ಖುಷಿಯಿಂದ ತಮ್ಮ ಹಕ್ಕು ಚಲಾವಣೆ ಮಾಡುತ್ತಾರೆ. ಆದರೆ ಪ್ರತಿಬಾರಿ ನಗದ ಪ್ರದೇಶದಲ್ಲೇ ಜನ ಮತದಾನ ಮಾಡಲು ನಿರ್ಲಕ್ಷ್ಯ ತೋರಿಸುತ್ತಾರೆ. ಕಳೆದ ಬಾರಿಯಂತೆ ಈ ಬಾರಿಯೂ ಕೃಷ್ಣರಾಜ ಕ್ಷೇತ್ರದಲ್ಲಿ ಕಡಿಮೆ ಮತದಾನ ಆಗಿದೆ. ಆದರೆ, ಕಳೆದ ಬಾರಿಗೆ ಹೋಲಿಸಿದರೆ ಶೇಕಡಾ 2ರಷ್ಟು ಮತದಾನದ ಪ್ರಮಾಣ ಹೆಚ್ಚಾಗಿದೆ. ಕಳೆದ ಬಾರಿ ಇಲ್ಲಿ ಶೇಕಡಾ 58.76ರಷ್ಟು ಮತದಾನ ಆಗಿತ್ತು.

ವರುಣಾದಲ್ಲಿ ಅತಿ ಹೆಚ್ಚು ಮತದಾನ

ಅದನ್ನು ಹೊರತುಡಿಸಿದರೆ ಚಾಮರಾಜ ಕ್ಷೇತ್ರದಲ್ಲಿ ಶೇಕಡಾ 60ರಷ್ಟು ಮತ ಚಲಾವಣೆಯಾಗಿದೆ. ಕಳೆದ ಬಾರಿ 59.18ರಷ್ಟಿತ್ತು. ನರಸಿಂಹರಾಜ ಕ್ಷೇತ್ರದಲ್ಲಿ ಶೇ.63ರಷ್ಟು ಮತದಾನವಾಗಿದೆ. ಇಲ್ಲಿ ಕಳೆದ ಬಾರಿ ಶೇಕಡಾ 61.27ರಷ್ಟು ಮತದಾನ ಆಗಿತ್ತು. ಇನ್ನು ಚಾಮುಂಡೇಶ್ವರಿಯಲ್ಲಿ ಶೇಕಡಾ 74, ತಿ.ನರಸೀಪುರದಲ್ಲಿ 78.77ರಷ್ಟು ಮತದಾನ ಆಗಿದೆ.

ಪಿರಿಯಾಪಟ್ಟಣದಲ್ಲಿ 84.42ರಷ್ಟು ಅಂದರೆ ಅತಿಹೆಚ್ಚು ಮತದಾನವಾಗಿದೆ. ಅದನ್ನು ಹೊರತುಪಡಿಸಿದರೆ ರಾಜ್ಯದ ಗಮನ ಸೆಳೆದಿದ್ದ ಹೈವೋಲ್ಟೇಜ್ ಕ್ಷೇತ್ರವಾದ ವರುಣದಲ್ಲಿ ಅತಿಹೆಚ್ಚು ಮತದಾನವಾಗಿದೆ.ಇಲ್ಲಿ ಶೇಕಡಾ 84.39 ರಷ್ಟು ಮತದಾನವಾಗಿದೆ. ಕಳೆದ ಬಾರಿ ವರುಣದಲ್ಲಿ ಶೇಕಡಾ 78.92ರಷ್ಟು ಮತ ಚಲಾವಣೆಯಾಗಿತ್ತು. ಹಾಗೆಯೇ ನಂಜನಗೂಡಲ್ಲಿ 80.67, ಹುಣಸೂರಲ್ಲಿ 82.16, ಕೆ.ಆರ್.ನಗರದಲ್ಲಿ 85.10 ಮತದಾನವಾಗಿದೆ.

ಕ್ಷೇತ್ರವಾರು ಮತದಾನದ ವಿವರ

ಸಂಖ್ಯೆ ಕ್ಷೇತ್ರ ಶೇಕಡವಾರು ಮತದಾನ
1 ಪಿರಿಯಾಪಟ್ಟಣ ಶೇಕಡಾ 84.42
2 ಕೆ.ಆರ್.ನಗರ ಶೇಕಡಾ 85.01
3 ಹುಣಸೂರು ಶೇಕಡಾ 82.16
4 ಎಚ್.ಡಿ.ಕೋಟೆ ಶೇಕಡಾ 79.85
5 ನಂಜನಗೂಡು ಶೇಕಡಾ 80.67
6 ಚಾಮುಂಡೇಶ್ವರಿ ಶೇಕಡಾ 74.05
7 ಕೃಷ್ಣರಾಜ ಶೇಕಡಾ 59.34
8 ಚಾಮರಾಜ ಶೇಕಡಾ 61.12
9 ನರಸಿಂಹರಾಜ ಶೇಕಡಾ 63.44
10 ವರುಣ ಶೇಕಡಾ 84.39
11 ತಿ.ನರಸೀಪುರ ಶೇಕಡಾ 78.7
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+