ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಗೆ ಇನ್ಮೇಲೆ ಅತ್ಯಾಧುನಿಕ ತಂತ್ರಜ್ಞಾನದ ಹೆಲಿಕಾಪ್ಟರ್

ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಲ್ಲಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹೊರತಾಗಿಲ್ಲ ಎಂದೆನಿಸುತ್ತದೆ. ಇದಕ್ಕೆ ಪ್ರತ್ಯಕ್ಷ ಉದಾಹರಣೆ ಅಂದರೆ ಕಳೆದೆರಡು ದಿನಗಳ ಕೆಳಗಿನಿಂದ ಸಿಎಂ ಬಳಸುತ್ತಿರುವ ಹೆಲಿಕಾಪ್ಟರ್!

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಮೇ 10 : ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಲ್ಲಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹೊರತಾಗಿಲ್ಲ ಎಂದೆನಿಸುತ್ತದೆ. ಇದಕ್ಕೆ ಪ್ರತ್ಯಕ್ಷ ಉದಾಹರಣೆ ಅಂದರೆ ಕಳೆದೆರಡು ದಿನಗಳ ಕೆಳಗಿನಿಂದ ಸಿಎಂ ಬಳಸುತ್ತಿರುವ ಹೆಲಿಕಾಪ್ಟರ್!

ಕಳೆದ ಮೂರು ವರ್ಷಗಳಿಂದ ಸಿಎಂ ಸಿದ್ದರಾಮಯ್ಯ ಹಾರಾಟ ನಡೆಸುತ್ತಿದ್ದ ಹಳೇ ಮಾದರಿಯ ಹೆಲಿಕಾಪ್ಟರ್ ಗಳಲ್ಲಿ ಪದೇ ಪದೇ ಅವಘಡಗಳು ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಆಪ್ತ ರಕ್ಷಕ ಪಡೆಯ ಮುಖ್ಯಸ್ಥರ ಸೂಚನೆ ಹಾಗೂ ತಾಂತ್ರಿಕ ತಜ್ಞರ ಅಭಿಪ್ರಾಯದಂತೆ ಅತ್ಯಾಧುನಿಕ ಸೌಲಭ್ಯವುಳ್ಳ ಎಸ್.ಜಿ.ಐ ಸಂಸ್ಥೆಗೆ ಸೇರಿದ ವಿಟಿ-ಜಿಎಸ್ ಡಿಯ ಕಪ್ಪುಬಣ್ಣದ ಹೆಲಿಕಾಪ್ಟರ್ ಅನ್ನು ಬಳಸಲು ಆರಂಭಿಸಿದ್ದು ಸರಾಗವಾಗಿ ಹಾರಾಟ ನಡೆಸಬಲ್ಲ ಸಾಮರ್ಥ್ಯ ಹೊಂದಿದೆ.[ಉಡುಪಿಯಲ್ಲಿ ಏಪ್ರಿಲ್ ಅಂತ್ಯಕ್ಕೆ ಮೋಜಿನ ಹೆಲಿಕಾಪ್ಟರ್ ಹಾರಾಟ ಆರಂಭ]

ಹೆಲಿಕಾಪ್ಟರ್ ವಿಶೇಷವೇನು..?

ಹೆಲಿಕಾಪ್ಟರ್ ವಿಶೇಷವೇನು..?

ಪ್ರತಿಕೂಲ ಹವಾಮಾನ ಸೇರಿದಂತೆ ಈಚೆಗೆ ಎದುರಾದ ಸಮಸ್ಯೆಗಳಿಂದಾಗಿ ಸಿಎಂ ಸಿದ್ದರಾಮಯ್ಯ ತಮ್ಮ ಪ್ರವಾಸಕ್ಕೆ ನವೀನ ಮಾದರಿಯ ಹೆಲಿಕಾಪ್ಟರ್ ಬಳಸಲು ಅಣಿಯಾಗಿದ್ದಾರೆ. ಆರು ಆಸನದ ಸಾಮರ್ಥ್ಯವುಳ್ಳ ಈ ಹೆಲಿಕಾಪ್ಟರ್ ತುರ್ತಾಗಿ ಯಾವ ಸ್ಥಳದಲ್ಲಿ ಬೇಕಾದರೂ ಭೂ ಸ್ಪರ್ಶ ಮಾಡಬಲ್ಲ ಸಾಮರ್ಥ್ಯ ಹೊಂದಿದೆ.

ಪಕ್ಷಿ ಡಿಕ್ಕಿಯಾದರೂ ತೊಂದರೆಯಿಲ್ಲ

ಪಕ್ಷಿ ಡಿಕ್ಕಿಯಾದರೂ ತೊಂದರೆಯಿಲ್ಲ

ಪಕ್ಷಿಗಳು ಡಿಕ್ಕಿಯಾದರು ಯಾವುದೇ ತೊಂದರೆಯಾಗದೇ ಸರಾಗವಾಗಿ ಮುಂದೆ ಸಾಗುವ ವಿಶೇಷತೆ ಹೊಂದಿದೆ. ಇನ್ನು ಮಳೆಗಾಲ ಹಾಗೂ ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ತಾಂತ್ರಿಕ ಸಮಿತಿಯ ಸಲಹೆಯಂತೆ ಸಿಎಂ ಈ ಹೆಲಿಕಾಪ್ಟರ್ ಬಳಸುತ್ತಿದ್ದಾರೆ.[ಚಿತ್ರಗಳಲ್ಲಿ: ದೇಶದ ಪ್ರಥಮ ಹೆಲಿಕಾಪ್ಟರ್ ನಿಲ್ದಾಣ]

ಹೆಲಿಕಾಪ್ಟರ್ ಎಲ್ಲಿಯದ್ದು.?

ಹೆಲಿಕಾಪ್ಟರ್ ಎಲ್ಲಿಯದ್ದು.?

ಇಸಿ 135 ಹೆಸರಿನ ಹೆಲಿಕಾಪ್ಟರ್ ಕೊಲ್ಹಾಪುರದ ಸಂಜಯ್ ಘೋದಾವತ್ ಸಮೂಹ ಸಂಸ್ಥೆಗಳಿಗೆ ಸೇರಿದ್ದಾಗಿದೆ. ಸಿಎಂ ಸಿದ್ದರಾಮಯ್ಯ ಈ ಮುನ್ನವೇ ಇದೇ ಕಂಪೆನಿಯ ಬೇರೆ ಹೆಲಿಕಾಪ್ಟರ್ ಅನ್ನು ಬಾಡಿಗೆಗೆ ಪಡೆದಿದ್ದರು ಅನ್ನುವ ಮಾಹಿತಿ ಒನ್ ಇಂಡಿಯಾಗೆ ಲಭ್ಯವಾಗಿದೆ.[ಫೆಬ್ರವರಿ 28ಕ್ಕೆ ದೇಶದ ಮೊಟ್ಟಮೊದಲ ಹೆಲಿಪೋರ್ಟ್ ಕಾರ್ಯಾರಂಭ!]

ಹವಾನಿಯಂತ್ರಿತ ತಂತ್ರಜ್ಞಾನ

ಹವಾನಿಯಂತ್ರಿತ ತಂತ್ರಜ್ಞಾನ

ಕಪ್ಪು, ಕೆಂಪು, ಬಿಳಿ ಮಿಶ್ರಿತ ಬಣ್ಣಗಳ ಈ ಹೆಲಿಕಾಪ್ಟರ್ ಸಂಪೂರ್ಣ ಹವಾನಿಯಂತ್ರಿತ ತಂತ್ರಜ್ಞಾನದ್ದಾಗಿದೆ.[ಗೃಹಪ್ರವೇಶಕ್ಕೆ ಹೆಲಿಕಾಪ್ಟರಿನಿಂದ ಪುಷ್ಟವೃಷ್ಟಿ, ಹೈಕೋರ್ಟಿನಲ್ಲಿ ಅರ್ಜಿ ವಜಾ]

ಇದುವರೆಗಿನ ಅವಘಡಗಳು

ಇದುವರೆಗಿನ ಅವಘಡಗಳು

ಬೆಂಗಳೂರಿನಲ್ಲಿ ಸಿಎಂ ಇದ್ದ ಹೆಲಿಕಾಪ್ಟರ್ ನಲ್ಲಿ ಬೆಂಕಿ ಕಾಣಿಸಿಕೊಂಡು ಪೈಲಟ್‌ ಸಮಯ ಪ್ರಜ್ಞೆಯಿಂದ ತಕ್ಷಣ ಕೆಳಗಿಳಿದು ಪ್ರಾಣಪಾಯದಿಂದ ಪಾರಾಗಿದ್ದರು. ಕಳೆದ ತಿಂಗಳು ಬೆಂಗಳೂರು ಹೆಚ್‌ಎಎಲ್ ನಿಂದ ಶ್ರವಣ ಬೆಳಗೊಳಕ್ಕೆ ತೆರಳುತ್ತಿದ್ದಾಗ ಪಕ್ಷಿಯೊಂದು ಹೆಲಿಕಾಪ್ಟರ್ ಗೆ ಡಿಕ್ಕಿ ಹೊಡೆದಿದ್ದರಿಂದ ಸಿಎಂ ತಕ್ಷಣ ಕೆಳಗಿಳಿದು ಅರ್ಧ ಗಂಟೆ ಬಿಟ್ಟು ಪುನಃ ಹಾರಾಟ ನಡೆಸಿದ್ದರು.[ಬಹುಕೋಟಿ ಹೆಲಿಕಾಪ್ಟರ್ ಹಗರಣ: ಎಸ್ ಪಿ ತ್ಯಾಗಿಗೆ ಜಾಮೀನು]

ಪೋಟೋ ಕೃಪೆ - ನಂದನ್ ಎ

English summary
Karnataka Chief minister Siddaramaiah will use an advanced helicopter from now onwards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X