ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಣ್ಣಾವ್ರು ಕೂಡ ರುಚಿ ನೋಡಿದ್ದರು ಮೈಸೂರು ಮೈಲಾರಿ ಹೋಟೆಲ್ ತಿಂಡಿ

By ಯಶಸ್ವಿನಿ ಎಂ.ಕೆ.
|
Google Oneindia Kannada News

ಮೈಸೂರು ಮಸಾಲೆ ದೋಸೆಯ ಬಗ್ಗೆ ಈ ದಿನ ಒಂದಿಷ್ಟು ವಿಚಾರ ಹೇಳಿ, ಮೈಸೂರಿನ ನಜರ್ ಬಾದ್ ಮುಖ್ಯರಸ್ತೆಯಲ್ಲಿ ಇರುವ 'ಹೋಟೆಲ್ ಓಲ್ಡ್ ಒರಿಜಿನಲ್ ವಿನಾಯಕ ಮೈಲಾರಿ' ಬಗ್ಗೆ ತಿಳಿಸಬೇಕು ಅನ್ನೋದು ಇಂದಿನ ಲೇಖನದ ಉದ್ದೇಶ. ಬಾಯ್ಮಾತಿನಲ್ಲಿ ಮೈಲಾರಿ ಹೋಟೆಲ್, ಮೈಲಾರಿ ಹೋಟೆಲ್ ಅಂತಾರೆ. ಆದರೂ ಇದೇ ಅಸಲಿ ಮೈಲಾರಿ ಹೋಟೆಲ್.

ಮೈಸೂರಿನಲ್ಲಿ ಅರಮನೆಗೆ ಹೋಗಿದ್ರಾ, ಝೂಗೆ ಹೋಗಿದ್ರಾ, ಅಲ್ಲಿಗೆ-ಇಲ್ಲಿಗೆ ಹೋಗಿದ್ರಾ ಎಂಬ ಪ್ರಶ್ನೆಗಳ ಜತೆಗೆ ಬಲ್ಲವರು, 'ಮೈಲಾರಿ ಹೋಟೆಲ್ ಗೆ ಹೋಗಿದ್ರಾ?' ಎಂದು ಕೇಳಿದರೂ ಅಚ್ಚರಿ ಪಡಬೇಕಿಲ್ಲ. ಏಕೆಂದರೆ, ಈ ಹೋಟೆಲ್ ಗೆ ಎಪ್ಪತ್ತು ವರ್ಷಗಳ ಇತಿಹಾಸವಿದೆ. ಮೈಲಾರಸ್ವಾಮಿ ಎಂಬುವವರು ಇದನ್ನು ಆರಂಭಿಸಿದ್ದಾರೆ.

ಚಪ್ಪಲಿ ಕಳಚಿಟ್ಟು ಊಟಕ್ಕೆ ಬನ್ನಿ, ಇದು ಮೈಸೂರಿನ ಮಧ್ವ ಭವನ!ಚಪ್ಪಲಿ ಕಳಚಿಟ್ಟು ಊಟಕ್ಕೆ ಬನ್ನಿ, ಇದು ಮೈಸೂರಿನ ಮಧ್ವ ಭವನ!

ಸದ್ಯಕ್ಕೆ ಮೈಲಾರಸ್ವಾಮಿ ಅವರ ಮಗ ರಾಜಶೇಖರ್ ಮತ್ತು ಮೊಮ್ಮಗ ಉಜ್ವಲ್ ಹೋಟೆಲ್ ನ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಬಿಸಿ ಬಿಸಿ ತುಪ್ಪದ ಖಾಲಿ ದೋಸೆ, ಸ್ಪೆಷಲ್ ಮಸಾಲೆ ದೋಸೆ ಇವೆರಡರ ಬಗ್ಗೆಯಂತೂ ನಿಮಗೆ ವಿಪರೀತ ಪ್ರೀತಿ ಇದ್ದರೆ, ಹೋಟೆಲ್ ಆದರೂ ಓಕೆ, ಆದರೆ ಅಲ್ಲಿ ಶುಚಿ-ರುಚಿಯಾಗಿರಬೇಕು ಅಂತಿದ್ದರೆ ಮೈಲಾರಿ ಹೋಟೆಲ್ ನಲ್ಲಿ ತಿಂಡಿ ತಿನ್ನಲೇಬೇಕು.

ರಾಜಕುಮಾರ್ ಕೂಡ ಇಲ್ಲಿನ ತಿಂಡಿ ಸವಿದಿದ್ದಾರೆ

ರಾಜಕುಮಾರ್ ಕೂಡ ಇಲ್ಲಿನ ತಿಂಡಿ ಸವಿದಿದ್ದಾರೆ

ಈ ಹೋಟೆಲ್ ಇರುವುದು ಮೈಸೂರು ಮೃಗಾಲಯಕ್ಕೆ ಬಹಳ ಸಮೀಪದಲ್ಲಿ. ಆದ್ದರಿಂದ ಪ್ರವಾಸಿಗರು ಅಲ್ಲಿಗೆ ಬಂದು, ಆ ನಂತರ ಇಲ್ಲಿಗೆ ಬರುವುದು ಹಾಗೂ ಇಲ್ಲಿ ತಿಂಡಿ ಜಮಾಯಿಸಿ, ಆ ನಂತರ ಮೃಗಾಲಯದಲ್ಲಿ ಸುತ್ತಿ ಬರುವುದು ಎರಡೂ ಉಂಟು. ಕನ್ನಡದ ಮೇರು ನಟ ರಾಜಕುಮಾರ್ ಅವರೂ ಸೇರಿದ ಹಾಗೆ ಹಲವಾರು ನಟ-ನಟಿಯರು ಇಲ್ಲಿನ ಮಸಾಲೆ ದೋಸೆ- ಇಡ್ಲಿ ಮತ್ತಿತರ ತಿಂಡಿಗಳ ರುಚಿ ಸವಿದಿದ್ದಾರೆ. ಅಷ್ಟೇ ಏಕೆ, ಇತ್ತೀಚಿನ ತಲೆಮಾರಿನ ಪುನೀತ್ ರಾಜಕುಮಾರ್, ಸುದೀಪ, ಉಪೇಂದ್ರ ಇನ್ನೂ ಹಲವರು ಸಾಮಾನ್ಯ ಗ್ರಾಹಕರಂತೆ ಇಲ್ಲಿನ ತಿಂಡಿಯನ್ನು ಸವಿದಿದ್ದಾರೆ.

ಗರಿ ಗರಿ ಮಸಾಲೆ ಹಾಗೂ ಹೂವಿನಷ್ಟು ಕೋಮಲ ಕಾಲಿ ದೋಸೆ

ಗರಿ ಗರಿ ಮಸಾಲೆ ಹಾಗೂ ಹೂವಿನಷ್ಟು ಕೋಮಲ ಕಾಲಿ ದೋಸೆ

ಗರಿಗರಿಯಾದ ಮಸಾಲೆ ದೋಸೆ, ಹೂವಿನಷ್ಟು ಕೋಮಲ ಎನಿಸುವ ಕಾಲಿ ದೋಸೆ, ನಾಲಗೆಗೆ ಮೋಹ ಹುಟ್ಟಿಸುವ ಚಟ್ನಿ- ಆಲೂಗಡ್ಡೆ ಪಲ್ಯ-ಸಾಗು...ಇವೆಲ್ಲದರ ಬಗ್ಗೆಯೂ ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇವೆಲ್ಲಕ್ಕೂ ಕಿರೀಟ ಇಟ್ಟಂತೆ ತುಪ್ಪದ ವಾಸನೆ ಕೈಗೆ ಅಂಟಿರುವುದನ್ನು ಕಣ್ಣು ಮುಚ್ಚಿಕೊಂಡು ಒಮ್ಮೆ ಆಘ್ರಾಣಿಸಿ, ವಾಹ್ ಎನ್ನುತ್ತಾರೆ. ಈ ಹೋಟೆಲ್ ನಲ್ಲಿ ಪ್ರವಾಸಿಗರ ಸಂಖ್ಯೆಯೇ ಹೆಚ್ಚಾಗಿರುತ್ತದೆ. "ಕೆಲವರು ಒಮ್ಮೆಗೇ ಅರ್ಧ ಡಜನ್ ದೋಸೆ ಕೂಡ ತಿನ್ನುವುದುಂಟು" ಎಂದು ಸಪ್ಲೈಯರ್ ಹೇಳುವ ಮಾತು ಯಾವ ರೀತಿಯಲ್ಲೂ ಅತಿಶಯೋಕ್ತಿ ಏನಲ್ಲ.

ಒರಿಜಿನಲ್ ಮೈಲಾರಿ ಹೋಟೆಲ್‌ ನ ಯಾವುದೇ ಶಾಖೆ ಆರಂಭಿಸಿಲ್ಲ

ಒರಿಜಿನಲ್ ಮೈಲಾರಿ ಹೋಟೆಲ್‌ ನ ಯಾವುದೇ ಶಾಖೆ ಆರಂಭಿಸಿಲ್ಲ

ಇನ್ನು ಮೈಲಾರಿ ಹೋಟೆಲ್‌ ನ ಜನಪ್ರಿಯತೆಯಿಂದಾಗಿ ಮೈಸೂರಿನಲ್ಲಿ ನಾಲ್ಕಾರು ಮೈಲಾರಿ ಹೋಟೆಲ್‌ಗ‌ಳು ತಲೆ ಎತ್ತಿವೆ. ಆದರೆ ಈ ಒರಿಜಿನಲ್ ಮೈಲಾರಿ ಹೋಟೆಲ್‌ ನ ಯಾವುದೇ ಶಾಖೆ ಆರಂಭಿಸಿಲ್ಲ. ಇರುವುದು ಇದೊಂದೇ ಹೋಟೆಲ್ ಎನ್ನುತ್ತಾರೆ ಮಾಲೀಕರು. 40 ರುಪಾಯಿಗೆ ಬಿಸಿ ಬಿಸಿ, ಗರಿ ಗರಿ ಸಾಗು ಮಸಾಲೆ ದೋಸೆ ಸಿಗುತ್ತದೆ. ಸಂಜೆಯ ವೇಳೆ ಬಿಸಿಬಿಸಿ ಇಡ್ಲಿ, ರವೆ ಇಡ್ಲಿ, ಸ್ಪೆಷಲ್‌ ದೋಸೆ ಅಂದರೆ ತುಪ್ಪದ ದೋಸೆ, ಬಿಸಿ ಬಿಸಿ ಬಜ್ಜಿ ತಿನ್ನಲೆಂದೇ ಮಾಮೂಲಿ ಗ್ರಾಹಕರು ಬರುತ್ತಾರೆ. ರಾಜಕಾರಣಿಗಳು, ಕಿರುತೆರೆ ಕಲಾವಿದರಿಗೆ ಕೂಡ ಇದು ಫೇವರಿಟ್ ಅಡ್ಡಾ.

ಬುಧವಾರದಂದು ಹೋಟೆಲ್ ಗೆ ರಜಾ

ಬುಧವಾರದಂದು ಹೋಟೆಲ್ ಗೆ ರಜಾ

ಇಷ್ಟೆಲ್ಲ ಹೇಳಿದ ಮೇಲೆ ನಾವು ಆ ಕಡೆ ಹೋದಾಗ ಒಮ್ಮೆ ಖಂಡಿತಾ ಹೋಗ್ತೀವಿ. ಚೆನ್ನಾಗಿ ಇರದಿದ್ದರೆ ನಿಮಗೆ ಇದೆ ಗ್ರಹಚಾರ ಅಂದಕೊಳ್ಳುತ್ತಿದ್ದೀರಾ? ಧಾರಳವಾಗಿ ಹೋಗಿಬನ್ನಿ. ಆದರೆ ಈ ಹೋಟೆಲ್ ಬುಧವಾರದ ದಿನ ರಜಾ ಅನ್ನೋದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಆ ದಿನ ಹೊರತುಪಡಿಸಿ ಉಳಿದಂತೆ ಗುರುವಾರದಿಂದ ಮಂಗಳವಾರದವರೆಗೆ ಬೆಳಗ್ಗೆ 6.30ರಿಂದ ಮಧ್ಯಾಹ್ನ 1.30ರ ತನಕ ಹಾಗೂ ಮಧ್ಯಾಹ್ನ 3ರಿಂದ ರಾತ್ರಿ 8.30ರ ತನಕ ತೆರೆದಿರುತ್ತದೆ. ಆದ್ದರಿಂದ ರಜಾ ಇಲ್ಲದ ದಿನಗಳಲ್ಲೇ ಹೋಗಿ. ನಿಮಗೆ ಮೈಲಾರಿ ಹೋಟೆಲ್ ನ ಬಗ್ಗೆ ಏನನಿಸಿತು ಎಂಬ ಬಗ್ಗೆ ಒಂದು ಸಾಲು ಬರೆಯಿರಿ.

English summary
Kannada movie great actor Rajkumar also tasted mouthwatering Masala dosa in Mysuru Mylari hotel. Here is the story about wonderful eating point of Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X