Kabini Dam: ವ್ಯಾಪಕ ಮಳೆಗೆ ಒಂದೇ ದಿನದಲ್ಲಿ ಭಾರೀ ಒಳಹರಿವು ದಾಖಲು, ಇಂದಿನ ವಿವರ
ಬೆಂಗಳೂರು, ಜೂನ್ 28: ಕರ್ನಾಟಕ ರಾಜ್ಯದಲ್ಲಿ ಪಶ್ಚಿಮ ಘಟ್ಟದ ಸಾಲಿಗೆ ಸೇರುವ ವಿವಿಧ ಜಿಲ್ಲೆಗಳು ಹಾಗೂ ಕರಾವಳಿ ಭಾಗದಲ್ಲಿ ಮುಂಗಾರು ಮಳೆ ತನ್ನ ಆರ್ಭಟ ಮುಂದುವರೆಸಿದೆ. ಕೇರಳ, ಮೈಸೂರು ಹಾಗೂ ಅರಣ್ಯ ಪ್ರದೇಶ ಮತ್ತು ಮಲೆನಾಡು ಭಾಗದಲ್ಲಿ ನಿತ್ಯ 50ರಿಂದ 200 ಮಿಲಿ ಮೀಟರ್‌ಗೂ ಹೆಚ್ಚು ಮಳೆ ದಾಖಲಾಗುತ್ತಿದೆ. ಪರಿಣಾಮ ಕಪಿಲಾ ನದಿಯಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದ್ದು, ಇದರಿಂದ ಕಬಿನಿ ಜಲಾಶಯದ (Kabini Dam) ಒಳಹರಿವು ವ್ಯಾಪಕವಾಗಿ ಏರತೊಡಗಿದೆ.
ಹೌದು, ಕಬಿನಿ ಜಲಾಶಯ ಹಾಗೂ ಕಪಿಲಾ ನದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದು ಎರಡು ವಾರಗಳಿಂದ ಇನ್ನಿಲ್ಲದಂತೆ ಮಳೆ ಆಗುತ್ತಿದೆ. ಇದು ಪ್ರತಿ ವರ್ಷದಂತೆ ಈ ವರ್ಷವು ಸಾಮಾನ್ಯವಾಗಿ ಬೀಳುವ ಮಳೆ ಇದು ಎನ್ನಲಾಗುತ್ತಿದೆ. ತೀವ್ರ ಬರಗಾಲದಿಂದ ಉಂಟಾಗಿದ್ದ ಕೊರತೆಯನ್ನು ನೀಗಿಸುವಂತೆ ಅತೀ ಕಡಿಮೆ ಸಮಯದಲ್ಲಿ ಅತ್ಯಧಿಕ ಮಳೆ ದಾಖಲಾಗುತ್ತಿದೆ.

ಇದರಿಂದ ಕೇರಳ ಮೂಲದಲ್ಲಿ ಹುಟ್ಟುವ ಕಪಿಲಾ ನದಿಯುವ ಅರಣ್ಯ, ಕಣಿವೆ ಪ್ರದೇಶಗಳ ಹಾದು ಕರ್ನಾಟಕದ ಕಾವೇರಿ ನದಿಗೆ ಬಂದು ಸೇರುತ್ತದೆ. ಮುಂಗಾರು ಬಿರುಸಿನ ಹಿನ್ನೆಲೆಯಲ್ಲಿ ಇಂದು ಜೂನ್ 27ರಂದು ಶುಕ್ರವಾರ ಕಬಿನಿ ಜಲಾಶಯದಲ್ಲಿ ಅತ್ಯಧಿಕ ಒಳಹರಿವು ಕಂಡು ಬಂದಿದೆ. ತಕ್ಕಮಟ್ಟಿನ ಹೊರ ಹರಿವು ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.
ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ
ಕಬಿನಿ ಜಲಾಶಯದಲ್ಲಿ (Kabini Reservoir) ಇಂದು ಅತ್ಯಧಿಕ ಒಳಹರಿವು ಹೆಚ್ಚಾಗಿದೆ. ಇಂದು 28ನೇ ಜೂನ್ 2024 ರಂದು ಕಬಿನಿ ಜಲಾಶಯದಲ್ಲಿ ಬರೋಬ್ಬರಿ 20,113 ಕ್ಯೂಸೆಕ್ ಒಳಹರಿವು ನಷ್ಟಿದೆ.
ಕಬಿನಿಯ ಡ್ಯಾಂ ನ ಒಟ್ಟು ಜಲಾಶಯದ ಮಟ್ಟ 19.52 ಟಿಎಂಸಿ ಎಂದು ಸರ್ಕಾರದ ಅಧಿಕೃತ ಮಾಹಿತಿ ಇದೆ. ಇದರಲ್ಲಿ ಇಂದಿನವರೆಗೆ 11.31 ಟಿಎಂಸಿ ಇದೆ. ಇಂದು ಒಳಹರಿವು 20,113 ಕ್ಯೂಸೆಕ್ ಇದ್ದರೆ, ನದಿ ಇನ್ನಿತರ ನೀರಾವರಿ ಮೂಲಗಳಿಗೆ ಹೊರ ಹರಿವಿನ ಮೂಲಕ 1577 ಕ್ಯೂಸೆಕ್ಸ್ ನೀರನ್ನು ಬಿಡಲಾಗುತ್ತಿದೆ.

ಮುಂದುವರಿಯಲಿದೆ ಭಾರೀ ಮಳೆ
ಕಾವೇರಿ ನದಿಯ ಉಪನದಿ ಎನ್ನಲಾಗುತ್ತಿರುವ ಕಪಿಲಾ ನದಿಗೆ ಅಡ್ಡಲಾಗಿ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯಲ್ಲಿ ಈ ಕಬಿನಿ ಆಣೆಕಟ್ಟು ನಿರ್ಮಿಸಲಾಗಿದೆ. ಇದರಿಂದ ಹತ್ತಾರು ಗ್ರಾಮಗಳು, ಸಾವಿರಾರು ಎಕರೆಯ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದೆ. ಇದಕ್ಕೆಲ್ಲ ಜೀವಕಳೆ ಬರಲು ನಿತ್ಯ ಸುರಿಯುತ್ತಿರುವ ಮುಂಗಾರು ಮಳೆ ಕಾರಣ ಎನ್ನಲಾಗಿದ್ದು, ಭಾರೀ ಮುಂದುವರಿಯಲಿದೆ.
ಇತರ ಜಲಾಶಯಗಳ ಮಟ್ಟದ ವಿವರ
ಕಬಿನಿ ಜಲಾಶಯದ ಜೊತೆಗೆ ಇತರ ಜಲಾಶಯಗಳ ಒಳಹರಿವು ಸಹ ಏರಿಕೆ ಆಗಿದೆ. ಅವುಗಳ ವಿವರ ನೋಡುವುದಾದರೆ, ಇಂದು ಕೃಷ್ಣರಾಜ ಸಾಗರ (KRS Dam Water Level) 13,437 ಕ್ಯೂಸೆಕ್ ನೀರಿನ ಒಳಹರಿವು ಇದೆ. ಹೇಮಾವತಿ ಆಣೆಕಟ್ಟಿನಲ್ಲಿ (Hemavati dam) ಇಂದು 7695 ಕ್ಯೂಸೆಕ್ ಹಾಗೂ ಹಾರಂಗಿ ಜಲಾಶಯದಲ್ಲಿ (Harangi Dam water level) ಇಂದು ಒಟ್ಟು 2562 ಕ್ಯೂಸೆಕ್ ಒಳಹರಿವು ಇದೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.












Click it and Unblock the Notifications