ಇದ್ಯಾಕೆ ಜೆಡಿಎಸ್ ಪಕ್ಷದ ಬಗ್ಗೆ ಡಾ.ಪರಮೇಶ್ವರ್ ಹೀಗೆ ಹೇಳ್ಬಿಟ್ರು?

Recommended Video

      ಜೆಡಿಎಸ್ ನವರನ್ನು ನಂಬಿ ಏನಾದರೂ ಮಾಡಲು ಸಾಧ್ಯವೇ ಎಂದ ಡಾ. ಜಿ ಪರಮೇಶ್ವರ್ | Oneindia Kannada

      ಮೈಸೂರು, ನ 26: ಹದಿನೈದು ಅಸೆಂಬ್ಲಿ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕ್ಷೇತ್ರಗಳಲ್ಲಿ ಹುಣಸೂರು ಕೂಡಾ ಒಂದು.

      ಹಲವು ದಿನಗಳ ನಂತರ ಬಹಿರಂಗ ಪ್ರಚಾರಕ್ಕೆ ಇಳಿದಿರುವ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಡಾ.ಪರಮೇಶ್ವರ, ಹುಣಸೂರು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರವನ್ನು ಮಾಡಿದ್ದಾರೆ.

      ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪರಮೇಶ್ವರ್, ಜೆಡಿಎಸ್ ಪಕ್ಷವನ್ನು 'ಕೋತಿಗಳಿಗೆ' ಹೋಲಿಸಿದ್ದಾರೆ. ಅವರನ್ನು ನಂಬಿ ಏನಾದರೂ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

      JDS Party Is Like Monkey, They Will Not Stick In One Place: Congress Leader Parameshwar

      "ಜೆಡಿಎಸ್ ನವರದ್ದು ಬೆಳಗ್ಗೆ ಒಂದು ಕಥೆ, ಸಾಯಂಕಾಲಕ್ಕೆ ಮತ್ತೊಂದು, ರಾತ್ರಿಯಾದರೆ ಬೇರೆ ಇನ್ನೇನೋ, ಇವರನ್ನು ಕಟ್ಟಿಕೊಂಡು ಎಲ್ಲಿ ಸಾಯೋಣ" ಎಂದು ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ.

      "ಜೆಡಿಎಸ್ ನವರು ಒಂದು ಕಡೆ ನಿಂತ ಕಡೆ ನಿಲ್ಲುವುದಿಲ್ಲ. ಮರದಿಂದ ಮರಕ್ಕೆ ಹಾರುವ ಕೋತಿಗಳ ರೀತಿ ಹಾರುತ್ತಲೇ ಇರುತ್ತಾರೆ" ಎಂದು ಪರಮೇಶ್ವರ್ ವ್ಯಂಗ್ಯವಾಡಿದ್ದಾರೆ.

      "ಜೆಡಿಎಸ್ ನವರು ಚಂಚಲ ಮನಸ್ಸಿನವರು. ಅವರನ್ನು ಎಷ್ಟೇ ಚೆನ್ನಾಗಿ ನೋಡಿಕೊಂಡರೂ ಅವರಿಗೆ ತೃಪ್ತಿ ಅನ್ನೋದು ಇಲ್ಲ. ಈ ಚುನಾವಣೆಯಲ್ಲಿ ಅವರಿಗೆ ಸರಿಯಾದ ಪಾಠವನ್ನು ಕಲಿಸಿ" ಎಂದು ಪರಮೇಶ್ವರ್, ಹುಣಸೂರು ಮತದಾರಾರರಲ್ಲಿ ಮನವಿ ಮಾಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+