ಕಪಿಲಾ ನದಿಯಲ್ಲಿ ಕಾಲು ಜಾರಿ ಬಿದ್ದಿದ್ದು, ಮೋಕ್ಷಕ್ಕೆಂದಲ್ಲ: ಸ್ಪಷ್ಟನೆ
ನಂಜುಂಡೇಶ್ವರನ ದರ್ಶನಕ್ಕಾಗಿ ನಂಜನಗೂಡಿಗೆ ಬೆಂಗಳೂರಿನಿಂದ ಬಂದಿದ್ದೆವು, ದರ್ಶನ ಮುಗಿಸಿ ಕಪಿಲಾ ನದಿಗೆ ತೆರಳಿ ತಲೆಗೆ ನೀರು ಹಾಕಿಕೊಳ್ಳುತ್ತಿದ್ದಾಗ ಪತಿಯ ಕಾಲು ಜಾರಿತ್ತು, ಅವರನ್ನು ಹಿಡಿದುಕೊಳ್ಳಲು ಹೋಗಿ ತಾನೂ ಕೂಡ ನೀರಿಗೆ ಬಿದ್ದಿರುವುದಾಗಿ ಕಲಾವತಿ ತಿಳಿಸಿದ್ದಾರೆ.
ಯಾರೋ ಕಪಿಲಾ ನದಿಗೆ ಹಾರಿ ಪ್ರಾಣ ಬಿಟ್ಟರೆ ಮೋಕ್ಷ ಸಿಗುತ್ತದೆ ಎಂದು ಹೇಳಿದ್ದನ್ನು ಕೇಳಿಸಿಕೊಂಡ ವೃದ್ಧ ದಂಪತಿ ನದಿಗೆ ಹಾರಿದ್ದಾರೆ ಎಂದು ಸುದ್ದಿ ಹರಿದಾಟಿತ್ತು. ಈ ಕುರಿತು ಕಲಾವತಿ ಸ್ಪಷ್ಟನೆ ನೀಡಿದ್ದಾರೆ.ದಂಪತಿ ಬೆಂಗಳೂರಿನ ಹೆಬ್ಬಾಳದ ನಿವಾಸಿಯಾಗಿದ್ದಾರೆ.

ಇದೀಗ ಅಸ್ವಸ್ಥ ಕಲಾವತಿಯನ್ನು ನಂಜನಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ನಂಜನಗೂಡು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications