Narayana Murthy: ಮನುಷ್ಯನಿಗೆ ಮೀನು ತಿನ್ನಿಸುವ ಬದಲಿಗೆ ಹಿಡಿಯುವುದನ್ನು ಕಲಿಸಿ-ನಾರಾಯಣ ಮೂರ್ತಿ
ಮೈಸೂರು, ಜನವರಿ 18: ಒಬ್ಬ ಮನುಷ್ಯನಿಗೆ ಮೀನನ್ನು ತಿನ್ನಿಸಿ ನೀವು ಅವನಿಗೆ ಒಂದು ದಿನ ಆಹಾರ ನೀಡುವುದರಿಂದ ಪ್ರಯೋಜನವಿಲ್ಲ. ಬದಲಿಗೆ ಅವನಿಗೆ ಮೀನು ಹಿಡಿಯಲು ಕಲಿಸಿ ಆ ಮೂಲಕ ನೀವು ಅವನಿಗೆ ಜೀವನಪರ್ಯಂತ ಆಹಾರ ನೀಡಿದಂತಾಗುತ್ತದೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಬದುಕುವ ಕೌಶಲ್ಯವನ್ನು ಕಲಿಸುವುದು ಹೇಗೆ ಎನ್ನುವುರ ಬಗ್ಗೆ ಮಾತನಾಡಿದ್ದಾರೆ.
ಬೇರುಂಢ ಫೌಂಡೇಶನ್ ವತಿಯಿಂದ ಮೈಸೂರು ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಮೈಸೂರು ಉದ್ಯಮಗಳ ವೇದಿಕೆ ಉದ್ಘಾಟಿಸಿ ಮಾತನಾಡಿದ ಅವರು, ಗರೀಬಿ ಹಠಾವೋ ಅಂತಹ ಘೋಷಣೆಗಳು ಕೇವಲ ಹೇಳಿಕೆಗಳಿಗೆ ಸೀಮಿತವಷ್ಟೇ. ಉದ್ಯೋಗ ನೀಡುವುದರಿಂದ ಅಭಿವೃದ್ಧಿ ಆಗುತ್ತದೆಯೇ ಹೊರತು ಉಚಿತವಾಗಿ ಹಣ ಹಂಚುವುದರಿಂದ ಅಲ್ಲ. ಆದ್ದರಿಂದ ಸರ್ಕಾರಗಳು ನೇರವಾಗಿ ಉದ್ಯೋಗ ನೀಡುವುದಲ್ಲ, ಉದ್ಯೋಗ ಸೃಷ್ಟಿಸುವ ಉದ್ಯಮಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಹೇಳಿದರು.

ಆರ್ಥಿಕತೆ ನಿರ್ಮಾಣದಲ್ಲಿ ಸರ್ಕಾರದ ಪಾಲ್ಗೊಳ್ಳುವಿಕೆ ಕಡಿಮೆ ಇದ್ದಷ್ಟು ಫಲಿತಾಂಶ ಉತ್ತಮವಾಗಿರುತ್ತದೆ. ಸರ್ಕಾರಗಳು ಉದ್ಯೋಗ ಹಾಗೂ ಸಂಪತ್ತಿನ ಸೃಷ್ಟಿಗೆ ಪೂರಕವಾದ ನಿಯಮಗಳನ್ನು ರೂಪಿಸಬೇಕು. ಅದರಿಂದ ಸಂಗ್ರಹವಾಗುವ ತೆರಿಗೆಯನ್ನು ದೇಶದ ಅಭಿವೃದ್ಧಿಗೆ ವಿನಿಯೋಗಿಸಬೇಕು ಎಂದು ಸಲಹೆ ನೀಡಿದರು.
ಗರೀಬಿ ಹಠಾವೋ ಅಂತಹ ಘೋಷಣೆಗಳು ಕೇವಲ ಹೇಳಿಕೆಗಳಿಗೆ ಸೀಮಿತವಷ್ಟೇ. ಉದ್ಯೋಗ ನೀಡುವುದರಿಂದ ಅಭಿವೃದ್ಧಿ ಆಗುತ್ತದೆಯೇ ಹೊರತು ಉಚಿತವಾಗಿ ಹಣ ಹಂಚುವುದರಿಂದ ಅಲ್ಲ. ಉದ್ಯಮಗಳು ಬೆಳೆದು ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾದಾಗ ಮಾತ್ರ ಬಡತನ ನಿರ್ಮೂಲನೆ ಸಾಧ್ಯ. ರಾಜಕಾರಣಿಗಳು, ಅಧಿಕಾರಿಗಳು ಈ ದೇಶದ ನಿರ್ಮಾತೃಗಳಲ್ಲ. ಉದ್ಯಮಿಗಳು ನಿಜವಾದ ನಿರ್ಮಾತೃಗಳು, ಬಡ ರೈತ, ಕಾರ್ಮಿಕರಿಗೆ ಶಕ್ತಿ ತುಂಬುವ ಸಾಮರ್ಥ್ಯ ಇರುವುದು ಅವರಿಗೆ ಮಾತ್ರ ಎಂದರು.

ಇಂದಿಗೂ 80 ಕೋಟಿ ಜನರಿಗೆ ಉಚಿತ ಪಡಿತರ ನೀಡುತ್ತಿರುವ ಭಾರತದಂತಹ ಒಂದೇ ಆರ್ಥಿಕತೆಯನ್ನು ನೆಚ್ಚಿ ಕೂರಬೇಡಿ. ಜಾಗತಿಕ ಮಾರುಕಟ್ಟೆಗೆ ತಕ್ಕಂತೆ ನಿಮ್ಮ ಯೋಜನೆಗಳನ್ನು ರೂಪಿಸಿ. ಸುಸ್ಥಿರ, ಜಾಗತಿಕ ದರ್ಜೆಯ ಗುಣಮಟ್ಟದ ಉದ್ಯಮ ನಿಮ್ಮ ಆದ್ಯತೆಯಾಗಲಿ ಎಂದು ಉದ್ಯಮಿಗಳಿಗೆ ಕಿವಿಮಾತು ಹೇಳಿದರಲ್ಲದೆ, ಸಮಾಜದಲ್ಲಿನ ಬಡತನ, ಶಿಕ್ಷಣ ಹಾಗೂ ಅರೋಗ್ಯ ಕ್ಷೇತ್ರದಲ್ಲಿನ ಅಸಮಾನತೆ ತೊಡೆದು ಹಾಕಲು ಶ್ರಮಿಸುವುದು ಉದ್ಯಮಿಗಳ ಕರ್ತವ್ಯ. ಕಟ್ಟಕಡೆಯ ಹಳ್ಳಿಯ ಬಡ ಮಗುವಿನ ಜೀವನಮಟ್ಟ ಸುಧಾರಣೆ ನಮ್ಮ ಹೊಣೆ ಎಂದು ಎಂದರು.
ಉದ್ಯಮಿಗಳು ವ್ಯವಹಾರದಿಂದ ಗ್ರಾಹಕರಿಗೆ ಮತ್ತು ವ್ಯವಹಾರದಿಂದ ವ್ಯವಹಾರಕ್ಕೆ ಮಾರುಕಟ್ಟೆಗಳಲ್ಲಿ ತಮ್ಮ ಗ್ರಾಹಕರಿಗೆ ಮೌಲ್ಯವನ್ನು ತಲುಪಿಸಬೇಕು. ಒಂದು ಕಲ್ಪನೆಯ ಶಕ್ತಿ ,ಸಮಸ್ಯೆಗಳನ್ನು ಪರಿಹರಿಸುವ ಮತ್ತು ಸರಳ ಮತ್ತು ಪ್ರಭಾವಶಾಲಿ ರೀತಿಯಲ್ಲಿ ತಲುಪಿಸುವ ಸಾಮರ್ಥ್ಯದಲ್ಲಿದೆ. ಉದ್ಯಮಿಗಳು ತಮ್ಮ ಮಾನದಂಡಗಳನ್ನು ವಿಶ್ವದ ಅತ್ಯುತ್ತಮ ವಾದವುಗಳ ವಿರುದ್ಧ ಬೆಂಚ್ಮಾರ್ಕ್ ಮಾಡಲು ಮತ್ತು ಅವರ ಮಾರುಕಟ್ಟೆ ಗಮನ ವೈವಿಧ್ಯಗೊಳಿಸಬೇಕು. ಭಾರತಕ್ಕಾಗಿ ಮಾತ್ರ ವಿನ್ಯಾಸ ಮಾಡಬೇಡಿ. ಜಾಗತಿಕವಾಗಿ ಸ್ಪರ್ಧಿಸಿ ಮತ್ತು ಅಂತರರಾಷ್ಟ್ರೀಯ ಶ್ರೇಷ್ಠತೆ ಗುರಿಯಾಗಿರಿಸಿಕೊಳ್ಳಿ ಎಂದು ಸಲಹೆ ನೀಡಿದರು.












Click it and Unblock the Notifications