ಮೈಸೂರು : ಎಟಿಎಂಗೆ ನುಗ್ಗಿ 2 ಲಕ್ಷ ದೋಚಿ ಪರಾರಿ
ಮೈಸೂರು, ಏ. 21 : ಪಿರಿಯಾಪಟ್ಟಣದಲ್ಲಿ ಬ್ಯಾಂಕ್ ಕಟ್ಟದಲ್ಲಿದ್ದ ಎಟಿಎಂಗೆ ನುಗ್ಗಿದ್ದ ಕಳ್ಳರು 2 ಲಕ್ಷ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಮೂವರು ಮುಸುಕುಧಾರಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸೋಮವಾರ ರಾತ್ರಿ ಪಿರಿಯಾಪಟ್ಟಣದ ಪಂಚವಳ್ಳಿಯಲ್ಲಿರುವ ಇಂಡಿಯನ್ ಓವರ್‌ಸಿಸ್ ಬ್ಯಾಂಕ್ ಎಟಿಎಂಗೆ ನುಗ್ಗಿದ ಕಳ್ಳರು 2 ಲಕ್ಷ ಹಣ ಮತ್ತು ಹಣವಿರುವ ಮತ್ತೊಂದು ಪೆಟ್ಟಿಗೆಯೊಂದಿಗೆ ಪರಾರಿಯಾಗಿದ್ದಾರೆ. [ಹಣದ ಜೊತೆ ಎಟಿಎಂ ವಾಹನ ಅಪಹರಿಸಿದವರು ಸಿಕ್ಕಿಬಿದ್ರು]

3 ರಿಂದ 4 ಜನರ ಗುಂಪು ಈ ದರೋಡೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಮೂವರು ಮುಸುಕುಧಾರಿಗಳು ಎಟಿಎಂಗೆ ನುಗ್ಗುವ ಮತ್ತು ಎಟಿಎಂ ಯಂತ್ರ ಜಖಂಗೊಳಿಸುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. [ಮಿತಿ ಮೀರಿದ ಎಟಿಎಂ ಬಳಕೆ ಕೈ ಕಚ್ಚಲಿದೆ]
ಬ್ಯಾಂಕ್ ಕಟ್ಟಡದಲ್ಲಿಯೇ ಎಟಿಎಂ ಇದೆ ಎಂಬ ಕಾರಣಕ್ಕೆ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಿರಲಿಲ್ಲ. ಇದನ್ನು ಅರಿತ ಕಳ್ಳರು ಎರಡು ಲಕ್ಷ ಹಣವನ್ನು ದೋಚಿದ್ದಾರೆ. ಪಿರಿಯಾಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬ್ಯಾಂಕ್‌ಗೆ ನುಗ್ಗಲು ಯತ್ನಿಸಿದ್ದರು : ಮೊದಲು ಕಳ್ಳರು ಬ್ಯಾಂಕ್‌ಗೆ ನುಗ್ಗಲು ಪ್ರಯತ್ನ ನಡೆಸಿದ್ದಾರೆ. ಬ್ಯಾಂಕ್ ಹಿಂಬದಿಯ ಕಿಟಕಿಗಳ ಸರಳುಗಳನ್ನು ಕಟ್ ಮಾಡಲು ಯತ್ನಿಸಿದ್ದಾರೆ. ಆದರೆ, ನಂತರ ಎಟಿಎಂಗೆ ನುಗ್ಗಿ ಅಲ್ಲಿರುವ ಹಣ ದೋಚಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications