ಮೈಸೂರಲ್ಲಿ ಕೊರೊನಾ ಸೋಂಕು ಪರೀಕ್ಷೆ ಹೆಚ್ಚಳ: ಜಿಲ್ಲಾಧಿಕಾರಿ

ಮೈಸೂರು, ಜುಲೈ 28: ಮೈಸೂರು ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಸೋಂಕಿತರನ್ನು ಬೇಗನೆ ಪತ್ತೆ ಹಚ್ಚುವ ನಿಟ್ಟಿನಲ್ಲಿ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಯನ್ನು ಹೆಚ್ಚಿಸಲಾಗುವುದೆಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Recommended Video

      Corona ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು | Oneindia Kannada

      ರ್ಯಾಪಿಡ್ ಪರೀಕ್ಷೆ ಕುರಿತು ಮಾಹಿತಿ ನೀಡಿದ ಅವರು ನರಸಿಂಹರಾಜ ಕ್ಷೇತ್ರದಲ್ಲಿ ನಡೆಯುತ್ತಿದ್ದ ಪರೀಕ್ಷೆಯನ್ನು ಇತರ ವಿಧಾನಸಭಾ ಕ್ಷೇತ್ರಗಳಿಗೂ ವಿಸ್ತರಿಸಲಾಗಿದೆ. ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ನಾಚನಹಳ್ಳಿ, ಚಾಮರಾಜ ಕ್ಷೇತ್ರ ವ್ಯಾಪ್ತಿಯ ಮೊದಲ ಹಂತದಲ್ಲಿ 2300 ಆ್ಯಂಟಿಜೆನ್ ಕಿಟ್ ಪೂರೈಸಲಾಗಿತ್ತು.

      ಮೈಸೂರು ಒಳಗೊಂಡಂತೆ ಕೆಲವು ಜಿಲ್ಲೆಗಳಿಗೆ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಕಿಟ್ ನೀಡಲಾಗಿತ್ತು. ಎರಡನೇ ಹಂತದಲ್ಲಿ ವಿವಿಧ ಜಿಲ್ಲೆಗಳಿಗೆ ಒಟ್ಟು ಹತ್ತುಸಾವಿರ ಕಿಟ್ ನೀಡಲಾಗಿದ್ದು, ಮೈಸೂರಿಗೂ ಹೆಚ್ಚಿನ ಕಿಟ್ ಗಳು ಬಂದಿವೆ ಎಂದಿದ್ದಾರೆ.

      Increase Of Coronavirus Detect Test In Mysuru: DC

      ಎನ್.ಆರ್ ಕ್ಷೇತ್ರದಲ್ಲಿ 7 ದಿನ ಸತತವಾಗಿ ಆ್ಯಂಟಿಜೆನ್ ಕಿಟ್ ಮೂಲಕ ರ್ಯಾಪಿಡ್ ಪರೀಕ್ಷೆ ಮಾಡಲಾಗಿತ್ತು. ಅದಕ್ಕಾಗಿ ಸಿಬ್ಬಂದಿಗೆ ಎರಡು ದಿನ ವಿಶ್ರಾಂತಿ ನೀಡಲಾಗಿತ್ತು. ಶನಿವಾರ, ಭಾನುವಾರ ಪರೀಕ್ಷೆ ನಡೆಯಲಿಲ್ಲ. ಸೋಮವಾರದಿಂದ ಮತ್ತೆ ಆರಂಭಿಸಲಾಗಿದೆ. ಕಿಟ್ ಗಳ ಕೊರತೆಯಿಂದ ಪರೀಕ್ಷೆ ನಿಲ್ಲಿಸಲಾಗಿದೆ ಎಂಬ ವರದಿ ತಪ್ಪು ಎಂದು ಸ್ಪಷ್ಟಪಡಿಸಿದ್ದಾರೆ.

      ಮೈಸೂರು ವೈದ್ಯಕೀಯ ಕಾಲೇಜು, ಅಪೋಲೊ ಮತ್ತು ಜೆಎಸ್ಎಸ್ ಆಸ್ಪತ್ರೆಯಲ್ಲೂ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಈ ಹಿಂದೆ ದಿನಕ್ಕೆ 450 ರಿಂದ 700 ಪರೀಕ್ಷೆ ನಡೆದಿದ್ದರೆ ಈಗ 1,200 ಪರೀಕ್ಷೆಗಳು ನಡೆಯುತ್ತಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+