Reservoirs water level: ಕೆಆರ್‌ಎಸ್ ಮತ್ತು ಕಬಿನಿ‌ ಜಲಾಶಯಗಳ ಒಳಹರಿವು ಹೆಚ್ಚಳ

ಮೈಸೂರು, ಜುಲೈ, 12: ಕಳೆದ ಒಂದು ವಾರದಿಂದ ಕೇರಳ, ಕೊಡಗು ಹಾಗೂ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗಿದೆ. ಹಾಗೆಯೇ ಜಲಾಶಯಗಳ ನೀರಿನ ಮಟ್ಟವೂ ಕೊಂಚ ಏರಿಕೆಯಾಗಿದೆ. ಅದೇ ರೀತಿ ಇದೀಗ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳ ಒಳಹರಿವು ಹೆಚ್ಚಾಗಿದ್ದು, ಇದರಿಂದ ರೈತರಲ್ಲಿ ತುಸು ಆಶಾಭಾವನೆ ಮೂಡಿದಂತಾಗಿದೆ.

ಈ ಬಾರಿ ಜೂನ್ ತಿಂಗಳು ಮುಗಿದರೂ ಮುಂಗಾರು ಆರಂಭವಾಗಲೇ ಇಲ್ಲ. ಇದರಿಂದ ಕಾವೇರಿ ತೀರದ ಭಾಗದ ರೈತರು ಬೆಳೆದ ಲಕ್ಷಾಂತರ ಬೆಳೆ ನಾಶವಾಗಿತ್ತು. ಅಲ್ಲದೆ, ಈ ಭಾಗದ ಕಾವೇರಿ, ಲಕ್ಷ್ಮಣ ತೀರ್ಥ, ಕಬಿನಿ, ಕಪಿಲಾ ನದಿಗಳು ಬರಿದಾಗಿ ನೀರಿನ ಸಮಸ್ಯೆಗೆ ಉಂಟಾಗುವ ಪರಿಸ್ಥಿತಿ ಎದುರಾಗಿತ್ತು. ಅಲ್ಲದೆ, ಕೆಆರ್‌ಎಸ್ ಹಾಗೂ ಕಬಿನಿ ನೀರಿನ ಸಂಗ್ರಹ ಮಟ್ಟವೂ ಕುಸಿದಿತ್ತು. ಇದು ಸಹಜವಾಗಿಯೇ ಅನ್ನದಾತರ ಆತಂಕಕ್ಕೆ ಕಾರಣವಾಗಿತ್ತು.

Increase in inflow of KRS

ಕಬಿನಿ ಒಳಹರಿವು ಹೆಚ್ಚಳ

ಇದೀಗ ಕಳೆದ ಒಂದು ವಾರದಿಂದ ಕೇರಳದ ವೈನಾಡಿನಲ್ಲಿ ಬಿದ್ದ ಮಳೆಯಿಂದ ಕಬಿನಿ ನೀರಿನ ಮಟ್ಟ ಸುಧಾರಿಸಿದೆ. ಇದರಿಂದ ನಾಗರಹೊಳೆ ಹಾಗೂ ಬಂಡೀಪುರ ಭಾಗದ ವನ್ಯಜೀವಿಗಳ ಆತಂಕವೂ ದೂರ ಆದಂತಾಗಿದೆ. ಜುಲೈ 1ರಂದು 2251 ಅಡಿ ಇದ್ದ ಕಬಿನಿ ನೀರಿನ ಮಟ್ಟ ಇದೀಗ 2261 ಅಡಿ ಹೆಚ್ಚಾಗಿದೆ. ವಾರದಿಂದ 17 ಸಾವಿರದಿಂದ 3500ವರೆಗೆ ಒಳ ಹರಿವು ಬರುತ್ತಿದ್ದು, ಇದೇ ರೀತಿ ಮಳೆ ಬಂದರೆ ಈ ತಿಂಗಳೊಳಗೆ ಜಲಾಶಯ ಭರ್ತಿಯಾಗಲಿದೆ.

ಕಬಿನಿ ಜಲಾಶಯ 2284 ಪೂರ್ಣ ಮಟ್ಟ ಹೊಂದಿದೆ. ಕಬಿನಿ ಭರ್ತಿಯಾದರೆ 18 ಟಿಎಂಸಿ ನೀರು ಸಂಗ್ರಹವಾಗಲಿದೆ‌. ಇದರಿಂದ ಎಚ್.ಡಿ.ಕೋಟೆ, ಮೈಸೂರು ಹಾಗೂ ನಂಜನಗೂಡು ಭಾಗದ ನೀರಿನ ಸಮಸ್ಯೆ ಪರಿಹಾರ ಆಗಲಿದೆ. ಜೊತೆಗೆ ರೈತರ ಬೆಳೆಗೂ ನೀರು ಹರಿಸಬಹುದು‌.

KRSನಲ್ಲಿ ನೀರಿನ ಪ್ರಮಾಣ ಹೆಚ್ಚಳ

ಮುಂಗಾರು ಮಳೆ ಇಲ್ಲದೆ ಕೆಆರ್‌ಎಸ್ ಡ್ಯಾಂ ಕೂಡ ನೀರಿಲ್ಲದೆ ಸೊರಗಿತ್ತು. ಇದೀಗ ನಿಧಾನವಾಗಿ ಕೆಆರ್‌ಎಸ್ ಅಣೆಕಟ್ಟಿಗೆ ನೀರು ಹರಿದು ಬರುತ್ತಿದೆ. 124 ಅಡಿ ಸಾಮರ್ಥ್ಯದ ಡ್ಯಾಂನಲ್ಲಿ ಜೂನ್ ಅಂತ್ಯಕ್ಕೆ 76 ಅಡಿ ನೀರು ಸಂಗ್ರಹವಾಗಿತ್ತು. ಇದೀಗ ಒಳಹರಿವು ವಾರದಿಂದ 10ರಿಂದ 3 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ನೀರಿನ ಮಟ್ಟ 88 ಅಡಿ ಏರಿಕೆ‌ ಕಂಡಿದೆ. ಇದರಿಂದ ಜಲಕ್ಷಾಮದ ಭೀತಿಯಲ್ಲಿದ್ದ ಮೈಸೂರು, ಬೆಂಗಳೂರು ಭಾಗದ ಜನರು ಇದೀಗ ತುಸು ನಿರಾಳರಾಗಿದ್ದಾರೆ.

ಮೈದುಂಬಿದ ಕಪಿಲಾ

ತಿ.ನರಸೀಪುರ ಭಾಗದ ಪ್ರಮುಖ ನದಿಯಾದ ಕಪಿಲಾ ಕೂಡ ಮೈದುಂಬಿದ್ದಾಳೆ. 15ರಿಂದ 5 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕೇರಳದ ವೈನಾಡಿನಲ್ಲಿ ಬಿದ್ದ ಮಳೆಯೇ ಇದಕ್ಕೆ ಕಾರಣವಾಗಿದೆ. ಹಾಗಾಗಿ ಕಬಿನಿ‌ ಜಲಾಶಯದ ನೀರಿನ ಮಟ್ಟ ಸುಧಾರಿಸಿದೆ.

ಮೈಸೂರು ಜಿಲ್ಲೆಯಲ್ಲಿ ಈ ಬಾರಿ ವರುಣದೇವ ಮುನಿಸಿಕೊಂಡಿದ್ದಾನೆ. ಜೂನ್‌ನಲ್ಲಿ ವಾಡಿಕೆಯಂತೆ 94 ಮಿ.ಮೀ.ನಷ್ಟು ಮಳೆಯಾಗಬೇಕಿತ್ತು. ಆದರೆ 60 ಮಿ.ಮೀ.ನಷ್ಟು ಮಾತ್ರ ಮಳೆ ಆಗಿದೆ. ಜುಲೈ ಮೊದಲ ವಾರದಲ್ಲಿ 20 ಮಿ.ಮೀ. ನಷ್ಟು ಮಾತ್ರ ಮಳೆಯಾಗಿದೆ. ಸದ್ಯಕ್ಕೆ ದ್ವಿದಳ, ತಂಬಾಕು ಬೆಳೆಗೆ ಅನುಕೂಲವಾಗಿದ್ದರೂ, ಭತ್ತ, ರಾಗಿ, ಕಬ್ಬು ಬೆಳೆಗೆ ನೀರಿನ ಕೊರತೆ ಎದುರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+