ಕರ್ನಾಟಕದಲ್ಲಿರುವ ಟಿಬೆಟನ್ನರು ಮತದಾನ ಏಕೆ ಮಾಡಲ್ಲ?

ಮೈಸೂರು ಜಿಲ್ಲೆಯ ಬೈಲಕುಪ್ಪೆಯಲ್ಲಿ ಕರ್ನಾಟಕ ವಿಧಾನಸಭೆಯ ಕಾವಿಲ್ಲ. ಟಿಬೆಟನ್ ರು ವಾಸಿಸುತ್ತಿರುವ ಈ ಪ್ರದೇಶದಲ್ಲಿ ಜೀವನ ಮಾಮೂಲಿನಂತೆ ನಡೆದಿದೆ. ಇಡೀ ಕರ್ನಾಟಕದಲ್ಲಿ ಚುನಾವಣೆ ಕಾವಿನ ಲೆಕ್ಕಾಚಾರ ಒಂದಾದರೆ, ಇಲ್ಲಿನ ಲೆಕ್ಕ ಒಂದು.

2013ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆದ ಒಂದು ವರ್ಷಕ್ಕೆ ಮುಂಚೆ, ಚುನಾವಣೆ ಆಯೋಗವು ಟಿಬೆಟ್ ನ ನಿರಾಶ್ರಿತರ ಮಕ್ಕಳಿಗೆ ಮತದಾರರ ಪಟ್ಟಿಯಲ್ಲಿ ಅವಕಾಶ ಮಾಡಿತ್ತು. ಬೈಲಕುಪ್ಪೆ, ಹುಣಸೂರು ಇಲ್ಲಿ ದೊಡ್ಡ ಸಂಖ್ಯೆಯಲ್ಲಿರುವವರು ಟಿಬೆಟನ್ನರು ಮೊದಲ ಬಾರಿಗೆ ಈ ಸಲ ಮತ ಹಾಕಬೇಕಿತ್ತು.

ಆದರೆ, ಪಿರಿಯಾಪಟ್ಟಣ ತಾಲೂಕು ಆಡಳಿತದ ಪ್ರಕಾರ: ಟಿಬೆಟನ್ನರು ವಾಸವಿರುವ ಬೈಲಕುಪ್ಪೆ, ಹುಣಸೂರಿನ ಗುರುಪುರ (ಹೊಸ ಹಾಗೂ ಹಳೆಯದು)ದಿಂದ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಆಗುವುದಕ್ಕೆ ಆ ಸಮುದಾಯದಿಂದ ಯಾರೂ ಬಂದಿಲ್ಲ.

In Karnataka, Why Tibetans won’t vote?

"ಈ ವರೆಗೆ ಟಿಬೆಟನ್ ಮೂಲದ ಭಾರತದಲ್ಲಿ ಹುಟ್ಟಿದ ಯಾರೂ ಮತದಾರರ ಗುರುತಿನ ಚೀಟಿಗಾಗಿ ನಮ್ಮ ಬಳಿ ಬಂದಿಲ್ಲ. ಏಕೆಂದರೆ ಅವರು ಇಲ್ಲಿನ ನಾಗರಿಕತ್ವ ಪಡೆದಿಲ್ಲ. ಆದ್ದರಿಂದ ಮತದಾನದ ಹಕ್ಕಿನ ಪ್ರಶ್ನೆಯೇ ಬರುವುದಿಲ್ಲ. ಆದ್ದರಿಂದ ಅವರ ಗುರುತು ನಿರಾಶ್ರಿತರು ಅಂತಲೇ ಇದೆ" ಎನ್ನುತ್ತಾರೆ ಪಿರಿಯಾಪಟ್ಟಣ ತಾಲೂಕು ಆಡಳಿತದ ಹಿರಿಯ ಅಧಿಕಾರಿ.

ಅಧಿಕೃತ ಅಂದಾಜಿನ ಪ್ರಕಾರ, ಹಳೇ ಶಿಬಿರ ಬೈಲಕುಪ್ಪೆಯಲ್ಲಿ 11,037 ಟಿಬೆಟನ್ ರಿದ್ದಾರೆ. ಹೊಸದರಲ್ಲಿ 4,357 ಮತ್ತು ಗುರುಪುರದಲ್ಲಿ 2206 ಸೇರಿಸಿ ಒಟ್ಟು 17,500 ಮಂದಿ ಇದ್ದಾರೆ. ಇದರಲ್ಲಿ ಬೌದ್ಧ ಬಿಕ್ಕುಗಳ ಲೆಕ್ಕ ಸೇರಿಲ್ಲ. ಬೈಲಕುಪ್ಪೆ ಶಿಬಿರ ಭಾರತದಲ್ಲೇ ದೊಡ್ಡದು ಎಂದು ಅಧಿಕಾರಿಗಳು ಹೇಳುತ್ತಾರೆ.

ದಕ್ಷಿಣ ಭಾರತದಲ್ಲಿ ಟಿಬೆಟನ್ನರ ಒಟ್ಟು ಐದು ಶಿಬಿರಗಳಿವೆ. ಎರಡು ಬೈಲಕುಪ್ಪೆಯಲ್ಲಿ. ಒಂದು ಹುಣಸೂರು, ತಲಾ ಒಂದೊಂದು ಕೊಳ್ಳೇಗಾಲ ಮತ್ತು ಮುಂಡಗೋಡದಲ್ಲಿ. ಜನಸಂಖ್ಯೆ ಕ್ರಮವಾಗಿ 4171 ಹಾಗೂ 13400 ಇದೆ.

ಟಿಬೆಟನ್ನರು ಏತಕ್ಕಾಗಿ ಭಾರತದ ನಾಗರಿಕತ್ವ ಪಡೆಯುವುದಿಲ್ಲ ಅನ್ನೋದಕ್ಕೆ ಮುಖ್ಯ ಕಾರಣಗಳಿವೆ. ಭಾರತ ಸರಕಾರದ ಪ್ರಕಾರ ಎರಡು ದಾಖಲೆಗಳನ್ನು ಏಕಕಾಲದಲ್ಲಿ ಅವರು ಹೊಂದುವಂತಿಲ್ಲ. ಅವರ ಬಳಿ ಈಗಾಗಲೇ ನೋಂದಣಿ ಪ್ರಮಾಣ ಪತ್ರ ಇದೆ. ಅದನ್ನು ಪ್ರತಿ ಐದು ವರ್ಷಕ್ಕೆ ಒಂದು ಸಲ ನವೀಕರಣ ಮಾಡಲಾಗುತ್ತದೆ.

ಒಂದು ವೇಳೆ ಅವರು ಭಾರತದ ಪೌರತ್ವ, ಪಾಸ್ ಪೋರ್ಟ್ ಅಥವಾ ಮತದಾನದ ಗುರುತಿನ ಚೀಟಿ ಪಡೆದರೆ ನಿರಾಶ್ರಿತರ ಶಿಬಿರಗಳಿಂದ ಹೊರಬರಬೇಕಾಗುತ್ತದೆ. ಮತ್ತು ಅಲ್ಲಿ ಸಿಗುತ್ತಿರುವ ಸೌಕರ್ಯಗಳನ್ನು ಸಹ ಬಿಡಬೇಕಾಗುತ್ತದೆ ಎಂದು ಇಲ್ಲಿನವರು ನಂಬಿದ್ದಾರೆ.

ಭಾರತೀಯ ಪೌರತ್ವ ಪಡೆದರೆ ಶಿಬಿರ ಬಿಡಬೇಕಾಗುತ್ತದೆ ಎಂಬ ನಿಯಮವನ್ನು ದೆಹಲಿ ಹೈಕೋರ್ಟ್ ಪಕ್ಕಕ್ಕೆ ಇರಿಸಿದೆ ಎಂಬ ಸಂಗತಿ ಇಲ್ಲಿನ ಬಹಳ ಮಂದಿ ಟಿಬೆಟನ್ ರಿಗೆ ಗೊತ್ತಿಲ್ಲ. ಈ ಶಿಬಿರದಲ್ಲಿ ಬ್ಯಾಂಕ್, ಬಾಡಿಗೆಗೆ ಮಳಿಗೆ, ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಶಾಲೆ, ಸಿವಿಲ್ ನ್ಯಾಯಾಲಯ, ಆಸ್ಪತ್ರೆ ಇನ್ನೂ ಅನೇಕ ಸೌಕರ್ಯ- ಸವಲತ್ತುಗಳಿವೆ.

ಭಾರತಕ್ಕೆ ಬಂದು ಮೂರು ತಲೆಮಾರೇ ಕಳೆದಿರುವ ಹಿರಿಯರಿಗೆ ಗುರುತಿನ ಚೀಟಿಗೆ ಅರ್ಜಿ ಹಾಕುವ ಇರಾದೆ ಇದೆ. ಆದರೆ ಹೇಗೆ ಎಂಬ ಮಾಹಿತಿ ಗೊತ್ತಿಲ್ಲ. ಮತ್ತು ಅವರೇನಾದರೂ ಭಾರತೀಯ ನಾಗರಿಕರಾಗಿಬಿಟ್ಟರೆ ಟಿಬೆಟ್ ಸ್ವಾತಂತ್ರ್ಯ ಹೋರಾಟಕ್ಕೆ ಹಿನ್ನಡೆ ಆಗಬಹುದು ಎಂಬ ಆತಂಕ ಕೆಲವರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+