ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಡಹಬ್ಬ ದಸರಾದಲ್ಲಿ ಪರಿಸರ ಸ್ನೇಹಿ ದೀಪಾಲಂಕಾರಕ್ಕೆ ವ್ಯವಸ್ಥೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 23 : ಕಾಮನ್‍ವೆಲ್ತ್ ಸೇರಿದಂತೆ ಮತ್ತಿತರ ಕ್ರೀಡಾಕೂಟಗಳ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭವನ್ನು ವರ್ಣರಂಜಿತಗೊಳಿಸಲು ಫೈರೋ ಟೆಕ್ನಿಷಿಯನ್ ಗಳು ಹೊಗೆ ರಹಿತ ಹಾಗೂ ಪರಿಸರ ಸ್ನೇಹಿ ವಿದ್ಯುನ್ಮಾನ ಹೂಕುಂಡ-ಪಟಾಕಿಗಳನ್ನು ಬಳಸುತ್ತಾರೆ. ಅವನ್ನು ಈ ಬಾರಿ ದಸಾರದ ಪಂಜಿನ ಕವಾಯತುವಿನಲ್ಲಿ ಬಳಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅಭಿಪ್ರಾಯಪಟ್ಟರು.

ದಸರಾ ಸಿದ್ಧತೆ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವಿದ್ಯುನ್ಮಾನ ಬಾಣಬಿರುಸುಗಳ ತಜ್ಞರಿಂದ ಈ ಬಗ್ಗೆ ಮಾಹಿತಿ ಪಡೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ದಸರಾ ಮೆರವಣಿಗೆ ವಿಶ್ವವಿಖ್ಯಾತ ಜಂಬೂಸವಾರಿಯನ್ನು ಈ ಬಾರಿ ಇನ್ನೂ ಹೆಚ್ಚು ಆಕರ್ಷಕವಾಗಿ ನಡೆಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಮೈಸೂರು: ಈ ಬಾರಿ ದಸರಾ ಪ್ರಮುಖ ಆಕರ್ಷಣೆ ಟೆಂಟ್ ಟೂರಿಸಂಮೈಸೂರು: ಈ ಬಾರಿ ದಸರಾ ಪ್ರಮುಖ ಆಕರ್ಷಣೆ ಟೆಂಟ್ ಟೂರಿಸಂ

ಹೀಗಾಗಿ ಹೊಸ, ಭಿನ್ನ ಆಲೋಚನೆಗಳೊಂದಿಗೆ ದಸರಾ ಆಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ. ಈ ಬಾರಿಯ ನಾಡಹಬ್ಬ ಆಚರಣೆಗೆ ಬೇಕಿರುವ ಯೋಜನೆಗಳನ್ನು ಸಾಧ್ಯವಾದಷ್ಟೂ ಮಿತವ್ಯಯದಲ್ಲಿ ಸಿದ್ಧಪಡಿಸಿಕೊಳ್ಳಿ ಎಂದರು.

In Dasara has been arranged for eco-friendly lighting

ಮುಖ್ಯಮಂತ್ರಿಗಳ ಅಧ್ಯಕ್ಷತೆಯ ದಸರಾ-2018ರ ಉನ್ನತ ಮಟ್ಟದ ಸಮಿತಿ ಸಭೆಯ ನಂತರ ದಸರಾ ಉಪಸಮಿತಿಗಳನ್ನು ರಚಿಸಲಾಗುವುದು ಎಂದರು.

ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತು ಬಳಿಕದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶಿಷ್ಟ ಹಾಗೂ ವಿಭಿನ್ನವಾಗಿರಲಿ. ನೃತ್ಯದೊಂದಿಗೆ ಜೂಡೋ, ಮಾರ್ಷಲ್ ಆರ್ಟ್ಸ್ ಪದರ್ಶನವನ್ನೂ ವ್ಯವಸ್ಥೆ ಮಾಡಬಹುದು ಎಂದರು.

ದೇಶ-ವಿದೇಶದ ಹೆಚ್ಚಿನ ಪವಾಸಿಗರು ಆಗಮಿಸಿ ಭಾಗವಹಿಸಲು ಅವಕಾಶವಾಗುವಂತಹ ಕಾರ್ಯಕ್ರಮಗಳನ್ನೂ ರೂಪಿಸಬೇಕಿದೆ. ದಸರಾದ 15 ದಿನ ಮೊದಲು ಆಹ್ವಾನ ಪತ್ರಿಕೆಗಳು ಸಿದ್ಧಗೊಂಡು ವಿತರಣೆಯಾಗಬೇಕು. ಅದಕ್ಕಾಗಿ ರೂಪುರೇಷೆ ಸಿದ್ಧಪಡಿಸಿಕೊಳ್ಳಿ ಎಂದು ಸೂಚಿಸಿದರು.

In Dasara has been arranged for eco-friendly lighting

ದಸರಾ ದೀಪಾಲಂಕಾರ ವೇಳೆ ಮರಗಳಿಗೆ, ಪಕ್ಷಿಗಳಿಗೆ ಧಕ್ಕೆ ಉಂಟಾಗುತ್ತದೆಂಬ ದೂರು ಕೇಳಿಬಂದಿವೆ. ಪಕ್ಷಿ ಸಂಕುಲಕ್ಕೆ ತೊಂದರೆಯಾಗದಂತೆ ಪರಿಸರ ಸ್ನೇಹಿ ದೀಪಾಲಂಕಾರಕ್ಕೆ ವ್ಯವಸ್ಥೆ ಮಾಡಿರಿ ಎಂದು ಕಿವಿಮಾತು ಹೇಳಿದರು. ಕಳೆದ ಬಾರಿ ದಸರಾ ಚಲನಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನವಷ್ಟೇ ಇತ್ತು.

ಈ ಬಾರಿ ಚಲನಚಿತ್ರ ನಿರ್ಮಾಣ, ನಿರ್ದೇಶನ, ಸಂಕಲನ, ಛಾಯಾಗ್ರಹಣ ಮುಂತಾದ ವಿಷಯಗಳ ಬಗ್ಗೆ ಪರಿಣಿತರಿಂದ ಕಾರ್ಯಾಗಾರಗಳನ್ನು ಆಯೋಜಿಸಿ ಎಂದು ಸೂಚಿಸಿದರು.

English summary
There is a complaint that lighting is damaging to trees and birds. So this time Dasara has been arranged for eco-friendly lighting without harming bird species.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X