ಸಿದ್ದರಾಮಯ್ಯ ಒಬ್ಬ ಪೇಪರ್ ಟೈಗರ್: ಮಾಜಿ ಡಿಸಿಎಂ ಈಶ್ವರಪ್ಪ

ಮೈಸೂರು, ಮಾರ್ಚ್ 12: ರೇವಣ್ಣ ಅವರಿಗೆ ಕ್ಷಮೆ ಕೇಳುವುದಕ್ಕೆ ಬರೋದಿಲ್ವ? ಜೆಡಿಎಸ್ ನವರು ತೆನೆ ಹೊತ್ತ ಮಹಿಳೆ ಚಿಹ್ನೆ ಹೊಂದಿದ್ದಾರೆ. ಆದರೆ ಅವರು ನೀಡುತ್ತಿರುವ ಹೇಳಿಕೆಗಳು ಮಹಿಳೆಯರಿಗೆ ಗೌರವ ತರುತ್ತಿಲ್ಲ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹೋದರಿ ಸುಮಲತಾ ಅವರ ಬಗ್ಗೆ ತುಚ್ಯವಾಗಿ ಮಾತನಾಡುತ್ತಿದ್ದಾರೆ.ರೇವಣ್ಣ ಇದುವರೆಗೂ ಕ್ಷಮೆ ಕೇಳಿಲ್ಲ.ಅವರ ಬದಲಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್, ಸಿಎಂ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಎಲ್ಲರೂ ಕ್ಷಮೆ ಕೇಳಿದ್ದಾರೆ ಎಂದರು.

ಎಚ್.ಡಿ.ದೇವೇಗೌಡರಲ್ಲಿ ನಾನು ಆಗ್ರಹ ಮಾಡುತ್ತೇನೆ, ಈ ಕೂಡಲೇ ರೇವಣ್ಣರಿಂದ ಕ್ಷಮೆ ಕೇಳಿಸಿ.ಇಲ್ಲವಾದರೆ ನಿಮ್ಮ ಪಕ್ಷದ ಚಿಹ್ನೆಯನ್ನು ಬದಲಾಯಿಸಿ.ಯಾವುದಾದರೂ ಪ್ರಾಣಿಯ ಚಿಹ್ನೆ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿ ಎಂದು ಜೆಡಿಎಸ್ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಹಾಕುವುದರಿಂದ ನಮಗೇನು ನಷ್ಟವಿಲ್ಲ.ಬಿಜೆಪಿ ಶಕ್ತಿ ಎದುರು ಯಾರು ನಿಲ್ಲಲಾರರು.ಮೈತ್ರಿ ಪಕ್ಷಗಳ ನಡುವೆ ಹೊಂದಾಣಿಕೆ ಇಲ್ಲ, ಅವರಿಬ್ಬರು ಒಟ್ಟಿಗೆ ಸ್ಪರ್ಧಿಸಿದರೂ ನಮಗೇನು ಚಿಂತೆಯಿಲ್ಲ.ಕಾಂಗ್ರೆಸ್ ನವರು ಬೇಷರತ್ ಬೆಂಬಲ ಕೊಡುತ್ತೇವೆ ಎಂದಿದ್ರು, ಈಗ ಕಿತ್ತಾಡುತ್ತಿದ್ದಾರೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.

ಜೆಡಿಎಸ್ ನವರು ಹೇಗೆ ಎದುರಿಸುತ್ತಾರೆ?

ಜೆಡಿಎಸ್ ನವರು ಹೇಗೆ ಎದುರಿಸುತ್ತಾರೆ?

ಕುಮಾರಸ್ವಾಮಿಯವರು ದ್ವಿತೀಯ ದರ್ಜೆ ಪ್ರಜೆ ತರ ನನ್ನನ್ನು ನೋಡುತ್ತಿದ್ದಾರೆ. ಸೀಟಿಗಾಗಿ ಭಿಕ್ಷೆ ಬೇಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿರುವ ಜೆಡಿಎಸ್ ನವರು ನಮ್ಮನ್ನ ಹೇಗೆ ಎದುರಿಸುತ್ತಾರೆ ಎಂದು ಈಶ್ವರಪ್ಪ ಪ್ರಶ್ನಿಸಿದರು.

ಬಿಪಿನೂ ಇಲ್ಲ, ಶುಗರ್ ಸಹ ಇಲ್ಲ

ಬಿಪಿನೂ ಇಲ್ಲ, ಶುಗರ್ ಸಹ ಇಲ್ಲ

ಸಿದ್ದರಾಮಯ್ಯ ಒಬ್ಬ ಪೇಪರ್ ಟೈಗರ್ ಎಂದು ಟೀಕಿಸಿದ ಈಶ್ವರಪ್ಪ, ಸಿದ್ದರಾಮಯ್ಯ ನನ್ನನ್ನು ಕಂಡರೆ ಸಹನೆ ಕಳೆದುಕೊಳ್ಳುತ್ತಾರೆ. ನನ್ನ ವಿಚಾರ ಮಾತನಾಡುವವರಿಗೆ ಬಿಪಿ, ಶುಗರ್ ಬರುವುದು ಖಚಿತ. ನನಗಂತೂ ಬಿಪಿನೂ ಇಲ್ಲ ಶುಗರ್ ಸಹ ಇಲ್ಲ ಎಂದರು.

2 ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲಿದೆ

2 ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲಿದೆ

ಸಿದ್ದರಾಮಯ್ಯಗೆ ತಾಕತ್ತಿದ್ದರೆ ಬಾದಾಮಿ ಕ್ಷೇತ್ರಕ್ಕೆ ರಾಜೀನಾಮೆ ನೀಡಲಿ, ನಾನು ಸಹ ಶಿವಮೊಗ್ಗದಲ್ಲಿ ರಾಜೀನಾಮೆ ನೀಡಿ ಸ್ಪರ್ಧೆ ಮಾಡುತ್ತೇನೆ ಎಂದು ಮತ್ತೊಮ್ಮೆ ಸಿದ್ದರಾಮಯ್ಯಗೆ ಸವಾಲು ಹಾಕಿದ ಈಶ್ವರಪ್ಪ, ಸಿದ್ದರಾಮಯ್ಯ ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲಿ. ನನ್ನ ಕ್ಷೇತ್ರ ಸೇರಿದಂತೆ ಸಿದ್ದರಾಮಯ್ಯ ಸ್ಪರ್ಧಿಸಿದ ಎರಡು ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಪೇಪರ್ ಟೈಗರ್ ರೀತಿ ಮಾತನಾಡಬೇಡಿ

ಪೇಪರ್ ಟೈಗರ್ ರೀತಿ ಮಾತನಾಡಬೇಡಿ

ಒಂದು ವೇಳೆ ಬಿಜೆಪಿ ಗೆಲ್ಲಲಿಲ್ಲ ಅಂದ್ರೆ ನಾನು ರಾಜಕೀಯ ಸನ್ಯಾಸತ್ವ ಪಡೆಯುತ್ತೇನೆ.ಸೋತಲ್ಲಿ ನೀವು ಸನ್ಯಾಸತ್ವ ಪಡೆಯಿರಿ.ಸವಾಲು ಸ್ವೀಕರಿಸಿ ಪೇಪರ್ ಟೈಗರ್ ರೀತಿ ಮಾತನಾಡಬೇಡಿ ಎಂದು ಸಿದ್ದರಾಮಯ್ಯಗೆ ಈಶ್ವರಪ್ಪ ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+