ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಂದೆಗಾಗಿ ವರುಣ ಕ್ಷೇತ್ರ ಬಿಟ್ಟುಕೊಡಲು ಸಿದ್ಧ: ಯತೀಂದ್ರ ಸಿದ್ದರಾಮಯ್ಯ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 5: "ತಂದೆ ಸಿದ್ದರಾಮಯ್ಯ ಬಯಸಿದರೆ ವರುಣ ಕ್ಷೇತ್ರ ಬಿಟ್ಟುಕೊಡಲು ಸಿದ್ಧನಿದ್ದೇನೆ. ಆದರೆ ನಾನು ಬೇರೆ ಯಾವ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ, ತಂದೆಯ ಗೆಲುವಿಗಾಗಿ ಶ್ರಮಿಸುತ್ತೇನೆ" ಎಂದು ವರುಣ ಕ್ಷೇತ್ರದ ಶಾಸಕ, ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ಇದಕ್ಕಾಗಿ ಎಲ್ಲಾ ಪಕ್ಷಗಳು ಕಸರತ್ತು ನಡೆಸುತ್ತಿವೆ. ಬಿಜೆಪಿ 150 ಅಂದರೆ, ಕಾಂಗ್ರೆಸ್ 120 ಕ್ಷೇತ್ರಗಳನ್ನು ಗೆಲ್ಲುವ ಟಾರ್ಗೆಟ್ ಇಟ್ಟುಕೊಂಡಿವೆ. ಜೆಡಿಎಸ್‌ ಕೂಡ ತಾನೇನು ಕಡಿಮೆಯಿಲ್ಲ ಎಂದು ಬಹುಮತ ಪಡೆದು ಸರಕಾರ ರಚಿಸುತ್ತೇವೆ ಎಂಬ ಕನಸಿನಲ್ಲಿದೆ.

'ಸಿದ್ದರಾಮೋತ್ಸವ ಡಿಕೆಶಿ ರಾಜಕೀಯ ಬೆಳವಣಿಗೆಗೆ ತೋಡುತ್ತಿರುವ ಗುಂಡಿ''ಸಿದ್ದರಾಮೋತ್ಸವ ಡಿಕೆಶಿ ರಾಜಕೀಯ ಬೆಳವಣಿಗೆಗೆ ತೋಡುತ್ತಿರುವ ಗುಂಡಿ'

ಇನ್ನು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಾದಾಮಿ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಮುಂದಿನ ಚುನಾವಣೆಗೆ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ವರುಣಾ ಶಾಸಕ, ಸಿದ್ದರಾಮಯ್ಯ ಪುತ್ರ ಯತೀಂದ್ರ ತಮ್ಮ ತಂದೆಗಾಗಿ ಕ್ಷೇತ್ರ ತ್ಯಾಗ ಮಾಡಲು ಸಜ್ಜಾಗಿರುವುದಾಗಿ ಹೇಳಿಕೊಂಡಿದ್ದಾರೆ.

"ಸಿದ್ದರಾಮಯ್ಯ ವರುಣದಲ್ಲಿ ಸ್ಪರ್ಧಿಸಿದರೆ ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗುತ್ತೇನೆ ಎಂಬುದು ವದಂತಿ. ಬಹಳಷ್ಟು ಕ್ಷೇತ್ರಗಳಿಂದ ಸಿದ್ದರಾಮಯ್ಯಗೆ ಆಹ್ವಾನವಿದೆ. ಪಕ್ಷದ ಹೈಕಮಾಂಡ್ ಸೂಚನೆಯಂತೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾರೆ" ಎಂದು ಯತೀಂದ್ರ ತಿಳಿಸಿದರು.

 ತಂದೆಗಾಗಿ ವರುಣ ಬಿಟ್ಟುಕೊಡುವೆ

ತಂದೆಗಾಗಿ ವರುಣ ಬಿಟ್ಟುಕೊಡುವೆ

ಮೈಸೂರಿನಲ್ಲಿ ಸೋಮವಾರ ಮಾತನಾಡಿದ ಯತೀಂದ್ರ "ಕ್ಷೇತ್ರದ ಜನ, ಪಕ್ಷ ಅಪೇಕ್ಷಿಸಿದರೆ ಮತ್ತು ತಂದೆ ಬಯಸಿದರೆ ಅವರು ವರುಣದಲ್ಲೇ ಸ್ಪರ್ಧೆ ಮಾಡಲಿ. ನಾನು ಅವರ ಬೆಂಬಲಕ್ಕೆ ನಿಂತು ಗೆಲುವಿಗಾಗಿ ಶ್ರಮಿಸುತ್ತೇನೆ. ನಾನು ಬೇರೆ ಯಾವ ಕ್ಷೇತ್ರದಲ್ಲೂ ಸ್ಪರ್ಧೆ ಮಾಡುವುದಿಲ್ಲ. ಬದಲಾಗಿ ಸಿದ್ದರಾಮಯ್ಯರನ್ನು ಗೆಲ್ಲಿಸುವ ಕೆಲಸ ಮಾಡುತ್ತೇನೆ" ಎಂದರು.

ಅಮೃತ್ ಪೌಲ್ ಬಂಧನ: ಸಿಎಂ, ಗೃಹ ಸಚಿವರ ರಾಜೀನಾಮೆಗೆ ಪ್ರತಿಪಕ್ಷಗಳ ಆಗ್ರಹಅಮೃತ್ ಪೌಲ್ ಬಂಧನ: ಸಿಎಂ, ಗೃಹ ಸಚಿವರ ರಾಜೀನಾಮೆಗೆ ಪ್ರತಿಪಕ್ಷಗಳ ಆಗ್ರಹ

 ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲ್ಲ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲ್ಲ

"ಸಿದ್ದರಾಮಯ್ಯ ವರುಣಾದಲ್ಲಿ ಸ್ಪರ್ಧಿಸಿದರೆ ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗುತ್ತೇನೆ ಎಂಬುದು ಸುಳ್ಳು, ನನಗೆ ಆ ರೀತಿಯ ಯಾವುದೇ ಚಿಂತನೆ ಮಾಡಿಲ್ಲ. ಕ್ಷೇತ್ರದ ಆಯ್ಕೆ ವಿಚಾರಕ್ಕೆ ಬಹಳ ಸಮಯ ಇದೆ. ಸಿದ್ದರಾಮಯ್ಯಗೆ ಇನ್ನೂ ಹಲವು ಕ್ಷೇತ್ರಗಳಿಂದ ಆಹ್ವಾನವಿದೆ. ಸಿದ್ದರಾಮಯ್ಯ ಮತ್ತು ಪಕ್ಷದ ಹೈಕಮಾಂಡ್ ಕ್ಷೇತ್ರ ಆಯ್ಕೆ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇದರ ಬಗ್ಗೆ ತುರ್ತಾಗಿ ಚರ್ಚೆ ಮಾಡುವುದಿಲ್ಲ" ಡಾ.ಯತೀಂದ್ರ ಹೇಳಿದ್ದಾರೆ.

 ಸಿದ್ದರಾಮೋತ್ಸವ ಶಕ್ತಿ ಪ್ರದರ್ಶನವಲ್ಲ

ಸಿದ್ದರಾಮೋತ್ಸವ ಶಕ್ತಿ ಪ್ರದರ್ಶನವಲ್ಲ

"ಸಿದ್ದರಾಮಯ್ಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಡೆಯಲಿರುವ ಸಿದ್ದರಾಮೋತ್ಸವ ಶಕ್ತಿ ಪ್ರದರ್ಶನವಲ್ಲ. ಇದು ಕೇವಲ ತಂದೆಯ ಹುಟ್ಟುಹಬ್ಬ ಆಚರಣೆ. ಇದರಲ್ಲಿ ರಾಜಕೀಯ ಹುಡುಕುವ ಅಗತ್ಯವಿಲ್ಲ. ಕಾಕತಾಳೀಯವಾಗಿ ಚುನಾವಣೆಯ ವರ್ಷವೇ ಅವರ ಜನ್ಮದಿನದ ಅಮೃತ ಮಹೋತ್ಸವ ಬಂದಿದೆ. ಎಲ್ಲಾ ಪಕ್ಷದವರನ್ನೂ ಸೇರಿಸಿಕೊಂಡು ಆಚರಿಸಿದರೆ ರಾಜಕೀಯವಾಗಿ ಬೇರೆ ರೀತಿಯ ಚರ್ಚೆಗಳು ಆಗುತ್ತವೆ. ಹೀಗಾಗಿ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಈ ಸಮಾರಂಭ ಆಯೋಜಿಸುತ್ತಿದ್ದೇವೆ" ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

 ಸಿದ್ಧರಾಮೋತ್ಸವ ಸಿಎಂ ಆಕಾಂಕ್ಷಿಯೆಂದು ತೋರಿಸುವುದಕ್ಕಲ್ಲ

ಸಿದ್ಧರಾಮೋತ್ಸವ ಸಿಎಂ ಆಕಾಂಕ್ಷಿಯೆಂದು ತೋರಿಸುವುದಕ್ಕಲ್ಲ

"ಸಿದ್ದರಾಮೋತ್ಸವ ಆಚರಣೆ ಮಾಡುತ್ತಿರುವುದು ಸಿದ್ದರಾಮಯ್ಯರನ್ನು ಕಾಂಗ್ರೆಸ್‌ ಪಕ್ಷದ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಬಿಂಬಿಸಿಕೊಳ್ಳುವುದಕ್ಕಲ್ಲ, ಇದು ಅವರ ಜನ್ಮದಿನದ ಅಮೃತ ಮಹೋತ್ಸವವಾಗಿದೆ. ಮುಖ್ಯಮಂತ್ರಿ ಅಭ್ಯರ್ಥಿ ಎಂದು ತೋರ್ಪಡಿಸಿಕೊಳ್ಳಲು ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂಬ ಪ್ರಶ್ನೆಯೇ ಇಲ್ಲ" ಎಂದು ಯತೀಂದ್ರ ಸ್ಪಷ್ಟಪಡಿಸಿದರು.

Recommended Video

ವಿಚಾರಣೆ ಸಂದರ್ಭದಲ್ಲೇ ACB ಮತ್ತು ADGP ಬಗ್ಗೆ ಸ್ಪೋಟಕ ಹೇಳಿಕೆ ಕೊಟ್ಟ ಜಡ್ಜ್ HP ಸಂದೇಶ್ | *Karnataka | OneIndia

English summary
I am ready to give up Mysuru Varuna Constituency for my father, said Yathindra Siddaramaiah in Mysuru. He also clarified that he did contest for any other constituency in next election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X