Mysuru Metro: ಮೈಸೂರು ಮೆಟ್ರೋ ಯೋಜನೆಗೆ ರೆಸ್ಪಾನ್ಸ್ ಹೇಗಿದೆ?
Mysuru Metro: ಕರ್ನಾಟಕದಲ್ಲಿ ಅತೀ ಹೆಚ್ಚು ಟ್ರಾಫಿಕ್ ಜಾಮ್‌ಗೆ ಹೆಸರುವಾಸಿ ನಗರ ಎಂದರೆ ಅದು ಬೆಂಗಳೂರು ಆಗಿದ್ದು, ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಮೆಟ್ರೋ ಅತ್ಯಗತ್ಯವಾಗಿದೆ. ಇಲ್ಲಿನ ಬಹುತೇಕ ಜನರು, ಕಚೇರಿಗೆ ತೆರಳುವವರು ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಂಡು ಸಮಯ ಉಳಿಸಲು ಮೆಟ್ರೋವನ್ನೇ ಅವಲಂಬಿಸಿದ್ದಾರೆ. ಇನ್ನು ಈ ಸೇವೆಯನ್ನು ಸಾಂಸ್ಕೃತಿಕ ನಗರಿಗೆ ವಿಸ್ತರಣೆ ಮಾಡುವುದಾಗಿ ರಾಜ್ಯ ಬಜೆಟ್ ಮಂಡನೆ ವೇಳೆ ಪ್ರಸ್ತಾಪಿಸಲಾಗಿತ್ತು. ಇದೀಗ ಇದಕ್ಕೆ ಆಕ್ರೊಶಗಳು ಭುಗಿಲೆದ್ದಿವೆ. ಹಾಗಾದರೆ ಜನರು ಏನೆಲ್ಲ ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಈಗಾಗಲೇ ಸ್ವಚ್ಚನಗರಿಗಳ ಪಟ್ಟಿಯಲ್ಲಿ ಮೈಸೂರು ಗುರುತಿಸಿಕೊಂಡಿದೆ. ಅಲ್ಲದೆ ನಗರದಲ್ಲಿ ಯಾವುದೇ ರೀತಿಯ ಟ್ರಾಫಿಕ್ ಜಂಜಾಟವಂತೂ ಇಲ್ಲವೇ ಇಲ್ಲ. ಸಾಂಸ್ಕೃತಿಕನಗರಿ ಎಂಬ ಹೆಸರಿಗೆ ತಕ್ಕಂತೆ ಅಭಿವೃದ್ಧಿ ಕಾಣುತ್ತಿದ್ದು, ಇಲ್ಲಿನ ರಸ್ತೆಗಳು ಯಾವಾಗಲೂ ಟ್ರಾಫಿಕ್ ಪ್ರೀ ಆಗಿರುತ್ತವೆ. ಆದ್ದರಿಂದ ಈ ನಗರಕ್ಕೆ ಮೆಟ್ರೋ ಅವಶ್ಯಕತೆಯಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

"ನಮ್ಮ ಮೈಸೂರು ಈಗ ಹೇಗಿದೆಯೋ ಹಾಗೆಯೇ ಇರಲಿ. ಇಲ್ಲಿ ಸಾರಿಗೆ ವ್ಯವಸ್ಥಗೆನೂ ಯಾವುದೇ ಕೊರತೆಯಿಲ್ಲ. ಹಾಗೂ ಟ್ರಾಫಿಕ್ ಜಂಜಾಟವಿಲ್ಲದೆ, ವಾಹನಗಳು ಸರಗವಾಗಿ ಸಂಚಾರ ಮಾಡುತ್ತಿವೆ. ಯಾವುದೇ ಮೆಟ್ರೋ ಯೋಜನೆ, ಅಭಿವೃದ್ಧಿಯ ಅವಶ್ಯಕತೆ ಇಲ್ಲ. ಒಂದು ವೇಳೆ ಅಭಿವೃದ್ಧಿಯಾದರೆ, ಸಂಪೂರ್ಣವಾಗಿ ಸುಂದರ ಮೈಸೂರು ಹಾಳಗಲಿದೆ. ಅಲ್ಲದೆ, ಇದರಿಂದ ಇಲ್ಲಿನ ಮರಗಳಿಗೆ ಕೊಡಲಿ ಬೀಳಲಿದ್ದು, ಪ್ರವಾಸೋದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ ಬೀಳಲಿದೆ," ಎಂದು ಇಲ್ಲಿನ ಜನರು ಆಕ್ರೊಶ ಹೊರಹಾಕುತ್ತಿದ್ದಾರೆ.
ಇತ್ತೀಚೆಗಷ್ಟೇ ಪ್ರತಾಪ್ ಸಿಂಹ ಅವರು ಕೂಡ ಮೈಸೂರಿಗೆ ಮೆಟ್ರೋ ರೈಲು ತರುವುದಾಗಿ ಭರವಸೆ ನೀಡಿದ್ದರು. ಆದರೆ ಇವರ ಈ ನಿರ್ಧಾರಕ್ಕೂ ಕೂಡ ಆಕ್ರೋಶಗಳು ಭಗಿಲೆದ್ದಿವೆ. "ನೀವು ಎಲ್ಲಿ ಬೇಕಾದರೂ ಅಭಿವೃದ್ಧಿ ಮಾಡಿ. ನಮ್ಮ ಮೈಸೂರು ಮಾತ್ರ ಹಾಗೆಯೇ ಇರಲಿ," ಎಂದು ಜನರು ಹೇಳುತ್ತಿದ್ದಾರೆ.












Click it and Unblock the Notifications