ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಹಾಪ್ ಕಾಮ್ಸ್ ನಿಂದ ಆನ್ ಲೈನ್ ಸೇವೆ, ಮನೆ ಬಾಗಿಲಿಗೇ ತಾಜಾ ತರಕಾರಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 22: ಮೈಸೂರು ಜಿಲ್ಲಾ ಹಾಪ್ ಕಾಮ್ಸ್ ವತಿಯಿಂದ ಆನ್ ಲೈನ್ ಮೂಲಕ ಮನೆ ಬಾಗಿಲಿಗೆ ರೈತರಿಂದ ಖರೀದಿಸಿದ ತಾಜಾ ಹಣ್ಣು ಮತ್ತು ತರಕಾರಿಗಳನ್ನು ನಿಗದಿತ ದರ ಹಾಗೂ ನಿಖರವಾದ ತೂಕದಲ್ಲಿ ಸರಬರಾಜು ಮಾಡಲಾಗುತ್ತಿದ್ದು, ಈ ಸೇವೆ ಪಡೆಯಲು ಸಾರ್ವಜನಿಕರು ಮುಂಗಡವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಿದೆ.

ಹಣ್ಣು ಹಾಗೂ ತರಕಾರಿ, ಸೊಪ್ಪು ಹಾಗೂ ಇತರೆ ಸಾಮಾಗ್ರಿಗಳಿಗೆ ದರವನ್ನು ಆನ್ ಲೈನ್ ನಲ್ಲಿ ವೀಕ್ಷಿಸಿ, ಶುಲ್ಕ ಪಾವತಿಸಬಹುದು ಅಥವಾ ಹಣ್ಣು, ತರಕಾರಿ ಪಡೆದ ನಂತರ ಪಾವತಿಸಬಹುದಾಗಿರುತ್ತದೆ.

ಶೋಕಿ ಜೀವನಕ್ಕಾಗಿ ಸುಲಿಗೆ, ಕಳ್ಳತನಕ್ಕಿಳಿದ ಯುವಕರು: ಪೊಲೀಸರಿಂದ ಎಚ್ಚರಿಕೆಶೋಕಿ ಜೀವನಕ್ಕಾಗಿ ಸುಲಿಗೆ, ಕಳ್ಳತನಕ್ಕಿಳಿದ ಯುವಕರು: ಪೊಲೀಸರಿಂದ ಎಚ್ಚರಿಕೆ

ಗ್ರಾಹಕರು 'Hopcoms online' ಮೊಬೈಲ್ ಆ್ಯಪ್ ಮೂಲಕ ಈ ಸೇವೆ ಪಡೆಯಬಹುದಾಗಿದೆ. ಈವರೆಗೂ ಮೈಸೂರು ನಗರದಲ್ಲಿ 1,000 ಕ್ಕೂ ಅಧಿಕ ಗ್ರಾಹಕರು ಆನ್ ಲೈನ್ ನಲ್ಲಿ ಹೆಸರು ನೋಂದಾಯಿಸಿಕೊಂಡಿರುತ್ತಾರೆ.

Mysuru: Home Delivery Of Fruits And Vegetables Begins In City

ಗ್ರಾಹಕರ ಬೇಡಿಕೆ ಮೇರೆಗೆ ವಿವಿಧ ಬಗೆಯ ಸೊಪ್ಪು ಮತ್ತು ಡ್ರೈ ಫ್ರೂಟ್ಸ್, ತೆಂಗಿನಕಾಯಿ, ಮೊಟ್ಟೆ, ಸಾವಯವ ಬೆಲ್ಲ, ಬೆಲ್ಲದ ಪುಡಿ, ಜೇನುತುಪ್ಪ, ವಿವಿಧ ಬಗೆಯ ಹಣ್ಣಿನ ಸಸಿಗಳು, ಹೂಗಳನ್ನು ತಲುಪಿಸಲಾಗುತ್ತಿದೆ. ಈ ವಿನೂತನ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ- 8277814143 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಹಾಪ್ ಕಾಮ್ಸ್ ನ ಪದನಿಮಿತ್ತ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
Mysuru District Hopcoms is supplying fresh fruit and vegetables to the doorstep at a fixed rate and exact weight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X