ಹಿಂದೂ ಎನ್ನುವುದು ಬ್ರಾಹ್ಮಣರ ಧರ್ಮ, ಶೂದ್ರರು ದೇವಸ್ಥಾನಕ್ಕೆ ಹೋಗ್ಬೇಡಿ: ಚಿಂತಕ ಕೆ.ಎಸ್.ಭಗವಾನ್ ಹೀಗೆ ಹೇಳಿದ್ಯಾಕೆ?
K.S.Bhagawan: ಚಿಂತಕ ಪ್ರೊ.ಕೆ.ಎಸ್.ಭಗವಾನ್ ಧರ್ಮದ ವಿಚಾರದಲ್ಲಿ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೆ ಮೈಸೂರಿನಲ್ಲಿ ಮಹಿಷ ದಸರಾ ಕಾರ್ಯದಕ್ರಮದಲ್ಲಿ ಶೂದ್ರರು ಎಂದರೆ ಯಾರು, ಹಿಂದೂ ಧರ್ಮ ಎಂದರೆ ಏನು, ಹಿಂದೂಗಳು ಅಂತಾ ಯಾರಿಗೆ ಕರೆಯುತ್ತಾರೆ ಎನ್ನುವುದಕ್ಕೆ ಉತ್ತರಿಸುವ ಮೂಲಕ ಮೂಲಕ ಸುದ್ದಿಯಾಗಿದ್ದಾರೆ. ಹಾಗಾದರೆ ಅವರು ಇನ್ನೂ ಏನೆಲ್ಲ ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಮೈಸೂರಿನಲ್ಲಿ ಭಾನು ಮಹಿಷ ದಸರಾ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಜ್ಞಾನದ ಹಸಿವಿಲ್ಲದ ಕಾರಣ ಹಲವರು ಗುಲಾಮರಾಗಿದ್ದಾರೆ. ಹಿಂದೂ ಧರ್ಮ ಅಂದರೆ ಅದು ಹಿಂದೂಗಳ ಧರ್ಮವಲ್ಲ, ಅದು ಬ್ರಾಹ್ಮಣರ ಧರ್ಮ. ಹಿಂದೂ ಎಂದರೆ ಹಿಂದಕ್ಕೆ ಹೋಗುವ ಜನ. ಹಿಂದೂಗಳು ಮುಂದಕ್ಕೆ ಬಾರದ ಜನ ಹಾಗೂ ಬೇರೆಯವರನ್ನು ಮುಂದುವರೆಯಲು ಬಿಡೋದಿಲ್ಲ. ಗಂಡಸರನ್ನು ಮಾತ್ರ ಬ್ರಾಹ್ಮಣರು ಅಂತಾರೆ. ಹೆಂಗಸರನ್ನಾ ಬ್ರಾಹ್ಮಣರು ಅನ್ನಲ್ಲಾ, ಅವರನ್ನು ಶೂದ್ರರು ಅಂತಾರೆ ಎಂದು ಹೇಳಿದರು.

ದೇವಸ್ಥಾನ ಕಟ್ಟುವುದು ಶೂದ್ರರು. ದೇವಸ್ಥಾನದ ಒಳಗೆ ಇರುವವರು ಬ್ರಾಹ್ಮಣರು. ದೇವಸ್ಥಾನ ಕಟ್ಟಿದ ಶೂದ್ರರನ್ನೇ ಬಿಟ್ಟುಕೊಳ್ಳುವುದಿಲ್ಲ. ನಾವು ಶೂದ್ರರಲ್ಲ ಎಂದು ಹೇಳಬೇಕು. ಶೂದ್ರರು ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಬೇಕು. ನಾನು 50 ವರ್ಷ ಆಯ್ತು ದೇವಸ್ಥಾನಕ್ಕೆ ಹೋಗಿ. ದೇವಸ್ಥಾಕ್ಕೆ ಹೋದರೆ ಏನು ಆಗುವುದಿಲ್ಲ. ತಟ್ಟೆಗೆ ದುಡ್ಡು ಹಾಕುತ್ತೀರಾ, ಅರ್ಧ ಕಾಯಿ ಇಟ್ಟುಕೊಂಡು ಅರ್ಧ ಕೊಡುತ್ತಾರೆ ಅಷ್ಟೇ. ಶೂದ್ರರಿಗೆ ಮಾನ ಮರ್ಯಾದೆ ಇದ್ದರೆ ದೇವಸ್ಥಾನಕ್ಕೆ ಹೋಗಬಾರದು. ನಾವು ಶೂದ್ರರು ಎಂದು ಒಪ್ಪಿಕೊಳ್ಳಬೇಕಾ ಎಂದು ಪ್ರಶ್ನಿಸಿದರು.
ಹಿಂದೂ ಧರ್ಮ ನಮ್ಮದಲ್ಲ. ನಮಗೆ ಹಿಂದೂ ಧರ್ಮ ಬೇಕಿಲ್ಲ. ಎಲ್ಲರೂ ಬುದ್ಧ ಗುರುಗಳನ್ನು ನಂಬಿ. ನಾನು ಹೇಳಿದ್ದು ನಂಬಿ ಅಂತಾ ಬುದ್ಧ ಹೇಳಲ್ಲ. ನಾನು ಹೇಳಿದ್ದು ಕೇಳಬೇಕು ಅಂತಾ ಏಸು ಹೇಳುತ್ತಾರೆ. ಹೇಳಿದ್ದು ಕೇಳದಿದ್ರೆ ನರಕ್ಕೆ ಹೋಗುತ್ತೀರಾ ಅಂತಾ ಕೃಷ್ಣ ಹೇಳುತ್ತಾನೆ. ನಾವು ಬುದ್ಧ ಧರ್ಮಕ್ಕೆ ಹೋಗಬೇಕು. ಶೂದ್ರರು ಎಂಬ ಗುಲಾಮರನ್ನು ಎಚ್ಚರಿಸಬೇಕು. ಯಾರು ಹೀನನಾಗಿದ್ದಾನೆಯೋ ಅವನು ಹಿಂದೂ. ಹಿಂದೂ ಎಂದರೆ ಹೀನಾ ಎಂದು ಅರ್ಥ. ಯಾರು ಹಿಂದೂ ಆಗಬಾರದೆಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ: ಮುಡಾ ಹಗರಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆ ವಿಪಕ್ಷಗಳು ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜನಾಮೆ ನೀಡಬೇಕೆಂದು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಸಿದ್ದು ಅಭಿಮಾನಿಯೊಬ್ಬರು ರಕ್ತದಲ್ಲಿ ಪತ್ರ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.
ಎಫ್‌ಐಆರ್ ದಾಖಲಾಗುತ್ತಿದ್ದಂತೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಲೇ ಇದ್ದಾರೆ. ಇದರ ನಡುವೆಯೆ ಅಭಿಮಾನಿಯೊಬ್ಬರು ಸಚಿನ್ ಎಂಬುವವರಯ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬಾರದು ಎಂದು ರಕ್ತದಲ್ಲಿ ಪತ್ರ ಪಡೆದ ಘಟನೆ ಮಂಡ್ಯ ಜಿಲ್ಲೆಯ ಮೊತ್ತಹಳ್ಳಿಯಲ್ಲಿ ನಡೆದಿದೆ. ಇನ್ನೂ ಈ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಅರಸು ಬಳಿಕ ಅತಿಹೆಚ್ಚು ಸರ್ಕಾರಿ ಯೋಜನೆಗಳನ್ನು ನೀಡಿದ್ದೀರಿ. ಬಡಜನರಿಗೆ ಅತೀ ಹೆಚ್ಚು ಯೋಜನೆ ನೀಡಿದ ಸಿಎಂ ನೀವು. ಬಡವರ, ದೀನ ದಲಿತರ ಪರವಾಗಿರುವಂತಹ ಸಿಎಂ ನೀವು. ಆದ್ದರಿಂದ ರಾಜೀನಾಮೆ ನೀಡಬಾರದು ಎಂದು ರಕ್ತದಲ್ಲಿ ಬರೆದಿದ್ದಾರೆ. ಇನ್ನು ಈ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.












Click it and Unblock the Notifications