ಇಂದಿನಿಂದ ದಸರಾ ಹೆಲಿ ರೈಡ್‌ ಆರಂಭ

ಮೈಸೂರು, ಸೆಪ್ಟೆಂಬರ್ 27: ದಸರಾದ ಮತ್ತೊಂದು ಆಕರ್ಷಣೆಯಾಗಿರುವ ಹೆಲಿಕಾಪ್ಟರ್ ರೈಡ್‌ ಸೆಪ್ಟೆಂಬರ್‌ 27ರಿಂದ ಆರಂಭಗೊಳ್ಳಲಿದ್ದು ಅಕ್ಟೋಬರ್‌ 10ರವರೆಗೂ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಮೂಲಗಳು ತಿಳಿಸಿವೆ.

ಈ ಬಾರಿ ಏರಿಕೆಯಾದ ಇಂಧನ ದರ, ಜಿಎಸ್ ‌ಟಿ ಹಾಗೂ ನಿರ್ವಹಣಾ ವೆಚ್ಚದಿಂದ ಹೆಲಿಕಾಪ್ಟರ್ ರೈಡ್‌ ಸ್ಥಗಿತಗೊಳ್ಳುವ ಆತಂಕ ಆಸಕ್ತರಲ್ಲಿತ್ತು. ಆದರೆ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹೆಲಿಕಾಪ್ಟರ್ ರೈಡ್‌ ನಡೆಸಲು ಎರಡು ಕಂಪನಿಗಳನ್ನು ಅಂತಿಮಗೊಳಿಸಲಾಗಿದೆ.

ಚಿಪ್‌ ಸೆನ್ ಏವಿಯೇಷನ್ ಮತ್ತು ತುಂಬಿ ಏವಿಯೇಷನ್ ಕಂಪೆನಿಗಳನ್ನು ಅಂತಿಮಗೊಳಿಸಲಾಗಿದ್ದು ಒಟ್ಟು ಮೂರು ಕಂಪೆನಿಗಳು ಹೆಲಿ ರೈಡ್‌ ಸೇವೆ ನೀಡಲು ಆಸಕ್ತಿ ವ್ಯಕ್ತಪಡಿಸಿದ್ದವು. ಇಂದಿನಿಂದ ಸೇವೆ ಆರಂಭಗೊಳ್ಳಲಿದ್ದು 10 ನಿಮಿಷಗಳ ಹಾರಾಟದ ದರ 2700 ರೂಪಾಯಿಗಳಿಗೆ ಏರಿಕೆ ಆಗಿದೆ. ಕಳೆದ ವರ್ಷ ಈ ದರ 2400 ರೂಪಾಯಿಗಳಾಗಿತ್ತು.

Heliride Starting Today On Behalf Of Mysuru Dasara

ಅಕ್ಟೋಬರ್‌ ಒಂದು ಮತ್ತು 8ರಂದು ಮೈಸೂರು ಮೃಗಾಲಯ ಹಾಗೂ ಕಾರಂಜಿ ಕೆರೆಗೆ ಸಾರ್ವಜನಿಕರಿಗೆ ಪ್ರವೇಶ ನೀಡಲಾಗುವುದು ಎಂದು ಮೃಗಾಲಯದ ನಿರ್ದೇಶಕರು ತಿಳಿಸಿದ್ದಾರೆ. ಪ್ರತೀ ಮಂಗಳವಾರ ರಜೆ ಇದ್ದು, ಪ್ರವಾಸಿಗರಿಗೆ ಅನುಕೂಲವಾಗುವ ದೃಷ್ಟಿಯಿಂದ ರಜೆ ದಿನವೂ ಕಾರ್ಯ ನಿವರ್ಹಿಸಲಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+