ಸಿಎಂ ಹೆಲಿಕಾಪ್ಟರ್ ಮಿಸ್ ಲ್ಯಾಂಡಿಂಗ್, ಓಡೋಡಿ ಬಂದ ಅಧಿಕಾರಿಗಳು!
Recommended Video

ಮೈಸೂರು, ಫೆಬ್ರವರಿ 18 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಮಿಸ್ ಲ್ಯಾಂಡಿಂಗ್ ಆಗಿದೆ. ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ಕಾಯುತ್ತಿದ್ದ ಅಧಿಕಾರಿಗಳು ಮತ್ತೊಂದು ಹೆಲಿಪ್ಯಾಡ್‌ಗೆ ಓಡೋಡಿ ಬಂದಿದ್ದಾರೆ.
ಮೈಸೂರಿನ ತಿ.ನರಸೀಪುರದ ವಿದ್ಯೋದಯ ಕಾಲೇಜಿನ ಹೆಲಿಪ್ಯಾಡ್ ಸೋಮವಾರ ಸಂಜೆ ಈ ಘಟನೆ ನಡೆದಿದೆ. ನಿಗದಿಯಾಗಿದ್ದ ಹೆಲಿಪ್ಯಾಡ್ ಬದಲು ಮತ್ತೊಂದು ಹೆಲಿಪ್ಯಾಡ್‌ನಲ್ಲಿ ಮುಖ್ಯಮಂತ್ರಿಗಳ ಹೆಲಿಕಾಪ್ಟರ್ ಇಳಿದಿದೆ.

ಇದರಿಂದಾಗಿ ನಿಗದಿಯಾಗಿದ್ದ ಹೆಲಿಪ್ಯಾಡ್‌ನಲ್ಲಿ ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ಕಾಯುತ್ತಿದ್ದ ಅಧಿಕಾರಿಗಳು ಕಕ್ಕಾಬಿಕ್ಕಿಯಾದರು. ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದಂತೆ ಪಕ್ಕದ ಹೆಲಿಪ್ಯಾಡ್‌ಗೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಓಡಿದರು.
ತಿ.ನರಸೀಪುರದಲ್ಲಿ ನಡೆಯುತ್ತಿರುವ 11ನೇ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಿ.ನರಸೀಪುರದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು, 'ನೌಕಾಪಡೆ, ವಾಯುಪಡೆಗೆ ಕೇಂದ್ರ ಸರ್ಕಾರ ನೆರವು ನೀಡಲಿದೆ. ನಮ್ಮ ಸರ್ಕಾರ ಎಲ್ಲ ಸೌಲಭ್ಯ ನೀಡುವುದಲ್ಲಿ ಯಾವುದೇ ಸಂದೇಶವಿಲ್ಲ, ಸಂಶಯವಿಲ್ಲ' ಎಂದರು.
ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳ ಸೀಟು ಹಂಚಿಕೆ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಅವರು, 'ನಾನು ಸರ್ಕಾರದಲ್ಲಿ ಆಡಳಿತ ಹೊಣೆ ಹೊತ್ತಿದ್ದೇನೆ. ಸೀಟು ಹಂಚಿಕೆ ಬಗ್ಗೆ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರು ನೋಡಿಕೊಳ್ಳುತ್ತಾರೆ. ನಾನು ಆಡಳಿತ ನಡೆಸುವ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ' ಎಂದರು.












Click it and Unblock the Notifications