ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಬಿಸಿ ಊಟಕ್ಕೆ ಬಿಸಿಬಿಸಿ ರಾಗಿ ಮುದ್ದೆ

|
Google Oneindia Kannada News

ಮೈಸೂರು, ಏ.9 : ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಮುದ್ದೆ ನೀಡುವ ಪ್ರಾಯೋಗಿಕ ಯೋಜನೆಗೆ ಎಚ್.ಡಿ.ಕೋಟೆ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 32 ಪ್ರೌಢಶಾಲೆಗಳಲ್ಲಿ ವಾರಕ್ಕೊಮ್ಮೆ ರಾಗಿಮುದ್ದೆ ನೀಡಲಾಗುತ್ತಿದೆ.

ಎಚ್‌.ಡಿ.ಕೋಟೆ ತಾಲೂಕಿನ ಪ್ರೌಢಶಾಲೆಗಳಲ್ಲಿ ವಾರಕ್ಕೆ ಒಂದು ದಿನ, ಇನ್ನು ಕೆಲವು ಶಾಲೆಗಳಲ್ಲಿ ಮಕ್ಕಳ ಬೇಡಿಕೆಯಂತೆ ವಾರಕ್ಕೆ 2 ದಿನ ಬಿಸಿಯೂಟಕ್ಕೆ ರಾಗಿ ಮುದ್ದೆ ನೀಡಲಾಗುತ್ತಿದೆ. ಪ್ರಾಯೋಗಿಕ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಬಂದಿದೆ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಉದಯ್ ಕುಮಾರ್.

Ragi mudde

ಮಧ್ಯಾಹ್ನದ ಬಿಸಿಯೂಟಕ್ಕೆ ರಾಗಿ ಮುದ್ದೆ ಜೊತೆ ಬಸ್ಸಾರು, ಸೊಪ್ಪಿನಿಂದ ಮಾಡಿದ ಸಾರನ್ನು ನೀಡಲಾಗುತ್ತಿದೆ. ಪ್ರಾಢಶಾಲೆಗಳಲ್ಲಿ ಮಾತ್ರ ಈ ಯೋಜನೆ ಜಾರಿಯಲ್ಲಿದೆ. ಮಕ್ಕಳು ಯೋಜನೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಕೆಲವು ಶಾಲೆಗಳಲ್ಲಿ 2 ದಿನ ಮುದ್ದೆ ನೀಡುವಂತೆ ಮನವಿ ಮಾಡುತ್ತಿದ್ದಾರೆ. [ವಾರಕ್ಕೊಮ್ಮೆ ಮಕ್ಕಳಿಗೆ ರಾಗಿಮುದ್ದೆ]

ಮೂರು, ನಾಲ್ಕು ಕಿ.ಮೀ.ದೂರದಿಂದ ಶಾಲೆಗೆ ಆಗಮಿಸುವ ಮಕ್ಕಳು ಬೆಳಗ್ಗೆ ಸರಿಯಾಗಿ ಉಪಹಾರ ಸೇವಿಸಿರುವುದಿಲ್ಲ. ಆದ್ದರಿಂದ, ಮಧ್ಯಾಹ್ನದ ಬಿಸಿಯೂಟಕ್ಕೆ ಮುದ್ದೆ ನೀಡುವ ಯೋಜನೆಯನ್ನು ಆರಂಭಿಸಲಾಯಿತು ಎನ್ನುತ್ತಾರೆ ಶಿಕ್ಷಕರು. [ಬಿಸಿ ಊಟಕ್ಕೆ ಉಪ್ಪಿಟ್ಟು ಪೊಂಗಲ್ಲಿಗೆ ಬದಲು ಚಪಾತಿ]

ಮುದ್ದೆಯಿಂದ ಮಕ್ಕಳಿಗೆ ಅರ್ಧಕೆಜಿ ಅನ್ನದಲ್ಲಿರುವಷ್ಟು ಮತ್ತು 100 ಗ್ರಾಂ ಬೆಳೆಯಲ್ಲಿರುವಷ್ಟು ಪೌಷ್ಠಿಕಾಂಶ ದೊರೆಯುತ್ತಿದೆ. ಇದುವರೆಗೂ ಎಲ್ಲಾ ಮಕ್ಕಳು ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಶಿಕ್ಷರು ಹೇಳಿದ್ದಾರೆ.

English summary
Ragi mudde becomes most popular in 32 government schools in HD Kote taluk Mysuru district. Students eating Ragi mudde once a week as part of their midday meal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X