ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವೇಗೌಡರ ಪ್ರಕಾರ 15ಕ್ಕೆ 15 ಗೆಲ್ಲುವ ಸಿಎಂ ಆತ್ಮವಿಶ್ವಾಸಕ್ಕೆ ಕಾರಣ ಏನು?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 27: "ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದುಡ್ಡಿನಿಂದ ಚುನಾವಣೆ ನಡೆಸುತ್ತಿದ್ದು, ಎಷ್ಟು ದುಡ್ಡು ಸಾಗಿಸಿದ್ರು ಯಾರೂ ಕೇಳಲ್ಲ" ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಎಸ್ ‌ವೈ ಬಳಿ ಸರ್ಕಾರ ಇದೆ, ಗುಪ್ತವಾರ್ತೆ ಇದೆ. ಎಲ್ಲೆಲ್ಲಿ ಹಿಂದೆ ಬಿದ್ದಿದ್ದೀರಾ ಅಂತ ಗುಪ್ತವಾರ್ತೆಯಿಂದ ತಕ್ಷಣವೇ ತಿಳಿಯುತ್ತದೆ. ಅವರಿಗೆ ಆರ್ಥಿಕವಾಗಿಯೂ ಶಕ್ತಿಯಿದೆ" ಎಂದು ವ್ಯಂಗ್ಯದ ಧಾಟಿಯಲ್ಲಿ ಮಾತನಾಡಿದ್ದಾರೆ.

"ನಾವೇನು ಮಾಡಲು ಸಾಧ್ಯ?"

"ಯಡಿಯೂರಪ್ಪ ಎಷ್ಟೇ ಹಣ ಸಾಗಿಸಿದರೂ ಯಾರೂ ಕೇಳೋರಿಲ್ಲ. ಎಲ್ಲಾ ಅನರ್ಹ ಅಭ್ಯರ್ಥಿಗಳಿಗೆ ಎಷ್ಟು ಹಣ ಬೇಕೋ ಕೇಳಿ ಎಂದಿದ್ದಾರೆ. ಎಲ್ಲಾ ಕಡೆ ಮಂತ್ರಿಗಳನ್ನು ಬಿಟ್ಟು ನೀವು ಚುನಾವಣೆ ಮುಗಿಸಿಯೇ ಬನ್ನಿ ಎಂದಿದ್ದಾರೆ‌. ಮಂತ್ರಿಗಳಿಗೂ ಹಣ ಬೇಕಿದ್ದರೆ ಅಲ್ಲಿಂದಲೇ ಫೋನ್ ಮಾಡಿ, ನಾನು ಕಳುಹಿಸ್ತಿನಿ ಎಂದಿದ್ದಾರೆ. ಹೀಗಾಗಿ 15ಕ್ಕೆ 15 ಗೆಲ್ತೀನಿ ಅಂತಿದ್ದಾರೆ. ಇಷ್ಟೆಲ್ಲ ಇರಬೇಕಾದ್ರೆ ನಾವೇನು ಮಾಡೋಕಾಗುತ್ತೆ" ಎಂದು ಆರೋಪಿಸಿದರು.

ಉಪಚುನಾವಣೆ ಪ್ರಚಾರಕ್ಕೆ ದೇವೇಗೌಡ ಎಂಟ್ರಿ: ಅನರ್ಹರಿಗೆ ಗಡ-ಗಡಉಪಚುನಾವಣೆ ಪ್ರಚಾರಕ್ಕೆ ದೇವೇಗೌಡ ಎಂಟ್ರಿ: ಅನರ್ಹರಿಗೆ ಗಡ-ಗಡ

 ವಿಶ್ವನಾಥ್ ಸೀಸನ್ ಪೊಲಿಟೀಷಿಯನ್

ವಿಶ್ವನಾಥ್ ಸೀಸನ್ ಪೊಲಿಟೀಷಿಯನ್

"ವಿಶ್ವನಾಥ್ ಒಬ್ಬ ಸೀಸನ್ ಪೊಲಿಟಿಷಿಯನ್. ಹೃದಯದಲ್ಲಿ ಇರುವುದೇ ಬೇರೆ, ಜನರ ಮುಂದೆ ಹೇಳೋದೆ ಬೇರೆ. ಇದೆಲ್ಲವು ಜನಕ್ಕೆ ಅರ್ಥವಾಗುತ್ತದೆ.

ಜನ ಇದನ್ನು ಅರ್ಥ ಮಾಡಿಕೊಳ್ಳದ ಸ್ಥಿತಿಯಲ್ಲಿದ್ದಾರೆ ಅಂದುಕೊಳ್ಳುದು ತಪ್ಪು. ಅವರು ನನ್ನ ಬಗ್ಗೆಯೂ ಹೊಗಳಿದ್ದಾರೆ. ಸಿದ್ದರಾಮಯ್ಯ ಬಗ್ಗೆಯೂ ಹೊಗಳಿದ್ದಾರೆ. ಮತಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತು" ಎಂದು ಟೀಕಿಸಿದರು.

 ಚುನಾವಣೆ ಪರಿಣಾಮ ತಪ್ಪಿಸಿಕೊಳ್ಳುವ ಪ್ಲಾನ್

ಚುನಾವಣೆ ಪರಿಣಾಮ ತಪ್ಪಿಸಿಕೊಳ್ಳುವ ಪ್ಲಾನ್

ಈಗ ನಮ್ಮಂಥ ನಾಯಕರನ್ನು ಟೀಕೆ ಮಾಡಿದರೆ ಅದು ಚುನಾವಣೆ ಮೇಲೆ ಪರಿಣಾಮ ಬಿರುತ್ತೆ ಅನ್ನೋದು ವಿಶ್ವನಾಥ್‌ಗೆ ಗೊತ್ತಿದೆ. ಹೀಗಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ವಿಶ್ವನಾಥ್ ವಿರುದ್ಧ ಹರಿಹಾಯ್ದರು.

ಅಪ್ಪ ಮಗನ ತಂತ್ರ ಇದು ಎಂದು ಜಾಡಿಸಿದ ಆಯನೂರು ಮಂಜುನಾಥ್ಅಪ್ಪ ಮಗನ ತಂತ್ರ ಇದು ಎಂದು ಜಾಡಿಸಿದ ಆಯನೂರು ಮಂಜುನಾಥ್

"ಕರ್ನಾಟಕದಲ್ಲೂ ಬದಲಾವಣೆ ಆಗುತ್ತದೆ"

"ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಬಗ್ಗೆ ಮಾತನಾಡಿದ ಅವರು, ದೇಶದ ರಾಜಕೀಯದಲ್ಲಿ ಏನು ಬೇಕಾದ್ರು ಆಗಬಹುದು. ಉಪ ಚುನಾವಣೆ ಫಲಿತಾಂಶ ನಂತರ ಕರ್ನಾಟಕದಲ್ಲೂ ಏನೇನು ಬದಲಾವಣೆ ಆಗುತ್ತೆ ನೋಡೋಣ. ಫಲಿತಾಂಶ ಬಂದ ಮೇಲೆ ಸೋನಿಯಾ ಗಾಂಧಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದನ್ನು ನೋಡೋಣ. ಮಹಾರಾಷ್ಟ್ರ, ಗುಜರಾತ್‌ ಬೇರೆ ಕರ್ನಾಟಕ ಬೇರೆ" ಎಂದರು.

English summary
Former Prime Minister HD Deve Gowda alleged that "Chief Minister BS Yeddyurappa is running an election with money",
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X