ಕೇಶವಿನ್ಯಾಸದಲ್ಲಿ ಎಕ್ಸ್‌ಪರ್ಟ್ ನಂಜನಗೂಡಿನ ತ್ರಿನೇತ್ರ!
ಮೈಸೂರು, ಏಪ್ರಿಲ್ 13 : ಈಗ ಫ್ಯಾಷನ್ ಯುಗ.. ಇವತ್ತು ಮಾಡಿದ್ದು ನಾಳೆಗೆ ಹಳತಾಗುತ್ತದೆ. ಏನಾದರೊಂದು ಹೊಸತನ ಮಾಡದೆ ಹೋದರೆ ಔಟ್ ಡೇಟೆಡ್ ಆಗಿಬಿಡುತ್ತೇವೆ. ಟೈಲರ್ ಮತ್ತು ಕ್ಷೌರಿಕರಂತೂ ಹೊಸತನಕ್ಕೆ ಒಗ್ಗಿಕೊಳ್ಳದೆ ಹೋದರೆ ತಮ್ಮ ವೃತ್ತಿಯಲ್ಲಿ ಮುಂದುವರೆಯುವುದು ಅಸಾಧ್ಯ ಎಂಬ ಸ್ಥಿತಿಗೆ ಬಂದು ನಿಂತಿದೆ.
ಇನ್ನು ಸೆಲೆಬ್ರಿಟಿಗಳನ್ನು ಅನುಕರಿಸುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದಾಗಿ ಅವರು ಮಾಡಿದ್ದನ್ನೇ ಇವರು ಮಾಡುತ್ತಾರೆ. ತಾವು ತೊಡುವ ಬಟ್ಟೆಗಳದ್ದು ಒಂದು ರೀತಿಯದ್ದಾದರೆ, ಕಟಿಂಗ್ ಸ್ಟೈಲ್ ಅಂತೂ ದಿನದಿಂದ ದಿನಕ್ಕೆ ಬದಲಾಗುತ್ತಲೇ ಇರುತ್ತದೆ. ಅಮೀರ್ ಖಾನ್, ರಣವೀರ್, ವಿರಾಟ್ ಕೊಹ್ಲಿಗಳೇ ಇಂದಿನ ಯುವಕರಿಗೆ ರೋಲ್ ಮಾಡೆಲ್ಲುಗಳು. [ಎಡವಟ್ಟಾಯ್ತು ತಲೆಕೆಟ್ಟೋಯ್ತು, ಎಡವಟ್ ತಲೆಕಟ್!]

ಕ್ರಿಕೆಟ್ ಆಟಗಾರರು, ಸಿನಿಮಾ ನಟರು ಯಾವ ರೀತಿಯ ಕೇಶವಿನ್ಯಾಸ ಮಾಡಿಸಿಕೊಳ್ಳುತ್ತಾರೋ ಅದೇ ರೀತಿ ನಮಗೂ ಮಾಡಿಕೊಡಿ ಎನ್ನುವವರು ಜಾಸ್ತಿಯಾಗಿರುವುದರಿಂದ ಅದರಂತೆ ವಿನ್ಯಾಸ ಮಾಡುವ ನೈಪುಣ್ಯತೆಯನ್ನು ಕೆಲವರು ಬೆಳೆಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ವಿಭಿನ್ನ ರೀತಿಯಲ್ಲಿ ಕಟಿಂಗ್ ಮಾಡಿ ಎಲ್ಲರನ್ನು ತಮ್ಮ ಸೆಲೂನ್‌ನತ್ತ ಸೆಳೆಯುತ್ತಿದ್ದಾರೆ.
ಶ್ರೀರಂಗಪಟ್ಟಣದ ಬಾಬುರಾಯಕೊಪ್ಪಲು ಗ್ರಾಮದಲ್ಲಿ ಅಂಜಲಿ ಮೆನ್ಸ್ ಬ್ಯೂಟಿ ಪಾರ್ಲರ್ ಎಂಬ ಸೆಲೂನ್ ತೆರೆದಿರುವ ತ್ರಿನೇತ್ರ ಎಂಬ ಯುವಕ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರಿಗೆ ಹೇಗೆ ಬೇಕೋ ಹಾಗೆ ವಿವಿಧ ನಮೂನೆಯ ಕಟಿಂಗ್ ಮಾಡುವ ಮೂಲಕ ಗಮನಸೆಳೆದಿದ್ದಾನೆ. [ವಿಚಿತ್ರಾನ್ನ ಸ್ಪೆಷಲ್ : ಹಜಾಮತ್ ಸೆ ಹಜಾಮತ್ ತಕ್]
ತಲೆಯ ಕೂದಲು, ಗಡ್ಡಗಳಲ್ಲಿ ತನ್ನ ಕೈಚಳಕ ತೋರಿಸುವ ಈತ ಕೂದಲಲ್ಲೇ ಲವ್ ಸಿಂಬಲ್, ಬಾತುಕೋಳಿ ಹೀಗೆ ಹಲವು ಬಗೆಯ ಚಿತ್ತಾರಗಳನ್ನು ಮೂಡಿಸಿ ಯುವಕರನ್ನು ಸೆಳೆಯುತ್ತಿದ್ದಾನೆ. ಈತನ ಕಟಿಂಗ್‌ಗೆ ಫಿದಾ ಆಗಿರುವ ಯುವಕರು, ವಿದ್ಯಾರ್ಥಿಗಳು ಸೆಲೂನ್‌ಗೆ ಮುಗಿ ಬೀಳುತ್ತಿದ್ದಾರೆ. ಸುಮಾರು 20 ರೀತಿಯ ಕಟಿಂಗ್ ಮಾಡುವುದರಲ್ಲಿ ಈತ ನಿಸ್ಸೀಮ. [ಅಮೇರಿಕಾದ ಸ್ವಾರಸ್ಯಗಳು - ಹೇರ್ ಕಟಿಂಗ್]
ಬೆಂಗಳೂರಿನಲ್ಲಿ ಕೆಲಸ ಕಲಿತು ಬಂದಿರುವ ತ್ರಿನೇತ್ರ ಅದರ ಪ್ರಯೋಗವನ್ನು ಮೊದಲಿಗೆ ತಮ್ಮೂರಿನಲ್ಲಿ ಮಾಡಿದಾಗ ಕೆಲವರು ವ್ಯಂಗ್ಯವಾಡಿದರು. ಆದರೆ ಸೆಲೆಬ್ರಿಟಿಗಳು ಅಂಥ ಕಟಿಂಗ್‌ನಲ್ಲಿ ಮಿಂಚುವುದನ್ನು ನೋಡಿದ ಹುಡುಗರು ನಮಗೂ ಅದೇ ರೀತಿ ಮಾಡಿಕೊಡುವಂತೆ ಸೆಲೂನ್‌ನತ್ತ ಬರತೊಡಗಿದರು. ಅವರ ಇಚ್ಛೆಯನುಸಾರ ಕಟಿಂಗ್ ಮಾಡುತ್ತಾ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದರಿಂದ ಈಗ ಯಶಸ್ವಿಯಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. [ಮೋದಿ ಹೇರ್ ಸ್ಟೈಲಿಗೂ 'ಕೈ'ಹಾಕಿದ ಕಾಂಗ್ರೆಸ್]
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications