ಮೈಸೂರಿನಲ್ಲಿ ದೇವೇಗೌಡ, ಹೆಚ್ ವಿಶ್ವನಾಥ್ ದಿಢೀರ್ ಭೇಟಿ
ಮೈಸೂರು, ಜೂನ್ 30 : ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಂಸದ ಅಡಗೂರು ಎಚ್. ವಿಶ್ವನಾಥ್ ಮೈಸೂರಿನಲ್ಲಿ ದಿಢೀರ್ ಭೇಟಿಯಾಗಿದ್ದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ,.ಎಸ್ ರಂಗಪ್ಪ ಅವರ ಬೋಗಾಧಿ ಬಡಾವಣೆಯಲ್ಲಿರುವ ನಿವಾಸದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಂಸದ ವಿಶ್ವನಾಥ್ ಗುರುವಾರ ಸಂಜೆ ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದರು.

ಮುಂದೆ ಯಾವ ರೀತಿಯ ರಾಜಕೀಯ ನಡೆಯನ್ನು ಹೊಂದಬೇಕೆನ್ನುವ ಕುರಿತು ಇಬ್ಬರೂ ಸುದೀರ್ಘ ಚರ್ಚೆ ನಡೆಸಿದರು. ಹುಣಸೂರು ಪಟ್ಟಣದಲ್ಲಿ ಗುರುವಾರ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯ ಬಳಿಕ ವಿಶ್ವನಾಥ್ ಅವರು ದೇವೇಗೌಡರನ್ನು ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ.












Click it and Unblock the Notifications