ಬಿಜೆಪಿ ಪಕ್ಷಕ್ಕೆ ಕಂಬಳಿ ಹಾಸಿದ ಕುಮಾರಸ್ವಾಮಿ; ಹೆಚ್. ವಿಶ್ವನಾಥ್

ಮೈಸೂರು, ಫೆಬ್ರವರಿ 1 : "ನಾನು ಟವೆಲ್ ಹಾಸಿದರೆ ನೀನು ರಗ್ಗನ್ನು ಹಾಸುತ್ತಿದ್ದಿಯಲ್ಲಪ್ಪ. ಬಿಜೆಪಿ ಪಕ್ಷಕ್ಕೆ ನೀನು ಕಂಬಳಿಯನ್ನೇ ಹಾಕಿದ್ದಿಯಲ್ಲಪ್ಪ" ಎಂದು ಬಿಜೆಪಿ ನಾಯಕ ಹೆಚ್. ವಿಶ್ವನಾಥ್ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಸೋಮವಾರ ಮೈಸೂರಿನಲ್ಲಿ ಹೆಚ್. ವಿಶ್ವನಾಥ್ ಪತ್ರಿಕಾಗೋಷ್ಠಿ ನಡೆಸಿದರು. "ಇನ್ನೊಂದು ಪಕ್ಷ ಇದ್ದರೆ ಅದಕ್ಕೂ ಹೆಚ್. ವಿಶ್ವನಾಥ್ ಟವೆಲ್ ಹಾಕುತ್ತಿದ್ದರು" ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.

"ನಾನು ಟವಲ್ ಹಾಸಿದರೆ ನೀನು ರಗ್ಗನ್ನೇ ಹಾಸುತ್ತಿದ್ದಿಯಲ್ಲಪ್ಪ. ಬಿಜೆಪಿ ಪಕ್ಷಕ್ಕೆ ನೀನು ಕಂಬಳಿಯನ್ನೇ ಹಾಕಿದ್ದಿಯಲ್ಲಪ್ಪ" ಎಂದು ಎಚ್. ಡಿ. ಕುಮಾರಸ್ವಾಮಿ ವಿರುದ್ದ ಏಕವಚನದಲ್ಲೇ ತಿರುಗೇಟು ನೀಡಿದರು.

 H Vishwanath Verbal Attack On HD Kumaraswamy

"ಸಿದ್ದರಾಮಯ್ಯ ಜೆಡಿಎಸ್ ಪಕ್ಷ ಪಕ್ಷವೇ ಅಲ್ಲ ಎಂದು ಹೇಳಿದ್ದಾರೆ. ಇತ್ತ ಕುಮಾರಸ್ವಾಮಿ ನಾನು ಸಮ್ಮಿಶ್ರ ಸರ್ಕಾರದಲ್ಲಿ ಕ್ಲರ್ಕ್‌ ಆಗಿದ್ದೆ ಎಂದಿದ್ದಾರೆ. ಇದರಲ್ಲೆ ಗೊತ್ತಾಗುತ್ತೆ ಸಮ್ಮಿಶ್ರ ಸರ್ಕಾರ ಬಿಳೋಕೆ ನಾವ್ಯಾರು ಕಾರಣರಲ್ಲ ಅಂತ?" ಎಂದರು.

"ಹಳ್ಳಿಯ ಗಾದೆಯಂತೆ ಕಂತೆಗೆ ತಕ್ಕ ಬೊಂತೆ ಎಂಬಂತೆ ಅವರವರ ಆರೋಪ ಪ್ರತ್ಯಾರೋಪದಿಂದಲೇ ಸಮ್ಮಿಶ್ರ ಸರ್ಕಾರ ಉರುಳಿತು. ಸಗಣಿ ಹಾಗೂ ಹುಲ್ಲು ಗಾಡಿಯನ್ನ ಎತ್ತಿಕೊಂಡು ಚಿನ್ನ ಇದೆ ಅಂತ ಊರಾಚೆ ಹೋಗಿದ್ರಂತೆ. ಬೆಳಗ್ಗೆ ಎದ್ದು ನೋಡಿದಾಗ ಒಂದು ಗಾಡಿಯಲ್ಲಿ ಸಗಣಿ ಇನ್ನೊಂದು ಗಾಡಿಯಲ್ಲಿ ಹುಲ್ಲಿನ ಸೋಪ್ಪು ಇತ್ತಂತೆ. ಇವರ ಕಥೆಯೂ ಹಾಗೇ ಇದೆ" ಎಂದು ಲೇವಡಿ ಮಾಡಿದರು.

"ಸಮ್ಮಿಶ್ರ ಸರ್ಕಾರದಲ್ಲಿ ಯಾರು ಯಾರಿಗೆ ಎಷ್ಟು ಗೌರವ ಇತ್ತು?. ಯಾರ್ಯಾರು ಹೇಗೆ ನಡೆದುಕೊಳ್ಳುತ್ತಿದ್ದರು ಅಂತ ಅವರೇ ಸತ್ಯ ಹೇಳುತ್ತಿದ್ದಾರೆ. ಈ ಸತ್ಯ ಕೇಳಿ ನನಗೆ ಬಹಳ ಸಂತೋಷ ಆಗುತ್ತಿದೆ" ಎಂದು ವಿಶ್ವನಾಥ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+