ಮದ್ಯ ಮಾರಾಟ ಮಾಡಿ ಎಂದು ಸರ್ಕಾರಕ್ಕೆ ಎಚ್ ವಿಶ್ವನಾಥ್ ಮನವಿ
ಮೈಸೂರು, ಏಪ್ರಿಲ್ 22: ಮದ್ಯ ಮಾರಾಟ ನಿಷೇಧದ ಬಗ್ಗೆ ಮಾಜಿ ಸಚಿವ ಎಚ್ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿವಾಹಿನಿಯೊಂದರ ಜೊತೆಗೆ ಈ ಬಗ್ಗೆ ಮಾತನಾಡಿರುವ ಅವರು ವಾರದಲ್ಲಿ ಎರಡು ದಿನ ಮದ್ಯ ಮಾರಾಟ ಮಾಡಬೇಕು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮದ್ಯ ವ್ಯಸನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ನಡೆಯುತ್ತಿದ್ದು, ಮದ್ಯ ಮಾರಾಟ ಮಾಡುವುದರಿಂದ ಇದನ್ನು ತಪ್ಪಿಸಬಹುದು ಎಂದು ಅವರು ಹೇಳಿದ್ದಾರೆ. ವಾರದಲ್ಲಿ ಎರಡು ದಿನ ಎಲ್ಲ ಬಾರ್, ವೈನ್ ಶಾಪ್‌ಗಳನ್ನು ತೆರೆದು, ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಕು ಎಂದಿದ್ದಾರೆ.
ಇಂದು ಬಾರ್‌ಗಳು ಕಳ್ಳತನ ಆಗುತ್ತಿದೆ. ಮಾಲೀಕರು ತಮ್ಮ ಬಾರ್ ಅನ್ನು ತಾವೇ ಕಳ್ಳತನ ಮಾಡಿಸುವ ಸಂದರ್ಭ ಬಂದಿದೆ. ಕಳ್ಳ ಸಂತೆಯಲ್ಲಿ ಮದ್ಯ ಮಾರಾಟ ಆಗುತ್ತಿದೆ. ಹೀಗಾಗಿ ಸರ್ಕಾರ ವಾರದಲ್ಲಿ ಎರಡು ದಿನ ಮದ್ಯ ಮಾರಾಟ ಮಾಡುವುದಕ್ಕೆ ಅನುಮತಿ ನೀಡಬಹುದು ಎಂದು ಎಚ್ ವಿಶ್ವನಾಥ್ ಮನವಿ ಮಾಡಿದ್ದಾರೆ.

ಲಾಕ್‌ಡೌನ್ ಘೋಷಣೆ ಆದ ದಿನದಿಂದ ಕರ್ನಾಟಕದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ತರಲಾಗಿದೆ. ಮೇ 3ರ ವರೆಗೆ ರಾಜ್ಯದಲ್ಲಿ ಮದ್ಯ ಸಿಗುವುದಿಲ್ಲ ಎಂದು ಸರ್ಕಾರ ತಿಳಿಸಲಾಗಿದೆ. ಸರ್ಕಾರ ನಿರ್ಧಾರ ಮದ್ಯ ಪ್ರಿಯರಿಗೆ ಬೇಸರ ಉಂಟು ಮಾಡಿದೆ.
ಕರ್ನಾಟಕ ಮಾತ್ರವಲ್ಲದೆ ದೇಶದ ಬಹುತೇಕ ರಾಜ್ಯಗಳಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಹೀಗಾಗಿ ಮದ್ಯ ವ್ಯಸನಿಗಳ ಆತ್ಮಹತ್ಯೆ ಘಟನೆ ನಡೆಯುತ್ತಿದೆ.












Click it and Unblock the Notifications