ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಭೂ ಹಗರಣ; ಹೊಸ ಬಾಂಬ್ ಸಿಡಿಸಿದ ವಿಶ್ವನಾಥ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 11; ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವರ್ಗಾವಣೆ ಬಳಿಕ ಭೂ ಹಗರಣದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇದರ ನಡುವೆಯೇ ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೊಸ ಬಾಂಬ್ ಸಿಡಿಸಿದರು.

ಮೈಸೂರಿನ ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಶುಕ್ರವಾರ ಮಾತನಾಡಿದ ಎಚ್. ವಿಶ್ವನಾಥ್, ಮೈಸೂರಿನಲ್ಲಿ ನಡೆದಿರುವ ಭೂ ಹಗರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ರಕ್ಷಿಸುವ ಹುನ್ನಾರ ನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಭೂ ಹಗರಣದ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಮೈಸೂರು: ಪಾಲಿಕೆ ಆಯುಕ್ತರ ರಾಜೀನಾಮೆ ಹಿಂದಿದ್ಯಾ ಭೂ ಕಬಳಿಕೆದಾರರ ಸಂಚು ಮೈಸೂರು: ಪಾಲಿಕೆ ಆಯುಕ್ತರ ರಾಜೀನಾಮೆ ಹಿಂದಿದ್ಯಾ ಭೂ ಕಬಳಿಕೆದಾರರ ಸಂಚು

"ಭೂ ಹಗರಣದಲ್ಲಿ ತಪ್ಪಿತಸ್ಥರನ್ನು ರಕ್ಷಿಸುವ ಹುನ್ನಾರ ನಡೆದಿದೆ. ಪ್ರಾದೇಶಿಕ ಆಯುಕ್ತರು ಹಾಗೂ ಕಳಂಕಿತರ ನಡುವೆ ಒಪ್ಪಂದ ಆಗಿದೆ. ನಿನ್ನೆ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಹೈಡ್ರಾಮ ನಡೆದಿದೆ. ಶಾಸಕರು ಹೋಗಿ ಪ್ರತಿಭಟನೆ ಮಾಡಿದ ಹಾಗೆ. ಪ್ರಾದೇಶಿಕ ಆಯುಕ್ತರು ಬಂದು ಮನವಿ ಸ್ವೀಕರಿಸದ ಹಾಗೆ ಡ್ರಾಮಾ ನಡೆದಿದೆ" ಎಂದು ವಾಗ್ದಾಳಿ ನಡೆಸಿದರು.

Breaking; ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆBreaking; ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ

; H Vishwanath Demands Probe Into Mysuru Land Scam

"ಶಾಸಕರಿಂದ ಮನವಿ ಸ್ವೀಕರಿಸಿದ ಪ್ರಾದೇಶಿಕ ಆಯುಕ್ತರು ಮೂರು ದಿನಗಳಲ್ಲಿ ತನಿಖೆ ಮಡೆಸುವುದಾಗಿ ತಿಳಿಸಿದ್ದಾರೆ. ಪ್ರಾದೇಶಿಕ ಆಯುಕ್ತರ ಈ ನಡೆ ಅನುಮಾನ ಮೂಡಿಸುತ್ತಿದ್ದು, ಕಳಂಕಿತರನ್ನು ಬಚಾವು ಮಾಡುವ ಕೆಲಸ ನಡೆಯುತ್ತಿದೆ. ಮನವಿ ಸ್ವೀಕರಿಸಿ ಪರಿಶೀಲನೆ ನಡೆಸುತ್ತೇನೆ ಎನ್ನಬೇಕು. ಆದರೆ ಸ್ಥಳದಲ್ಲೇ ಸಮಿತಿ ರಚನೆ ಮಾಡಿ ಮೂರು ದಿನಗಳಲ್ಲಿ ತನಿಖೆ ಮಾಡಿಸುತ್ತೇನೆ ಎಂದಿದ್ದಾರೆ. ಈಗಾಗಲೇ ವರದಿ ರೆಡಿ ಮಾಡಿಕೊಂಡಿದ್ದಾರೆ" ಎಂದು ದೂರಿದರು.

ರೋಹಿಣಿ ಸಿಂಧೂರಿ, ಸಾ. ರಾ. ಮಹೇಶ್ ಜಟಾಪಟಿ; ಸ್ಪೋಟಕ ಆಡಿಯೋ ರೋಹಿಣಿ ಸಿಂಧೂರಿ, ಸಾ. ರಾ. ಮಹೇಶ್ ಜಟಾಪಟಿ; ಸ್ಪೋಟಕ ಆಡಿಯೋ

"ಸೋಮವಾರ ವರದಿಯನ್ನು ಸಹ ಕೂಡಾ ಸಲ್ಲಿಸಲಿದ್ದಾರೆ. ಪ್ರಾದೇಶಿಕ ಆಯುಕ್ತರ ಕಾರ್ಯವೈಖರಿ ನೋಡಿ ಜನ ಬೆರಗಾಗಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ ನಿನ್ನೆ ನಡೆಸಲಾದ ಪ್ರತಿಭಟನೆ ಸಂಪೂರ್ಣ ಹೈಡ್ರಾಮವಾಗಿದ್ದು, ಒಬ್ಬರಿಗೊಬ್ಬರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ" ಎಂದು ಶಾಸಕರು ಹಾಗೂ ಪ್ರಾದೇಶಿಕ ಆಯುಕ್ತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

"ಪ್ರಾದೇಶಿಕ ಆಯುಕ್ತರು ಹಾಗೂ ಶಾಸಕರು ಕೇವಲ ಸಾ.ರಾ. ಕಲ್ಯಾಣ ಮಂಟಪ ಒಂದು ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಇನ್ನುಳಿದ ನಾಲ್ಕು ಪ್ರಕರಣಗಳ ಕಥೆ ಏನು? ಪ್ರಾದೇಶಿಕ ಆಯುಕ್ತರು ಸಾ. ರಾ. ಚೌಲ್ಟ್ರಿಯಲ್ಲಿ ರಾಜಕಾಲುವೆ ಒತ್ತುವರಿ ಆಗಿಲ್ಲ ಅಂತ ವರದಿ ಕೊಡುತ್ತಾರೆ. ಅದನ್ನೇ ಮುಂದಿಟ್ಟುಕೊಂಡು ನಾನು ನಿಷ್ಕಳಂಕಿತ ಅಂತ ಸಾರಿಕೊಂಡು ಓಡಾಡುತ್ತಾರೆ. ಆ ಮೂಲಕ ಉಳಿದ ಪ್ರಕರಣಗಳನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ" ಎಂದರು.

"ಹಿಂದಿನ ಜಿಲ್ಲಾಧಿಕಾರಿ ಆಗಿದ್ದ ರೋಹಿಣಿ ಸಿಂಧೂರಿ ನೀಡಿದ್ದ ನಾಲ್ಕು ಪ್ರಕರಣಗಳ ಬಗ್ಗೆಯೂ ತನಿಖೆ ಆಗಬೇಕು. ಆರ್. ಟಿ. ನಗರ, ಲಿಂಗಾಂಬುದಿ ಕೆರೆ ಜಾಗಗಳ ಬಗ್ಗೆಯೂ ತನಿಖೆ ಆಗಬೇಕು. ಎಲ್ಲಾ ನಾಲ್ಕು ಪ್ರಕರಣಗಳ ಬಗ್ಗೆಯೂ ತನಿಖೆ ಆಗಬೇಕು" ಎಂದು ವಿಶ್ವನಾಥ್ ಆಗ್ರಹಿಸಿದರು.

English summary
BJP leader and MLC H. Vishwanath demanded probe into the alleged land scam in Mysuru. Land scam in news after IAS officers Rohini Sindhuri transfer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X