ವರುಣಾದಲ್ಲಿ ವಿಜಯೇಂದ್ರಗೇ ಟಿಕೆಟ್ ಕೊಡಿ: ಜಿಟಿ ದೇವೇಗೌಡ ಒತ್ತಾಯ

Recommended Video

      Karnataka Elections 2018 : ಬಿ ಎಸ್ ವೈ ಮಗ ಬಿ ವೈ ವಿಜಯೇಂದ್ರರನ್ನ ಬೆಂಬಲಿಸಿದ ಜಿ ಟಿ ದೇವೇಗೌಡ

      ಮೈಸೂರು, ಏಪ್ರಿಲ್ 24: "ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನೀಡಬೇಕು" ಎಂದು ಜೆಡಿಎಸ್ ನಾಯಕ, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ ಟಿ ದೇವೇಗೌಡ ಒತ್ತಾಯಿಸಿದ್ದಾರೆ.

      ಕರ್ನಾಟಕ ವಿಧಾನಸಭೆ ಚುನಾವಣೆ(ಮೇ.12) ಗೆ ಇನ್ನು ಕೆಲವೇ ದಿನ ಬಾಕಿ ಇರುವ ಹೊತ್ತಲ್ಲಿ ಪ್ರತಿಸ್ಪರ್ಧಿ ಪಕ್ಷದ ನಾಯಕರೊಬ್ಬರು ಇಂಥ ಹೇಳಿಕೆ ನೀಡಿದ್ದು ನಿಜಕ್ಕೂ ಅಚ್ಚರಿ ಮೂಡಿಸಿದೆ.

      ವಿಜಯೇಂದ್ರ ಅವರ ಬೆಂಬಲಿಗರು ಮತ್ತು ಕಾರ್ಯಕರ್ತರು ಅವರನ್ನು ವರುಣಾ ಕ್ಷೇತ್ರದ ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಶ್ರೀನಿವಾಸ್ ಪ್ರಾದ್ ಅವರು ಹೈಕಮಾಂಡ್ ಮೇಲೆ ಒತ್ತಡ ಹೇರಿ ಟಿಕೇಟ್ ಕೊಡಿಸಬೇಕು. ಗಲಾಟೆ ಮಾಡಿಯಾದ್ರೂ ವಿಜಯೇಂದ್ರ ಅವರಿಗೆ ಟಿಕೇಟ್ ಕೊಡಿಸಬೇಕು ಎಂದು ಅವರು ಹೇಳಿದರು.

      GT Devegowda supports BY Vijayendra as BJP candidate for Varuna

      "ವರುಣಾದಲ್ಲಿ ಜೆಡಿಎಸ್ ಅಧ್ಯಕ್ಷ ನನ್ನ‌ ಮಗನ ಸ್ಪರ್ಧೆ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಅಲ್ಲೇ ಸಮರ್ಥ ಅಭ್ಯರ್ಥಿ ಇದ್ದಾರೆ. ಹೀಗಾಗಿ ಯೋಚನೆ ಮಾಡ್ತಿವಿ. ನನಗೆ ಒಂದು ಗಂಟೆ ಸಮಯ ಕೊಡಿ" ಎಂದು ಅವರು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+