ಕೈ ಕಾರ್ಯಕರ್ತರ ವಿರುದ್ಧ ಗರಂ ಆದ ವಿಚಾರಕ್ಕೆ ಸ್ಪಷ್ಟನೆ ಕೊಟ್ಟ ಜಿಟಿಡಿ

ಮೈಸೂರು, ಫೆಬ್ರವರಿ 22:ಸಚಿವ ಜಿಟಿ ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದ ಕೈ ಕಾರ್ಯಕರ್ತರಿಗೆ ಆವಾಜ್ ಹಾಕಿದ ಘಟನೆ ನಿನ್ನೆ ಗುರುವಾರ (ಫೆ.22) ನಡೆದಿತ್ತು.

ಈ ಹಿನ್ನೆಲೆಯಲ್ಲಿ ಇಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಿಟಿಡಿ, ನಾನು ಅಲ್ಲಿಗೆ ಹತ್ತಕ್ಕೂ ಹೆಚ್ಚು ಭಾರೀ ಹೋಗಿದ್ದೇನೆ.ಅಭಿವೃದ್ಧಿ ಆಗಬೇಕೆಂದೇ ನಾನು ಅಲ್ಲಿಗೆ ಶಂಕು ಸ್ಥಾಪನೆಗೆ ಹೋಗಿದ್ದೆ. ಅದು ಮುಡಾ ವ್ಯಾಪ್ತಿಗೆ ಬರುವ ಹಿನ್ನಲೆಯಲ್ಲಿ ನಾವು ಅದನ್ನ ಅಭಿವೃದ್ಧಿಪಡಿಸುತ್ತಿದ್ದೇವೆ. ಆದರೆ ಡ್ರೈನೇಜ್ ಇಲ್ಲ, ಸಮಸ್ಯೆ ಆಲಿಸಿ ಎಂದು ಬಂದಿದ್ದರು. ಸಮಸ್ಯೆಗೆ ಮುಕ್ತಿ ಕೊಡಲು ಹೋದಾಗ ಈ ಮಾತುಗಳು ಬೇಕಿರಲಿಲ್ಲ ಎಂದು ಜಿಟಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ನಾಳೆ ಮೈಸೂರು ಜಿ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮುಂದುವರಿಸಲು ಜೆಡಿಎಸ್ ಉತ್ಸುಕತೆ‌ ತೋರಿದ್ದು, ಜೆಡಿಎಸ್ ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಬಿಜೆಪಿ ಜೊತೆ ಹೋಗಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.

GT Deve Gowda now clarified about angered against congress activists

ಇದು ಇಂದು ಮಾಡಿಕೊಂಡು ತೀರ್ಮಾನವಲ್ಲ, ಈ ಹಿಂದೆಯೇ ಮಾಡಿಕೊಂಡ ತೀರ್ಮಾನ. ಹಾಗಾಗಿ ಬಿಜೆಪಿ ಜೊತೆ ಹೋಗುತ್ತಿದ್ದೇವೆ.ಜೆಡಿಎಸ್ ಸಭೆ ವೇಳೆ ನಮ್ಮೆಲ್ಲ ಸದಸ್ಯರು ಬಿಜೆಪಿ ಜೊತೆ ಹೋಗಲು ಒಪ್ಪಿದ್ದಾರೆ. ಹಾಗಾಗಿ ಜಿ.ಪಂ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂದು ಜಿಟಿಡಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+